ಬೆಂಗಳೂರಿಗರೇ ಗಮನಿಸಿ: ಡಿಸೆಂಬರ್ 17ರಂದು ಇಡೀ ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ, ಎಲ್ಲೆಲ್ಲಿ?
Water Supply Cut in Bengaluru: ರಾಜಧಾನಿ ಬೆಂಗಳೂರು ನಗರದ ಕೆಲವು ಭಾಗಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕಾವೇರಿ 5ನೇ ಹಂತದ ನೀರು ಸರಬರಾಜು ಪೈಪಿನಲ್ಲಿ ಸೋರಿಕೆ ಉಂಟಾಗಿದೆ. ಈ ಸಮಸ್ಯೆಯನ್ನು ತುರ್ತು ದುರಸ್ತಿ ಮಾಡಲು ಬೆಂಗಳೂರು ನೀರು ಸಬರಾಜು ಮತ್ತು ಒಳಚರಂಡಿ ಜಲಮಂಡಳಿ (BWSSB) ಮುಂದಾಗಿದೆ. ಹೀಗಾಗಿ ಡಿಸೆಂಬರ್ 17ರಂದು ಕಾವೇರಿ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಮಂಗಳವಾರ ತಿಳಿಸಿದ್ದಾರೆ. ಯಾವೆಲ್ಲ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ? ಅನ್ನುವ ವಿವರ ಇಲ್ಲಿದೆ.
ಕಾವೇರಿ 5ನೇ ಹಂತದ 3 ಸಾವಿರ ಎಂಎಂ ವ್ಯಾಸದ ಟ್ರಾನ್ಸ್ ಮಿಷನ್ ಲೈನ್ (Transmission line) ನ ಸ್ಕವರ್ ವಾಲ್ವ್ ಹಾನಿಯಾಗಿ ನೀರು ಸೋರಿ ಪೋಲಾಗುತ್ತಿದೆ. ಈ ಸೋರಿಕೆಯನ್ನು ತಡೆಗಟ್ಟಿ ಬೆಂಗಳೂರು ಮಹಾನಗರಕ್ಕೆ ಸುಗಮ ಮತ್ತು ಸುಲಲಿತವಾಗಿ ನೀರು ಸರಬರಾಜು ಮಾಡಬೇಕಿದೆ. ಆದ್ದರಿಂದ ಡಿಸೆಂಬರ್ 17ರಂದು ಬುಧವಾರ) ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಕಾವೇರಿ 5ನೇ ಹಂತದ ನೀರು ಸರಬರಾಜು ಆಗುವ ಪ್ರದೇಶಗಳಲ್ಲಿ ನೀರಿನ ವ್ಯತ್ಯಯವಾಗಲಿದೆ ಎಂದು ಹೇಳಿದರು.

ಯಾವೆಲ್ಲ ಪ್ರದೇಶಗಳಲ್ಲಿ ನೀರು ಪೂರೈಕೆ ಆಗಲ್ಲ?
ನಗರದ ಅನಂತಪುರ, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ ಹಾರೋಹಳ್ಳಿ, ಮಂಚೇನಹಳ್ಳಿ, ಕಟ್ಟಿಗೇನಹಳ್ಳಿ, ಶ್ರೀನಿವಾಸಪುರ, ಬೆಳ್ಳಳ್ಳಿ, ತಿರುಮೆನಹಳ್ಳಿ, ಚೊಕ್ಕನಹಳ್ಳಿ, ದಾಸರಹಳ್ಳಿ, ಕೆಂಚನಹಳ್ಳಿ, ಗೋವಿಂದಪುರ, ವಾಸುದೇವಪುರ, ರಾಚೇನಹಳ್ಳಿ, ಥಣೀಸಂದ್ರ, ಚಳ್ಳೆಕೇರೆ, ಹೊರಮಾವು, ಆಗರ, ಅಮಾನಿ ಭೈರತಿಖಾನೆ, ಗೆದ್ದಲಹಳ್ಳಿ, ಕೊತ್ತನೂರು, ನಾರಾಯಣಪುರ, ಬಳಗೆರೆ, ಬೆಳ್ಳಂದೂರು ಅಮಾನಿಕೆರೆ, ಬೆಳತ್ತೂರು, ಕೊತ್ತನೂರು, ಎನ್.ನಾಗೇನಹಳ್ಳಿ, ಕೈಲಾಸನ ಹಳ್ಳಿ, ಭೈರತಿ, ಬಿಳಿಶಿವಹಳ್ಳಿ, ಚೆನ್ನಸಂದ್ರ, ದೇವರಬೀಸನಹಳ್ಳಿಯಲ್ಲಿ ಕುಡಿಯುವ ನೀರು ಬರುವುದಿಲ್ಲ.
ಮಾತ್ರವಲ್ಲದೇ ಗುಂಜೂರು, ಹಗದೂರು, ಕಾಡಬೀಸನಹಳ್ಳಿ, ಕಾಯಮ್ಮನ ಅಗ್ರಹಾರ, ಕಾಡೋಗೋಡಿ ಪ್ಲಾಂಟೆಸನ್ ಕುಂಬೇನ ಅಗ್ರಹಾರ, ಸೋರಹುಣಸೆ, ತುಬರಹಳ್ಳಿ, ವರ್ತೂರು, ಕಲ್ಕರೆ, ಹೋರಮಾವು. ಕೆ. ಚೆನ್ನಸಂದ್ರ, ವಾರಣಾಸಿ, ವಸಂತಪುರ, ಉಲ್ಲಾಳ ಸೋಣ್ಣೆನಹಳ್ಳಿ, ನಾಗೋಂಡಹಳ್ಳಿ, ಪಣತ್ತೂರು, ರಾಮಗೊಂಡನಹಳ್ಳಿ, ಸಿದ್ದಾಪುರ, ಗಾಣಾಕಲ್ಲು, ಹೆಮ್ಮಿಗೆಪುರ, ಸೋಮಪುರ, ವಾರಸಂದ್ರ, ಲಿಂಗದೀರನಹಳ್ಳಿ, ಹೊಸಹಳ್ಳಿ, ಅರೇಹಳ್ಳಿ, ವಡ್ಡರಪಾಳ್ಯ ಉತ್ತರಹಳ್ಳಿ, ಸುಬ್ರಮಣ್ಯಪುರ.
ಬೇಗೂರು, ಬೆಳ್ಳಂದೂರು, ಚಂದ್ರಶೇಖರಪುರ, ದೊಡ್ಡಕಲ್ಲಸಂದ್ರ, ಗೊಲ್ಲಹಳ್ಳಿ, ಗೊಟ್ಟಿಗೆರೆ, ಗುಬ್ಬಲಾಳ, ತುರಹಳ್ಳಿ, ದೊಡ್ಡಬಿದರಕಲ್ಲು, ಕಮ್ಮನಹಳ್ಳಿ, ಕಸವನಹಳ್ಳಿ, ಗಿಡದಕೋನೆನಹಳ್ಳಿ, ಆಲಹಳ್ಳಿ, ಅಂಬಲಿಪುರ, ಅಂಜನಾಪುರ, ಬಸವನಪುರ, ಅರಳೂರು ಜುನಸಂದ್ರ, ಕೈಕೋಂಡನಹಳ್ಳಿ, ಕಾಳೇನಾ ಅಗ್ರಹಾರ, ಕಂಬತ್ತಹಳ್ಳಿ, ತಿಪ್ಪಸಂದ್ರ, ವಾಜರಹಳ್ಳಿ, ಯಲೇನಹಳ್ಳಿ, ಭರತೇನ ಅಗ್ರಹಾರ, ಬೋಗನಹಳ್ಳಿ, ಚಿಕ್ಕಬೆಳ್ಳಂದೂರು, ಚಿಕ್ಕತೇಗೂರು, ದೊಡ್ಡಕನ್ನಹಳ್ಳಿ, ದೊಡ್ಡತೆಗೂರು, ನಾಗನಾತಪುರ, ಅಬ್ಬಿಗೇರೆ, ಚಿಕ್ಕಸಂದ್ರ, ಶೆಟ್ಟಹಳ್ಳಿ, ಕರಿಹೋಬನಹಳ್ಳಿ, ಅಂದ್ರಹಳ್ಳಿ, ಮ್ಯಾಡರಹಳ್ಳಿ, ಕೂಡಲು, ಪರಪ್ಪನ ಅಗ್ರಹಾರ, ಪಿಳ್ಳಗಾನಹಳ್ಳಿ, ರಘುವನಹಳ್ಳಿ, ತಲಘಟ್ಟಪುರ, ಲಿಂಗಧೀರನಹಳ್ಳಿ ಬಿ, ಹೆರೋಹಳ್ಳಿ, ಹೊಸಹಳ್ಳಿಯಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ಜಲಮಂಡಳಿ ಮಾಹಿತಿ ನೀಡಿದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications