ಮಹಿಳಾ ಸುರಕ್ಷತೆ: ಬೆಂಗಳೂರಿಗೆ 667 ಕೋಟಿ ನೀಡಲು ಕೇಂದ್ರ ಒಪ್ಪಿಗೆ
ಬೆಂಗಳೂರು, ಜು.3: ಭಾರತದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ, ಹಾಗಾಗಿ ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿಗೆ 667 ಕೋಟಿ ರೂ. ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಮ್ಮಿತಿಸಿದೆ.
ಮಹಿಳಾ ಸುರಕ್ಷತೆಗಾಗಿ ಈ ಹಣದಲ್ಲಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ, ಬೆಂಗಳೂರಿನಲ್ಲಿ ಮಹಿಳೆಯರನ್ನು ಸುರಕ್ಷಿತವಾಗಿಡಲು ಬೇಖಾದ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸುರಕ್ಷಿತ ನಗರ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಣ ನೀಡಲಿದೆ.
ವಿಶ್ವದಲ್ಲೇ ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ದೇಶ
ಬಿಬಿಎಂಪಿಯು 2017ರಲ್ಲಿ ಕೇಂದ್ರ ಸರ್ಕಾರಕ್ಕೆ ಪೊಲೀಸ್ ಸಹಯೋಗದಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಒಟ್ಟು 8 ನಗರಗಳಿಗೆ ಮಹಿಳಾ ಸುರಕ್ಷತೆ ದೃಷ್ಟಿಯಿಂದ ಹಣ ಮಂಜೂರು ಮಾಡಿದ್ದು ಅದರಲ್ಲಿ ಬೆಂಗಳೂರು ಕೂಡ ಒಂದಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಬಿಗಿ ಭದ್ರತೆ, ಮಹಿಳಾ ಸಹಾಯವಾಣಿ ಕೇಂದ್ರಗಳಲ್ಲಿ ಎನ್‌ಜಿಓ ಸದಸ್ಯರ ನೇಮಕ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸೇರಿ ಒಂದು ಸಹಾಯ ಕೇಂದ್ರ, ಶಾಲೆ, ಕಾಲೇಜು, ಬಸ್ ನಿಲ್ದಾಣಗಳ ಬಳಿ ಮಹಿಳಾ ಪೊಲೀಸರ ನೇಮಕ ಒಟ್ಟು 50 ಕಡೆಗಳಲ್ಲಿ ಮಹಿಳಾ ಸುರಕ್ಷತಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ.
ಕರ್ನಾಟಕದಲ್ಲಿ ನಿರ್ಭಯಾ ಕೇಂದ್ರ ಸ್ಥಾಪನೆ: ಬಜೆಟ್ನಲ್ಲಿ ಘೋಷಣೆಯಾಗಲಿದೆಯೇ?
ಪ್ರಸಕ್ತ ಸಾಲಿನಿಂದಲೇ ಕೆಲಸವನ್ನು ಪ್ರಾರಂಭಿಸಲು ಕೇಂದ್ರ ತಿಳಿಸಿದೆ. ಈ ಹಣವು 60/40 ರೀತಿಯಲ್ಲಿ ನೀಡಲಾಗುತ್ತದೆ. ನವೆಂಬರ್‌ನಿಂದ ಕೆಲಸವನ್ನು ಪ್ರಾರಂಭಿಸಲಾಗುತ್ತದೆ ಮೂರು ವರ್ಷದೊಳಗಾಗಿ ಎಲ್ಲಾ ಸೇವೆಯನ್ನು ಸಂಪೂರ್ಣವಾಗಿ ನೀಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !