Bengaluru Weather Today: ಇಂದು ತಾಪಮಾನ ಮತ್ತಷ್ಟು ಇಳಿಕೆ! ಒಂದು ವಾರ ಭಾರೀ ಚಳಿ ನಿರೀಕ್ಷೆ..
Bengaluru cold wave: ರಾಜಧಾನಿ ಬೆಂಗಳೂರು ಬುಧವಾರ (ಡಿಸೆಂಬರ್10) ದಟ್ಟ ಮಂಜು, ಹೆಚ್ಚು ಚಳಿಗೆ ಸಾಕ್ಷಿ ಅಯಿತು. ನಗರಾದ್ಯಂತ ತಂಪು ವಾತಾವರಣ ದಾಖಲಾಯಿತು. ಬೆಂಗಳೂರಿಗೆ ಶೀತದ ಅಲೆಯ ಮುನ್ನೆಚ್ಚರಿಕೆ ನೀಡಲಾಗಿದೆ. ನಗರ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಒಂದು ವಾರ ಬೆಂಗಳೂರು ಅಕ್ಷರಶಃ ನಡುಗಲಿದೆ ಎಂದು ಹವಾಮಾನ ತಜ್ಞರು ಊಹಿಸಿದ್ದಾರೆ.
ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಮಂಜು ಕವಿದಿತ್ತು. ಬೆಳಗ್ಗೆ ದಟ್ಟ ಮಂಜು, ಚಳಿ ಆವರಿಸಿತ್ತು. ನಗರದ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಹೆಚ್ಚಲಿದೆ. ಅಂದರೆ ಹಗಲು ಹೊತ್ತು ಹೆಚ್ಚಿನ ಉಷ್ಣ ಕಂಡು ಬರಲಿದ್ದು, ಎಲ್ಲೆಡೆ ಒಣಹವೆ ಕಂಡು ಬರಲಿದೆ. ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಚಳಿ ಹೆಚ್ಚಾಗುವ ಸೂಚನೆ ಸಿಕ್ಕಿದೆ. ಹೀಗಾಗಿ ಐಎಂಡಿ ನಗರಕ್ಕೆ ಶೀತದ ಅಲೆ ಎಚ್ಚರಿಕೆ ನೀಡಿದೆ.

ಬೆಂಗಳೂರಿನಲ್ಲಿ ಇಂದು ಗರಿಷ್ಠ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಉಳಿದಂತೆ ಯಲಹಂಕದ ಜಿಕೆವಿಕೆ ಭಾಗದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂತು. ಇಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇತ್ತು. ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಮಂಜು ಕವಿಯುವ ಪ್ರಮಾಣ ಹೆಚ್ಚಾಗಲಿದೆ. ಇಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ವರದಿ ಆಗಿದೆ.
ಅದೇ ರೀತಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ 28 ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಇದೆಲ್ಲ ನೋಡಿದರೆ ಚಳಿ ಪ್ರಮಾಣ ತೀವ್ರ ಸ್ವರೂಪದಲ್ಲಿ ಕುಸಿದಿದೆ. ಶಾಖದ ಅಲೆ ಹೆಚ್ಚಾಗುತ್ತಿರುವುದು ಗೊತ್ತಾಗುತ್ತಿದೆ. ಈಗಾಗಲೇ ಕರ್ನಾಟಕದ ಉತ್ತರ ಭಾಗಕ್ಕೆ ಶೀತ ಅಲೆಗಳ ಪ್ರಭಾವ ಉಂಟಾಗಿದೆ. ಇನ್ನೊದು ವಾರದಲ್ಲಿ ಅದು ಬೆಂಗಳೂರು ಸೇರಿದಂತೆ ರಾಜ್ಯ ಆವರಿಸುವ ಸಾಧ್ಯತೆ ಇದೆ.
ಒಂದು ವಾರದ ಬೆಂಗಳೂರು ಹವಾಮಾನ ವರದಿ
ಮುಂದಿನ ಒಂದು ವಾರದಲ್ಲಿ ನಗರದ ತಾಪಮಾನದಲ್ಲಿ ಭಾರೀ ವ್ಯತ್ಯಾಸವಾಗಲಿದೆ. ಅಂದರೆ ಕನಿಷ್ಠ ತಾಪಮಾನ ಕ್ರಮೇಣ ನಿರಂತರವಾಗಿ 12 ರಿಂದ 14 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಕೆ ಆಗಲಿದೆ. ಡಿಸೆಂಬರ್ ತಿಂಗಳ ಚಳಿಗೆ ಬೆಂಗಳೂರು ನಡುಗಲಿದೆ. ಹಗಲು ಸ್ಪಷ್ಟ ನೀಲಿ ಆಕಾಶ ಕಂಡು ಬರಲಿದ್ದು, ಒಣಹವೆಯ ವಾತಾವರಣ ಕಂಡು ಬರಲಿದೆ.
ಒಂದು ವೇಳೆ ನಗರದ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದೆ ಆದರೆ ಅದು ಸುಮಾರು 09 ವರ್ಷಗಳ ಹಳೇಯ ದಾಖಲೆಯನ್ನು ಮುರಿಯಲಿದೆ. ಏಕೆಂದರೆ 2016 ರ ಡಿಸೆಂಬರ್ 11ರಂದು ಕನಿಷ್ಠ ತಾಪಮಾನದಲ್ಲಿ ದಾಖಲೆ ಆಗಿತ್ತು. ಡಿಸೆಂಬರ್ ತಿಂಗಳಿನ ಚಳಿ ನೋಡುವುದಾದರೆ 12 ಡಿ.ಸೆ. ದಾಖಲಾದರೆ ಅದು ಇಷ್ಟು ವರ್ಷಗಳ ಕನಿಷ್ಠ ತಾಪಮಾನವಾಗಲಿದೆ ಎಂದು ವರದಿ ಆಗಿದೆ.












Click it and Unblock the Notifications