BLR Airport: ಬೆಂಗಳೂರು ಫ್ಲೈಯಿಂಗ್ ಟ್ಯಾಕ್ಸಿ ಸೇವೆ ಒಪ್ಪಂದಕ್ಕೆ ಸಹಿ, 2025ರಲ್ಲಿ ಸಂಚಾರ
ಬೆಂಗಳೂರು, ಅಕ್ಟೋಬರ್ 18: ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ತುತ್ತಾಗದವರಿಲ್ಲ. ಕೆಲವೊಮ್ಮೆ ಗಂಟೆಗಟ್ಟಲೇ ಟ್ರಾಫಿಕ್ ಕಿರಿ ಕಿರಿ ಅನುಭವಿಸಬೇಕಾಗುತ್ತದೆ. ಈ ಸಮಸ್ಯೆಗೆ ಶೀಘ್ರವೇ ಮುಕ್ತಿ ದೊರೆಯಲಿದೆ. ಏಕೆಂದ್ರ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾ (KIA) ಬೆಂಗಳೂರು ಫ್ಲೈಯಿಂಗ್ ಟ್ಯಾಕ್ಸಿ ಸೇವೆ ಆರಂಭಿಸಲು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಗುರುವಾರ ಮಾಹಿತಿ ನೀಡಿದೆ.
ಹೌದು, ಬೆಂಗಳೂರಿನಲ್ಲಿ ಒಂದೊಮ್ಮೆ ಈ ಟ್ಯಾಕ್ಸಿ ಸೇವೆ ಆರಂಭವಾದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಗಳಲ್ಲಿ ನಿಮಿಷಗಳಲ್ಲಿ ತೆರಳಬಹುದಾಗಿದೆ. ಈ ಒಪ್ಪಂದದ ಮೂಲಕ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಏರ್‌ಮೊಬಿಲಿಟಿಯ ಪರಿಹಾರಗಳನ್ನು ಕಂಡು ಕೊಳ್ಳಲಾಗುತ್ತಿದೆ.

ಬೆಂಗಳೂರು ಏರ್‌ಪೋರ್ಟ್ ಈ ಹಾರಾಡುವ ಟ್ಯಾಕ್ಸಿ ಸೇವೆ ಒದಗಿಸಲು ಖಾಸಗಿ ಸರಳಾ ಏವಿಯೇಷನ್ ಜೊತೆಗೆ ಕೈ ಜೋಡಿಸಿದೆ. ಇದು ಟ್ರಾಫಿಕ್ ಮಧ್ಯ ಜನರಿಗೆ ಸಾರಿಗೆ ಸೇವೆ ನೀಡುವಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲಿದೆ ಎಂಬಿ ಕೆಐಎ ನಂಬಿದೆ. ಈ ಸೇವೆಯು 2025ರಲ್ಲಿ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಕೆಐಎ ಗುರುವಾರ ಒಪ್ಪಂದ ಮಾಡಿಕೊಂಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಖಚಿತ ಪಡಿಸಿದ್ದು, ಪೋಟೋ ಹಂಚಿಕೊಂಡಿದೆ.
159 ನಿಮಿಷದ ಸಂಚಾರ 19 ನಿಮಿಷಕ್ಕೆ ಇಳಿಕೆ
ಒಪ್ಪಂದಂತೆ ಎಲ್ಲವು ಅಂದುಕೊಂಡಂತೆ ಆದರೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಎಲೆಕ್ಟ್ರಾನಿಕ್ಸ್ ಸಿಟಿಗೆ 159 ನಿಮಿಷಗಳ ಬದಲಾಗಿ ಕೇವಲ 19 ನಿಮಿಷಗಳಲ್ಲಿ ತಲುಪಬಹುದು. ಇಷ್ಟು ತ್ವರಿತಮಟ್ಟದಲ್ಲಿ ಫ್ಲೈಯಿಂಗ್ ಟ್ಯಾಕ್ಸ್ ಸೇವೆ ಒದಗಿಸಲಿದೆ.

ನೀವು ಬೆಂಗಳೂರಿನ ದೊಮ್ಮಲೂರು, ಇಂದಿರಾನಗರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಎಲ್ಲಿಂದ ಬೇಕಾದರೂ ಬೆಂಗಳೂರು ಏರ್‌ಪೋರ್ಟ್ ನಿಮಿಷಗಳಲ್ಲಿ ತಲುಪಬಹುದು. ಇದರಿಂದ ಸಂಚಾರ ಕಿರಿ ಕಿರಿ ತಪ್ಪಲಿದೆ. ಇದು ಎಲೆಕ್ಟ್ರಿಕ್ ಆಗಿದ್ದರಿಂದ ವಾಯುಮಾಲಿನ್ಯದಂತ ಸಮಸ್ಯೆಯು ಆಗುವುದಿಲ್ಲ. ಕೈಗೆಟುವ ದರದಲ್ಲಿ ನೀವು ಇದರಲ್ಲಿ ಪ್ರಯಾಣಿಸಬಹುದಾಗಿದೆ ಎಂದು ಕಂಪನಿಗಳು ಹೇಳಿಕೊಂಡಿವೆ.
ಸರಳಾ ಏವಿಯೇಷನ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಆಡ್ರಿಯನ್ ಸ್ಮಿತ್ ಅವರು ಈ ಮಹತ್ವದ ಒಪ್ಪಂದ, ಸೇವೆ ಬಗ್ಗೆ ಮಾತನಾಡಿದ್ದಾರೆ. ಸದ್ಯ ನೀವು ನಗರದ ಇಂದಿರಾನಗರದಿಂದ ವಿಮಾನ ನಿಲ್ದಾಣಕ್ಕೆ ತೆರಳಲು ಬರೋಬ್ಬರಿ 1.5 ಗಂಟೆ ಪ್ರಯಾಣಿಸಬೇಕಾಗಿದೆ. ನಮ್ಮ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿ ಸೇವೆ ಆರಂಭದ ಬಳಿಕ ನೀವು ಕೇವಲ 5 ನಿಮಿಷಗಳಲ್ಲಿ ತಲುಪಲಿದ್ದೀರಾ ಎಂದು ಅವರು ಹೇಳಿದರು.
7 ಸೀಟಿನ ಹಾರಾಡುವ ಟ್ಯಾಕ್ಸಿ ಸೇವೆ
ಈ ಫ್ಲೈಯಿಂದ ಹಾರಾಟವು ವಿಮಾನ ಮಾದರಿಯಲ್ಲಿರುತ್ತದೆ. eVTOL (ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್) ವಾಹನವು 7 ಆಸನಗಳನ್ನು ಹೊಂದಿರುತ್ತದೆ. ಇದು ಕಾರ್ಯರೂಪಕ್ಕೆ ಬರಲು ಒಂದಷ್ಟು ಸವಾಲುಗಳು ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಅವುಗಳನ್ನು ದಾಟಿಕೊಂಡು ಸೇವೆ ಆರಂಭಿಸಬೇಕಿದೆ. ಅದಕ್ಕೆ ಸಮಸ್ಯೆ ಹಿಡಿಯಬಹುದು ಎಂದು ಅಂದಾಜಿಸಲಾಗಿದೆ.
ಸದ್ಯ ಆರಂಭವಾಗಲಿರುವ ಬೆಂಗಳೂರು ಫ್ಲಾಯಿಂಗ್ ಟ್ಯಾಕ್ಸಿ ಸೇವೆ ಇದು ಮೊದಲ ಹಂತವಾಗಿದೆ. ಭವಿಷ್ಯದಲ್ಲಿ ಈ ರೀತಿಯ ಅನೇಕ ಮಾದರಿಯ ಸೇವೆಗಳು ಲಭ್ಯವಾಗಲಿದೆ ಅಂತಲೂ ಸರಳಾ ಏವಿಯೇಷನ್ ತಿಳಿಸಿದೆ.












Click it and Unblock the Notifications