Get Updates
Get notified of breaking news, exclusive insights, and must-see stories!

Bengaluru D.K. Shivakumar: ಬೆಂಗಳೂರು - ಹೈದರಾಬಾದ್ ಸ್ಪರ್ಧಿಗಳಲ್ಲ.. ಆದರೆ: ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು ?

Bengaluru D.K. Shivakumar: ಬೆಂಗಳೂರಿಗೆ ಕರ್ನಾಟಕದ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜಧಾನಿ ಹಾಗೂ ನಗರಗಳಿಂದ ಪೈಪೋಟಿ ಶುರುವಾಗಿದೆ. ಅದರಲ್ಲೂ ತೆಲಂಗಾಣದ ರಾಜಧಾನಿ ಹೈದರಾಬಾದ್ - ಬೆಂಗಳೂರಿನ ಐಟಿ - ಸಿಲಿಕಾನ್ ಸಿಟಿ ಎನ್ನುವ ಖ್ಯಾತಿಗೆ ಭಾರೀ ಪೈಪೋಟಿ ನೀಡುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿರುವಾಗಲೇ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಮಹತ್ವದ ಮೆಸೇಜ್ ಹಂಚಿಕೊಂಡಿದ್ದಾರೆ.

ಬೆಂಗಳೂರು ಅಭಿವೃದ್ಧಿಯ ವೇಗದಲ್ಲಿದೆ. ಅದರಲ್ಲೂ ಕೆಲವೊಂದು ಆರೋಪ - ಪ್ರತ್ಯಾರೋಪಗಳ ಹೊರತಾಗಿಯೂ ಜಾಗತಿಕವಾಗಿ ಬೆಂಗಳೂರು ಸದಾ ಮುಂಚೂಣಿಯಲ್ಲಿದೆ. ಅದರಲ್ಲೂ ಐಟಿ - ಬಿಟಿಯಲ್ಲಿ ದೇಶದ ರಾಜಧಾನಿಯಾಗಿ ಬೆಂಗಳೂರು ಮುಂದುವರಿಯುತ್ತಿದೆ. ಆದರೆ, ಈಚೆಗೆ ಹೈದರಾಬಾದ್ ನಗರವು ಬೆಂಗಳೂರಿಗೆ ಭಾರೀ ಪೈಪೋಟಿಯನ್ನು ನೀಡುತ್ತಿದೆ. ಅದರಲ್ಲೂ ಐಟಿ ಕ್ಷೇತ್ರದಲ್ಲಿ ಕಳೆದ ಎರಡು ಮೂರು ದಶಕದ ಅವಧಿಯಿಂದಲೂ ಬೆಂಗಳೂರು ಹಾಗೂ ಹೈದರಾಬಾದ್ ನಗರಗಳ ನಡುವೆ ಭಾರೀ ಪೈಪೋಟಿ ಇದೆ.

Bengaluru - Hyderabad are not competitors but What did DCM D K Shivakumar say

ಇನ್ನು ಈಚೆಗೆ UnearthIQ ನಡೆಸಿದ ಅಧ್ಯಯನ ವರದಿಯ ವರದಿಯಂತೆ ವೆಚ್ಚದ ಅನುಕೂಲತೆ, ಮೂಲಸೌಕರ್ಯ ಮತ್ತು ಬ್ಯುಸಿನೆಸ್ - ಪ್ರೋ ಪರಿಸರ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳಲ್ಲಿ ಬೆಂಗಳೂರಿಗಿಂತ ಹೈದರಾಬಾದ್ ಪೂರಕವಾಗಿದೆ. ಭಾರತದಲ್ಲಿ GCC ಗಳಲ್ಲಿ ಬೆಂಗಳೂರು ನಗರವನ್ನು ಹೈದರಾಬಾದ್ ಹಿಂದಿಕ್ಕಿತ್ತು. 2025ನೇ ಸಾಲಿನಲ್ಲಿ ಎಲ್ಲಾ ಹೊಸ GCC ಗಳಲ್ಲಿ ಹೈದರಾಬಾದ್ ರಾಜ್ಯವು ಶೇಕಡಾ 46 ರಷ್ಟನ್ನು ಹೊಂದಿದ್ದರೆ, 2025ನೇ ಸಾಲಿನಲ್ಲಿ ಕರ್ನಾಟಕದ ಬೆಂಗಳೂರು 2025ನೇ ಸಾಲಿನ ಜನವರಿ-ನವೆಂಬರ್ ರಲ್ಲಿ ಶೇ33 ರಷ್ಟು Gcc ಹೊಂದಿದೆ ಎಂದು ಹೇಳಲಾಗಿತ್ತು.

ಬೆಂಗಳೂರು - ಹೈದರಾಬಾದ್ ಪರಸ್ಪರ ಸ್ಪರ್ಧಿಸುತ್ತಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

ಹೈದರಾಬಾದ್ ಮತ್ತು ಬೆಂಗಳೂರು ಪರಸ್ಪರ ಸ್ಪರ್ಧಿಸುತ್ತಿಲ್ಲ, ಬದಲಾಗಿ ಜಾಗತಿಕವಾಗಿ ಪೈಪೋಟಿ ನಡೆಸುತ್ತಿವೆ. ನೀವು ಹೆಚ್ಚು ದೂರ ನಡೆಯಲು ಬಯಸಿದರೆ, ಒಟ್ಟಿಗೆ ನಡೆಯಿರಿ ಮತ್ತು ಎರಡು ನಗರಗಳು ಅದನ್ನೇ ಮಾಡುತ್ತಿವೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ತೆಲಂಗಾಣ ರೈಸಿಂಗ್ 2047 ಗ್ಲೋಬಲ್ ಶೃಂಗಸಭೆ ಅವರು ಬೆಂಗಳೂರು - ಹೈದರಾಬಾದ್ ನಡುವಿನ ಪ್ರಗತಿಯ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಅಭಿನಂದನೆ ಸೂಚಿಸಲು ಇಚ್ಛಿಸುತ್ತೇನೆ. ಅವರು ತೆಲಂಗಾಣದ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರೈಸಿದ್ದಾರೆ. ನನ್ನ ಗೆಳಯನಿಗೆ ಬೆಂಬಲ ಕೊಡುವುದಕ್ಕೆ ಬಂದಿದ್ದೇನೆ. ಅವರು ಇನ್ನಷ್ಟು ಸ್ಟ್ರಾಂಗ್‌ ಆಗುವುದಕ್ಕೆ ಬೆಂಬಲ ಕೊಡಲು ನಾನಿಲ್ಲಿ ಬಂದಿದ್ದೇನೆ. ತೆಲಂಗಾಣ ಹೆಚ್ಚು ಬೆಳೆಯುತ್ತಿದೆ. ದಕ್ಷಿಣ ಭಾರತದಲ್ಲಿ ಇರುವಷ್ಟು ಮಾನವ ಸಂಪನ್ಮೂಲ ಇನ್ನೇಲ್ಲೂ ಇಲ್ಲ. ಭಾರತದಲ್ಲಿ ಇರುವಷ್ಟು ಪ್ರತಿಭಾವಂತರು ವಿಶ್ವದ ಬೇರೆಲ್ಲೂ ಇಲ್ಲ. ನಾವು ಇಡೀ ವಿಶ್ವಕ್ಕೆ ಮಾದರಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ತೆಲಂಗಾಣ ಗ್ಲೋಬಲ್ ಪರಿಕಲ್ಪನೆಯನ್ನು ಹೊಂದಿದೆ. ಭಾರತದ ಸಾಹಸವನ್ನು ಪರಿಚಯಿಸುವಾಗ ಬೆಂಗಳೂರು - ಹೈದರಾಬಾದ್‌ ಹೆಸರನ್ನು ಉಲ್ಲೇಖಿಸದೆ ವಿವರಿಸಲು ಸಾಧ್ಯವೇ ಇಲ್ಲ. ಕೆಲವರು ಬೆಂಗಳೂರು ಹಾಗೂ ಹೈದರಾಬಾದ್ ಪ್ರತಿಸ್ಪರ್ಧಿಗಳು ಎನ್ನುವಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸತ್ಯ ಬಲಿಷ್ಠವಾಗಿದೆ ನಾವು ಪ್ರತಿಸ್ಪರ್ಧಿಗಳಲ್ಲ ಪರಸ್ಪರ ಸಹಕಾರದಿಂದ ಸಾಗುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ನೀವು ವೇಗವಾಗಿ ಓಡಬೇಕಾದರೆ ಒಬ್ಬರೇ ಓಡಿ.. ನೀವು ಅತ್ಯಂತ ದೂರ ಸಾಗಬೇಕಾದರೆ ಒಟ್ಟಾಗಿ ಸಾಗಿ ಎನ್ನುವ ಸಂದೇಶವನ್ನೂ ಸಹ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಇದೇ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+