Bengaluru Airport: ಏರ್‌ಪೋರ್ಟ್ ನಾಮಫಲಕದಲ್ಲಿ ಕನ್ನಡ ಬಳಕೆ, ಹಿಂದಿ ಬಿಟ್ಟಿದ್ದಕ್ಕೆ ವಿರೋಧ, ಮಿಶ್ರ ಪ್ರತಿಕ್ರಿಯೆ
ಬೆಂಗಳೂರು, ಏಪ್ರಿಲ್ 13: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಇತ್ತೀಚೆಗಷ್ಟೇ ತನ್ನ ವೆಬ್‌ಸೈಟ್‌ನಲ್ಲಿ ಕನ್ನಡ ಭಾಷೆ ಬಳಕೆ ಘೋಷಣೆ ಮಾಡಿದೆ. ಈ ನೆಲದ ಮಾಲ್ಯ, ಭಾಷೆ, ಸಂಸ್ಕೃತಿ ಎತ್ತಿಹಿಡಿಯವು ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಇದರ ಬೆನ್ನಲ್ಲೆ ವಿಮಾನಗಳ ಮಾರ್ಗ, ಸಂಚಾರ ಕುರಿತ ನಾಮಫಲಕದಲ್ಲೂ ಕನ್ನಡಕ್ಕೆ ಆದ್ಯತೆ ನೀಡಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಮಾತ್ರವೇ ಪ್ರದರ್ಶನ ಮಾಡುತ್ತಿರುವುದು ಮತ್ತೊಂದು ಹಂತದ ಭಾಷಾ ವಿವಾದಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ತಮಿಳುನಾಡಿನಲ್ಲಿ ತಮಿಳು, ಆಂಧ್ರ ಪ್ರದೇಶದಲ್ಲಿ ತೆಲುಗು ಇರುವಂತೆ ಕರ್ನಾಟಕದಲ್ಲಿ ನಮ್ಮ ಕನ್ನಡ ಭಾಷೆ ಸಾರ್ವಭಾಮವಾಗಲಿ ಬಿಡಿ ಎನ್ನವುದು ತಪ್ಪಲ್ಲ. ಅದನ್ನೆ ಮಾಡಿದರೂ ಸಹ ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಹಿಂದಿಯನ್ನು ಕಡೆಗಣಿಸಿದ್ದೀರಿ ಇದು ಸರಿಯಲ್ಲ ಎಂದು ದೂರಿದ್ದಾರೆ. ಮೊದಲಿನಿಂದಲೂ ಪರೀಕ್ಷೆ, ನೇಮಕಾತಿ ಮುಂತಾದ ಕಡೆಗಳಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪ ಇದೆ. ಇದೀಗ ಹಿಂದಿ ಬಳಕೆ ಬಿಟ್ಟರೂ ಸಮಸ್ಯೆ ಆಗುತ್ತಿದೆ ಎಂಬ ಚರ್ಚೆ ಹುಟ್ಟು ಹಾಕಲಾಗಿದೆ.

ಏರ್‌ಪೋರ್ಟ್ ನಾಮಫಲಕಗಳ ಫೋಟೋ
ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣದ ಪ್ರದರ್ಶನ ಫಲಕಗಳಿಂದ ಹಿಂದಿಯನ್ನು ತೆಗೆದು ಹಾಕಲಾಗಿದೆ. ಇದರಿಂದ ಕೆಲವರು ಕೆರಳಿದ್ದಾರೆ ಎನ್ನಲಾಗಿದೆ. ಭಾಷಾ ಸಮಸ್ಯೆ ಉದ್ವಿಗ್ನಗೊಂಡಿದೆ ಎಂದು ಹೇಳಲಾಗುತ್ತಿದೆ. ಹೊಸ ಫಲಕಗಳು ಈಗ ಇಂಗ್ಲಿಷ್ ಮತ್ತು ಕನ್ನಡ ಮಾತ್ರ ಬಳಸಲಾಗಿದೆ. ಇದರಿಂದ ಹಿಂದಿ ಬಳಕೆದಾರರಿಗೆ ಅನ್ಯಾಯವಾಗಿದೆ. ಇದು ಸರಿಯಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಿಟ್ಟುಕೊಂಡಿದ್ದಾರೆ. ಕೆಲವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೋರ್ಟಲ್, ನಾಮಫಲಕದಲ್ಲಿ ಕನ್ನಡ ನೋಡಲು ಎಷ್ಟು ಚೆಂದ ಎಂದು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಸರ್ಕಾರದ ನಿರ್ಧಾರ ಸರಿ ಇಲ್ಲ. ಕನ್ನಡೇತರರಿಗೆ ಇದರಿಂದ ತೊಂದರೆ ಆಗುತ್ತಿದೆ. ಇಲ್ಲಿನ ಪ್ರಾದೇಶಿಕ ಭಾಷೆಯನ್ನು ಉತ್ತೇಜಿಸುವುದು ಮುಖ್ಯವಾಗಿದೆ. ಹಾಗೆಂದ ಮಾತ್ರಕ್ಕೆ ಅಂತಾರಾಷ್ಟ್ರೀಯವ ವಿಮಾನ ನಿಲ್ದಾಣದಲ್ಲಿ ಹಿಂದಿ ಹೊರತಾಗಿ ನಾಮಫಲಕ ಹಾಕುವುದು ಸರಿಯಲ್ಲ ಎಂದು ಕೆಲವರು ದೂರಿದ್ದಾರೆ. ಇನ್ನೂ ಕೆಲವುರ ಈ ನೆಲದ ನಾಡಿನಲ್ಲಿ ಕನ್ನಡ ಬಳಕೆ, ಉತ್ತೇಜನ ತಪ್ಪಲ್ಲ. ಇಲ್ಲಿ ಕನ್ನಡವೇ ಸಾರ್ವಭೌಮ. ಹಿಂದಿಯನ್ನು ಬಳಸದಿರುವ ಕ್ರಮ ಸರಿಯಾಗಿದೆ. ಯಾವುದೇ ತಪ್ಪು ಸಂದೇಶ ರವಾನಿಸಿಲ್ಲ ಎಂದು ಕನ್ನಡಿಗರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಏರ್‌ಪೊರ್ಟ್ ನಿರ್ಧಾರ ಶ್ಲಾಘಿಸಿದ್ದಾರೆ.
ಹಿಂದಿಗೂ ಆದ್ಯತೆ ನೀಡುವಂತೆ ಒತ್ತಾಯ..
ಬೆಂಗಳೂರಿನಂತರ ನಗರದಲ್ಲಿ ವಲಸಿಗರು, ಹೆಚ್ಚಿದ್ದಾರೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಬೇರೆ ರಾಜ್ಯಗಳ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಮೇಲಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿಂದಿ ಇದ್ದರೆ ತಪ್ಪೇನು ಎಂಬುದು ಕೆಲವರ ವಾದವಾಗಿದೆ.
Explore the nine emotions of Naurasa in English and Kannada. Have you toggled yet?#BLRAirport #Kannada #BLRAirportwebsite pic.twitter.com/PHiAsZlZn4
— BLR Airport (@BLRAirport) April 4, 2025
ಹಲವು ಕನ್ನಡೇತರರು, ಹಿಂದಿ ಬೆಂಬಲಿಗರು ಹಿಂದಿಗೂ ಆದ್ಯತೆ ನೀಡುವಂತೆ ಕೇಳಿದ್ದಾರೆ. ಇನ್ನೂ ಕೆಲವರು ರಾಜ್ಯ ಭಾಷೆ ಬಳಕೆ, ಸಂರಕ್ಷಣೆ ಜೊತೆಗೆ ನಮ್ಮ ಭಾಷೆಗೆ ಆದ್ಯತೆ ನೀಡುತ್ತಿದ್ದೇವೆ. ಕರ್ನಾಟಕ ಅದರಲ್ಲೂ ಬೆಂಗಳೂರಿನಲ್ಲೂ ಇದು ಪ್ರಮುಖ ಹೆಜ್ಜೆಯಾಗಿದೆ ಸಮರ್ಥಿಸಿಕೊಂಡಿದ್ದಾರೆ. ಕರ್ನಾಟಕದ ಅಧಿಕೃತ ಭಾಷೆಯಾಗಿರುವ ಕನ್ನಡವು ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ರಾಜ್ಯದೊಳಗೆ ಪ್ರಾಮುಖ್ಯ ಪಡೆಯುವು, ಕಡ್ಡಾಯ ಬಳಕೆಗೆ ಅರ್ಹವಾಗಿದೆ ಎಂದು ಕನ್ನಡಿಗರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಭಾಷಾ ರಾಜಕೀಯ,ಭಾಷೆ ಕುರಿತು ಚರ್ಚೆಗಳು ಇದೇ ಮೊದಲೇನಲ್ಲ. ಕನ್ನಡ ನೆಲದಲ್ಲಿ ಕನ್ನಡ ಬಳಸಬೇಕು. ಬೆಳೆಸಬೇಕು ಎಂಬ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಏರ್‌ಪೋರ್ಟ್‌ನಲ್ಲಿ ಕನ್ನಡ ಬಳಕೆ ಆಗುತ್ತಿರುವುದು, ಏರ್‌ಪೋರ್ಟ್ ವೆಬ್‌ಸೈಟ್‌ನಲ್ಲಿ ಕನ್ನಡ ಬಳಕೆ ಆಗುತ್ತಿರುವುದು ಮಹತ್ವದ ಸಂಗತಿಯಾಗಿದೆ. ಪ್ರಾದೇಶಿಕ ಹೆಮ್ಮೆ ಮತ್ತು ರಾಷ್ಟ್ರೀಯ ಏಕತೆಯ ಮಧ್ಯದ ಸೂಕ್ಷ್ಮ ಸಮತೋಲನ ಎತ್ತಿ ಹಿಡಿದಂತಾಗಿದೆ.
ಈ ನಡುವೆ ಕೆಲವರು ಈ ನಿರ್ಧಾರವನ್ನು ರಾಜ್ಯ ಸರ್ಕಾರ, ಏರ್‌ಪೋರ್ಟ್ ಆಡಳಿತಾಧಿಕಾರಿಗಳು ಪುನಃ ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.












Click it and Unblock the Notifications