Bengaluru is Closed: ಭಾಷೆ ಕಲಿಯದ ಕನ್ನಡೇತರರ ವಿರುದ್ಧದ ಪೋಸ್ಟ್ ವೈರಲ್, ವ್ಯಾಪಕ ಪ್ರತಿಕ್ರಿಯೆ

ಬೆಂಗಳೂರು, ಜನವರಿ 26: ಕನ್ನಡ ನೆಲದಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಗೌರವ ಕೊಡದ, ಕನ್ನಡ ಕಲಿಯದ ಅದೆಷ್ಟೋ ಕನ್ನಡೇತ ಜನರು ಬೆಂಗಳೂರಿನಲ್ಲಿದ್ದಾರೆ. ಇದರ ವಿರುದ್ಧ ಆನ್‌ಲೈನ್‌ನಲ್ಲಿ ಅಭಿಯಾನ ಆರಂಭವಾಗಿದೆ. ಕನ್ನಡ ಕಲಿಯದ ಉತ್ತರ ಭಾರತ ಮತ್ತಿತರ ರಾಜ್ಯದವರಿಗೆ 'ಬೆಂಗಳೂರು ಬಂದ್' ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಕನ್ನಡೇತರರ ವಿರುದ್ಧ ಕನ್ನಡಿಗರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಗೌರವಿಸದ, ನಮ್ಮ ಭಾಷೆ ಕಲಿಯದವರಿಗೆ 'ಬೆಂಗಳೂರಿಗೆ ಪ್ರವೇಶ ಇಲ್ಲ- Bengaluru Is Closed' ಬರಹದ ಪೋಸ್ಟ್ ಅನ್ನು 'ಬಬ್ರುವಾಹನ' ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈವರೆಗೆ 1.27 ಲಕ್ಷ ಮಂದಿ ಈ ಪೋಸ್ಟ್ ನೋಡಿದ್ದಾರೆ. 282 ಬಾರಿ ರಿಪೋಸ್ಟ್ ಆಗಿದ್ದು, 820ಕ್ಕೂ ಹೆಚ್ಚು ಕಾಮೆಂಟುಗಳು ಈ ಪೋಸ್‌ಗೆ ಬಂದಿವೆ.

Bengaluru is Closed post Viral Against Non Kannadigas North Indian People

ಬಸವನಗುಡಿ ಅಂಚೆ ಕಚೇರಿಯಲ್ಲಿ ಮೂವರು ಅಧಿಕಾರಿಗಳು ವರ್ಷಗಟ್ಟಲೇ ಈ ನೆಲದಲ್ಲಿದ್ದ ಒಂದಕ್ಷರ ಕನ್ನಡ ಬರುವುದಿಲ್ಲ. ಈ ಬಗ್ಗೆ ವಾಗ್ವಾದ ನಡೆದ ವಿಡಿಯೋ ವೈರಲ್ ಆಗಿತ್ತು. ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನೂ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಕಾರ್ಯಕ್ರಮವೊಂದರಲ್ಲಿ ತೆಲುಗು ಹೆಸರಿನ ದೊಡ್ಡ ಬ್ಯಾನರ್ ಹಾಕಲಾಗಿತ್ತು. ಅದರಲ್ಲಿ ಸಣ್ಣಕ್ಷರದಲ್ಲಿ ಇಂಗ್ಲಿಷ್‌ಗೂ ಸ್ಥಾನ ಸಿಕ್ಕಿದೆ. ದೊಡ್ಡದಾಗಿ ತೆಲುಗು ಅಕ್ಷರಗಳನ್ನು ಬರೆಸಲಾಗಿದೆ. ಆದರೆ ಕನ್ನಡಕ್ಕೆ ಜಾಗವೇ ಇಲ್ಲದಂತಾಗಿದೆ.

ಈ ಘಟನೆಗಳ ಜೊತೆ ಜೊತೆಗೆ ಕನ್ನಡೇತರರಿಗೆ, ಕನ್ನಡ ಕಲಿಯದವರೆಗೆ ಬೆಂಗಳೂರು ಬಂದ್ ಆಗಿದೆ ಎಂಬ ಪೋಸ್ಟ್ ವೈರಲ್ ಆಗಿದೆ. ಇಲ್ಲಿಗೆ ಬದುಕು ಕಟ್ಟಿಕೊಳ್ಳಲು ಬಂದು ಎಷ್ಟೋ ವರ್ಷಗಳಾದರೂ ಕನ್ನಡ ಕಲಿಯದವರ ವಿರುದ್ಧ, ಕನ್ನಡ ಭಾಷೆ ಬಗ್ಗೆ ಪ್ರೀತಿ ಇಲ್ಲದವರ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಅವರಿಗೆ ಇಲ್ಲಿ ಜಾಗವಿಲ್ಲ ಎಂದು ಎಚ್ಚರಿಸಿದ್ದಾರೆ.

ಇನ್ನೂ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ, ಬೆಂಗಳೂರಿಗೆ ವಲಸೆ ಬಂದವರು ಎಂಬ ಪದ ತುಸು ಹೆಚ್ಚೆನಿಸುತ್ತದೆ. ಆದರೆ ಬೆಂಗಳೂರಿನಲ್ಲಿದ್ದುಕೊಂಡು ಇಲ್ಲಿನ ಹೆಮ್ಮೆಯ ಭಾಷೆ ನೋಡುವ ರೀತಿ ತೀವ್ರ ನೋವು ತರಿಸುತ್ತದೆ. ಬದುಕು ಕಟ್ಟಿಕೊಳ್ಳಲು ಇಲ್ಲಿ ಬಂದವರಲ್ಲಿ ಕೆಲವು ಕನ್ನಡ ಭಾಷೆಯನ್ನು ಬುಡಕಟ್ಟು ಭಾಷೆಯನ್ನಾಗಿ ನೋಡುತ್ತಾರೆ ಎಂದು ಕಾಮೆಂಟ್‌ನಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಕನ್ನಡ ನೆಲದಲ್ಲಿ ಕನ್ನಡ ಕಡೆಗಣಿಸಲಾಗುತ್ತಿದೆ. ನಮ್ಮ ಭಾಷೆ ಮೇಲೆ ಸಾಕಾರಾತ್ಮಕ ಭಾವನೆ ಮೂಡಿಸುವುದು ಕರ್ತವ್ಯ. ಕನ್ನಡ ಬಗ್ಗೆ ನಕಾರಾತ್ಮಕ ಆಲೋಚನೆ ತೊಡೆದು ಹಾಕಬೇಕಿದೆ. ನಮ್ಮ ಭಾಷೆ ಬಗ್ಗೆ ಆತ್ಮಾಭಿಮಾನ ತೋರ್ಪಡಿಸುವುದು ಹೆಮ್ಮೆಯ ವಿಷಯವೇ. ನಮ್ಮ ಭಾಷೆ ನಮ್ಮ ಗರ್ವ. ಕನ್ನಡ ಬಗ್ಗೆ ಉತ್ತರ ಭಾರತದವರು, ಇತರ ರಾಜ್ಯಗಳ ಮಂದಿ ಇಷ್ಟೆಲ್ಲ ಅಗೌರವ ತೋರಿದರು ನೋಡಿಕೊಂಡು ಕೂತಿರುವ ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಕಿಡಿ ಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+