Bengaluru D.K. Shivakumar: ಬೆಂಗಳೂರು - ಹೈದರಾಬಾದ್ ಸ್ಪರ್ಧಿಗಳಲ್ಲ.. ಆದರೆ: ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು ?
Bengaluru D.K. Shivakumar: ಬೆಂಗಳೂರಿಗೆ ಕರ್ನಾಟಕದ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜಧಾನಿ ಹಾಗೂ ನಗರಗಳಿಂದ ಪೈಪೋಟಿ ಶುರುವಾಗಿದೆ. ಅದರಲ್ಲೂ ತೆಲಂಗಾಣದ ರಾಜಧಾನಿ ಹೈದರಾಬಾದ್ - ಬೆಂಗಳೂರಿನ ಐಟಿ - ಸಿಲಿಕಾನ್ ಸಿಟಿ ಎನ್ನುವ ಖ್ಯಾತಿಗೆ ಭಾರೀ ಪೈಪೋಟಿ ನೀಡುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿರುವಾಗಲೇ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಮಹತ್ವದ ಮೆಸೇಜ್ ಹಂಚಿಕೊಂಡಿದ್ದಾರೆ.
ಬೆಂಗಳೂರು ಅಭಿವೃದ್ಧಿಯ ವೇಗದಲ್ಲಿದೆ. ಅದರಲ್ಲೂ ಕೆಲವೊಂದು ಆರೋಪ - ಪ್ರತ್ಯಾರೋಪಗಳ ಹೊರತಾಗಿಯೂ ಜಾಗತಿಕವಾಗಿ ಬೆಂಗಳೂರು ಸದಾ ಮುಂಚೂಣಿಯಲ್ಲಿದೆ. ಅದರಲ್ಲೂ ಐಟಿ - ಬಿಟಿಯಲ್ಲಿ ದೇಶದ ರಾಜಧಾನಿಯಾಗಿ ಬೆಂಗಳೂರು ಮುಂದುವರಿಯುತ್ತಿದೆ. ಆದರೆ, ಈಚೆಗೆ ಹೈದರಾಬಾದ್ ನಗರವು ಬೆಂಗಳೂರಿಗೆ ಭಾರೀ ಪೈಪೋಟಿಯನ್ನು ನೀಡುತ್ತಿದೆ. ಅದರಲ್ಲೂ ಐಟಿ ಕ್ಷೇತ್ರದಲ್ಲಿ ಕಳೆದ ಎರಡು ಮೂರು ದಶಕದ ಅವಧಿಯಿಂದಲೂ ಬೆಂಗಳೂರು ಹಾಗೂ ಹೈದರಾಬಾದ್ ನಗರಗಳ ನಡುವೆ ಭಾರೀ ಪೈಪೋಟಿ ಇದೆ.

ಇನ್ನು ಈಚೆಗೆ UnearthIQ ನಡೆಸಿದ ಅಧ್ಯಯನ ವರದಿಯ ವರದಿಯಂತೆ ವೆಚ್ಚದ ಅನುಕೂಲತೆ, ಮೂಲಸೌಕರ್ಯ ಮತ್ತು ಬ್ಯುಸಿನೆಸ್ - ಪ್ರೋ ಪರಿಸರ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳಲ್ಲಿ ಬೆಂಗಳೂರಿಗಿಂತ ಹೈದರಾಬಾದ್ ಪೂರಕವಾಗಿದೆ. ಭಾರತದಲ್ಲಿ GCC ಗಳಲ್ಲಿ ಬೆಂಗಳೂರು ನಗರವನ್ನು ಹೈದರಾಬಾದ್ ಹಿಂದಿಕ್ಕಿತ್ತು. 2025ನೇ ಸಾಲಿನಲ್ಲಿ ಎಲ್ಲಾ ಹೊಸ GCC ಗಳಲ್ಲಿ ಹೈದರಾಬಾದ್ ರಾಜ್ಯವು ಶೇಕಡಾ 46 ರಷ್ಟನ್ನು ಹೊಂದಿದ್ದರೆ, 2025ನೇ ಸಾಲಿನಲ್ಲಿ ಕರ್ನಾಟಕದ ಬೆಂಗಳೂರು 2025ನೇ ಸಾಲಿನ ಜನವರಿ-ನವೆಂಬರ್ ರಲ್ಲಿ ಶೇ33 ರಷ್ಟು Gcc ಹೊಂದಿದೆ ಎಂದು ಹೇಳಲಾಗಿತ್ತು.
ಬೆಂಗಳೂರು - ಹೈದರಾಬಾದ್ ಪರಸ್ಪರ ಸ್ಪರ್ಧಿಸುತ್ತಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್
ಹೈದರಾಬಾದ್ ಮತ್ತು ಬೆಂಗಳೂರು ಪರಸ್ಪರ ಸ್ಪರ್ಧಿಸುತ್ತಿಲ್ಲ, ಬದಲಾಗಿ ಜಾಗತಿಕವಾಗಿ ಪೈಪೋಟಿ ನಡೆಸುತ್ತಿವೆ. ನೀವು ಹೆಚ್ಚು ದೂರ ನಡೆಯಲು ಬಯಸಿದರೆ, ಒಟ್ಟಿಗೆ ನಡೆಯಿರಿ ಮತ್ತು ಎರಡು ನಗರಗಳು ಅದನ್ನೇ ಮಾಡುತ್ತಿವೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ತೆಲಂಗಾಣ ರೈಸಿಂಗ್ 2047 ಗ್ಲೋಬಲ್ ಶೃಂಗಸಭೆ ಅವರು ಬೆಂಗಳೂರು - ಹೈದರಾಬಾದ್ ನಡುವಿನ ಪ್ರಗತಿಯ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಅಭಿನಂದನೆ ಸೂಚಿಸಲು ಇಚ್ಛಿಸುತ್ತೇನೆ. ಅವರು ತೆಲಂಗಾಣದ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರೈಸಿದ್ದಾರೆ. ನನ್ನ ಗೆಳಯನಿಗೆ ಬೆಂಬಲ ಕೊಡುವುದಕ್ಕೆ ಬಂದಿದ್ದೇನೆ. ಅವರು ಇನ್ನಷ್ಟು ಸ್ಟ್ರಾಂಗ್ ಆಗುವುದಕ್ಕೆ ಬೆಂಬಲ ಕೊಡಲು ನಾನಿಲ್ಲಿ ಬಂದಿದ್ದೇನೆ. ತೆಲಂಗಾಣ ಹೆಚ್ಚು ಬೆಳೆಯುತ್ತಿದೆ. ದಕ್ಷಿಣ ಭಾರತದಲ್ಲಿ ಇರುವಷ್ಟು ಮಾನವ ಸಂಪನ್ಮೂಲ ಇನ್ನೇಲ್ಲೂ ಇಲ್ಲ. ಭಾರತದಲ್ಲಿ ಇರುವಷ್ಟು ಪ್ರತಿಭಾವಂತರು ವಿಶ್ವದ ಬೇರೆಲ್ಲೂ ಇಲ್ಲ. ನಾವು ಇಡೀ ವಿಶ್ವಕ್ಕೆ ಮಾದರಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ತೆಲಂಗಾಣ ಗ್ಲೋಬಲ್ ಪರಿಕಲ್ಪನೆಯನ್ನು ಹೊಂದಿದೆ. ಭಾರತದ ಸಾಹಸವನ್ನು ಪರಿಚಯಿಸುವಾಗ ಬೆಂಗಳೂರು - ಹೈದರಾಬಾದ್ ಹೆಸರನ್ನು ಉಲ್ಲೇಖಿಸದೆ ವಿವರಿಸಲು ಸಾಧ್ಯವೇ ಇಲ್ಲ. ಕೆಲವರು ಬೆಂಗಳೂರು ಹಾಗೂ ಹೈದರಾಬಾದ್ ಪ್ರತಿಸ್ಪರ್ಧಿಗಳು ಎನ್ನುವಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸತ್ಯ ಬಲಿಷ್ಠವಾಗಿದೆ ನಾವು ಪ್ರತಿಸ್ಪರ್ಧಿಗಳಲ್ಲ ಪರಸ್ಪರ ಸಹಕಾರದಿಂದ ಸಾಗುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
Hyderabad and Bengaluru are not competing with each other but globally. If you want to walk far, walk together and that is what two cities are doing.
— DK Shivakumar (@DKShivakumar) December 8, 2025
Glimpses from my speech at the Telangana Rising Global Summit today. pic.twitter.com/Lx0OMzIGsa
ನೀವು ವೇಗವಾಗಿ ಓಡಬೇಕಾದರೆ ಒಬ್ಬರೇ ಓಡಿ.. ನೀವು ಅತ್ಯಂತ ದೂರ ಸಾಗಬೇಕಾದರೆ ಒಟ್ಟಾಗಿ ಸಾಗಿ ಎನ್ನುವ ಸಂದೇಶವನ್ನೂ ಸಹ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಇದೇ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications