ಡ್ರೋಣ್ ಕೇವಲ ನಿಗಾ ಇಡುವುದಲ್ಲ ಕೆರೆಗಳನ್ನೂ ಸ್ವಚ್ಛ ಮಾಡುತ್ತೆ
ಬೆಂಗಳೂರು, ಫೆಬ್ರವರಿ 26: ಡ್ರೋಣ್ ಕ್ಯಾಮರಾವನ್ನು ಯಾವುದೇ ಅಚಾತುರ್ಯ ನೋಡದಂತೆ ತಡೆಯಲು, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ಒಂದು ಕಣ್ಣಿಡಲು ಬಳಕೆ ಮಾಡುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಕೆರೆಗಳ ಸ್ವಚ್ಛತೆಗಾಗಿ ಬಳಕೆ ಮಾಡಲಾಗಿದೆ.
ಇಂಥದ್ದೊಂದು ಮಾದರಿಯ ಡ್ರೋಣ್‌ಒಂದನ್ನು ನಗರದ ಸರ್ ಎಂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.
ಇದು ನೀರಿನಲ್ಲಿ ಮೀನಿನಂತೆ ಸರಾಗವಾಗಿ ಈಜ ಬಲ್ಲದು. ನದಿ ಅಥವಾ ಕೆರೆಗಳ ಆಳದಲ್ಲಿ ಇಳಿದು, ಅಲ್ಲಿ ತುಂಬಿರುವ ಹೂಳಿನ ಪ್ರಮಾಣ, ನೀರಿನಲ್ಲಿ ಸೇರಿಕೊಂಡಿರುವ ರಾಸಾಯನಿಕ ವಸ್ತುಗಳು, ಗುಣಮಟ್ಟ ಸೇರಿದಂತೆ ಸಮಗ್ರ ಚಿತ್ರಣವನ್ನು ನೀಡಲಿದೆ.

ಆ ಮಾಹಿತಿಯನ್ನು ಆಧರಿಸಿ ಶುದ್ಧೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು. ಇಂತಹದ್ದೊಂದು ತಂತ್ರಜ್ಞಾನ ಅಭಿವೃದ್ಧಿಪಡಿಸಿರುವುದು ದೇಶದಲ್ಲಿ ಇದೇ ಮೊದಲು ಎನ್ನಲಾಗಿದೆ. ಇದು ವಾಟರ್ ಪ್ಯೂರಿಫೈಯರ್ ರೀತಿಯಲ್ಲಿ ಕೆಲಸ ಮಾಡುತ್ತಿದೆ.












Click it and Unblock the Notifications