ಮಹಾರಾಣಿ ಕಾಲೇಜು ಯುವತಿಯರ ಒಳ ಉಡುಪು ಕಳ್ಳನ ಬಂಧನ

ಬೆಂಗಳೂರಿನ ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಮಧ್ಯರಾತ್ರಿ ನುಗ್ಗಿ ಒಳ ಉಡುಪು ಕದ್ದೊಯ್ಯುತ್ತಿದ್ದ ಯುವಕನನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಮಾರ್ಚ್ 22: ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಮಧ್ಯರಾತ್ರಿ ನುಗ್ಗಿ ಒಳ ಉಡುಪು ಕದ್ದೊಯ್ಯುತ್ತಿದ್ದ ಯುವಕನನ್ನು ಹೈಗ್ರೌಂಡ್ ಪೊಲೀಸರು ಬುಧವಾರದಂದು ಬಂಧಿಸಿದ್ದಾರೆ.

ಮಧ್ಯರಾತ್ರಿ ವೇಳೆ ಹಾಸ್ಟೆಲ್‌ ತಾರಸಿಗೆ ನುಗ್ಗುತ್ತಿದ್ದ ಈ ಯುವಕ, ಯುವತಿಯರ ಒಳ ಉಡುಪನ್ನು ಧರಿಸಿಕೊಂಡು ಬಂದು, ಯುವತಿಯರು ಒಣಗಲು ಹಾಕಿರುವ ಒಳ ಉಡುಪುಗಳನ್ನು ಕದಿಯುತ್ತಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.[ವಿದ್ಯಾರ್ಥಿನಿಯರ ಒಳ ಉಡುಪು ಕದಿಯುವ ಯಾರು ಈ ವಿಕೃತ ಕಾಮಿ?]

ಇದಲ್ಲದೆ ಹುಡುಗಿಯರಂತೆ ನಡೆಯುವುದು, ನಾಚಿಕೊಳ್ಳುತ್ತಿದ್ದ, ವಿಚಿತ್ರ ಕಾಟ ಕೊಡುತ್ತಿದ್ದ ಈತನ ಬಗ್ಗೆ ನಗರದ ಹೈಗ್ರೌಂಡ್ ಠಾಣೆಗೆ ದೂರು ನೀಡಲಾಗಿತ್ತು.

Intruder wearing women’s inner-wear arrested Maharani Arts College Bengaluru

ಯುವಕನನ್ನು ಬಂಧಿಸಲು ಪೊಲೀಸರು ವಿಶೇಷ ತಂಡ ರಚಿಸಿದ್ದರು. ಆತನ ತಲೆಯಲ್ಲಿ ಎರಡು ಸುಳಿ ಇರುವುದು ಪತ್ತೆಯಾಯಿತು. ಇದರಿಂದ ಮಫ್ತಿಯಲ್ಲಿ ಆತನನ್ನು ಹಿಂಬಾಲಿಸಿ ಬುಧವಾರದಂದು ಬಂಧಿಸಲು ಸಾಧ್ಯವಾಯಿತು, ಆತನ ಹೆಸರು ಅಬು ತಾಲಿಮ್(24 ವರ್ಷ) ಎಂದು ಪೊಲೀಸರು ಹೇಳಿದರು.

ಫೆಬ್ರವರಿ 12ರಂದು ರಾತ್ರಿ 12ಕ್ಕೆ ಹಾಸ್ಟೆಲ್‌ಗೆ ಆತ ಬಂದಿದ್ದ. ಆಗ ಆತನ ವಿಚಿತ್ರ ನಡವಳಿಕೆ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ದೃಶ್ಯವನ್ನೇ ಆಧರಿಸಿ ಹಾಸ್ಟೆಲ್‌ನ ವಾರ್ಡನ್‌ ಸುಮಿತ್ರಾ ಅವರು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ಸೋಮವಾರ ದೂರು ನೀಡಿದ್ದರು.

ಮೂರು ಅಥವಾ ಆರು ತಿಂಗಳಿಗೊಮ್ಮೆ ಬಂದು ಹೋಗುವ ಈ ವ್ಯಕ್ತಿ ಯುವತಿಯರ ಒಳ ಉಡುಪುಗಳನ್ನೆಲ್ಲ ಕದ್ದೊಯ್ಯುತ್ತಿದ್ದ, ಒಳ ಉಡುಪು ಕದಿಯುವುದರಲ್ಲಿ ಮಾನಸಿಕ ತೃಪ್ತಿ ಅನುಭವಿಸುತ್ತಿದ್ದ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+