Smoking: 'ಧಮ್' ಹೊಡೆಯದವರು ಲೂಸರ್ಸ್ ಎಂದ ಯುವತಿ: ಬೆಂಗಳೂರಿನ ಖ್ಯಾತ ವೈದ್ಯರ ಉತ್ತರ ಹೀಗಿತ್ತು
ಧೂಮಪಾನ ಆರೋಗ್ಯಕ್ಕೆ ಅದೆಷ್ಟು ಹಾನಿಕಾರಕ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೂ ಧೂಮಪಾನಿಗಳ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ಇಲ್ಲೊಬ್ಬ ಯುವತಿ ತಾನು ಧೂಮಪಾನ ಮಾಡುವ ಫೋಟೊ ಹಂಚಿಕೊಂಡಿದ್ದಲ್ಲದೆ ಧೂಮಪಾನ ಮಾಡದವರನ್ನು ಸೋತವರು (ಲೂಸರ್ಸ್) ಎಂದು ಕರೆದಿದ್ದು, ಸರಿಯಾಗಿ ಉಗಿಸಿಕೊಂಡಿದ್ದಾರೆ.
ಎಕ್ಸ್‌ನ ಬಳಕೆದಾರರ ಖಾತೆ, @sushihat3r ಎನ್ನುವವರು ಸಿಗರೇಟ್ ಕೈಯಲ್ಲಿ ಹಿಡಿದಿರುವ ಫೋಟೊ ಹಂಚಿಕೊಂಡಿದ್ದು, "ಹೇ ಧೂಮಪಾನಿಗಳು ಮತ್ತು ಲೂಸರ್ಸ್ (ಧೂಮಪಾನ ಮಾಡದಿರುವವರು) ನೀವು ಏನು ಮಾಡುತ್ತಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಯುವತಿ ಮಾಡಿದ ಪೋಸ್ಟ್ ತ್ವರಿತವಾಗಿ ಜನಪ್ರಿಯತೆಯನ್ನು ಗಳಿಸಿತು, ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತು. ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳನ್ನು ಹುಟ್ಟುಹಾಕಿತು, ಅನೇಕ ಬಳಕೆದಾರರು ಕಾಮೆಂಟ್‌ಗಳಲ್ಲಿ ಯುವತಿಯನ್ನು ಟೀಕಿಸಿದ್ದಾರೆ.
ವೈದ್ಯರು ಕೊಟ್ಟ ಉತ್ತರ ವೈರಲ್!
ಬೆಂಗಳೂರಿನ ಹೃದ್ರೋಗ ತಜ್ಞ ಡಾ.ದೀಪಕ್ ಕೃಷ್ಣಮೂರ್ತಿ, ಕಾವೇರಿ ಆಸ್ಪತ್ರೆಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ, ಯುವತಿಯ ಪೋಸ್ಟ್‌ಗೆ ಉತ್ತರ ಕೊಟ್ಟಿದ್ದಾರೆ.
ವೈರಲ್ ಪೋಸ್ಟ್‌ಗೆ ಪ್ರತಿಯಾಗಿ, ಡಾ. ಕೃಷ್ಣಮೂರ್ತಿ ಅದನ್ನು ಮರುಟ್ವೀಟ್ ಮಾಡಿದ್ದಾರೆ ಮತ್ತು ಗಂಭೀರವಾದ ಸಂಗತಿಯನ್ನು ಹಂಚಿಕೊಂದ್ದು. 23 ವರ್ಷದ ಧೂಮಪಾನ ಮಾಡುತ್ತಿದ್ದ ಯುವಯಿಗೆ ಮೂರು ಬಾರಿ ಬೈಪಾಸ್ ಸರ್ಜರಿ ಮಾಡಿದ್ದೇನೆ ಎಂದು ಹೇಳುವ ಮೂಲಕ ಧೂಮಪಾನದ ಗಂಭೀರ ಪರಿಣಾಮದ ಬಗ್ಗೆ ಎಚ್ಚರಿಕೆ ಕೊಟ್ಟರು. ನೀವು ಸೋತವರಾಗಿರಿ (Be Losers) ಮತ್ತು ಆರೋಗ್ಯಕರ ಜೀವನ ನಡೆಸಿ" ಎಂದು ಬಳಕೆದಾರರಿಗೆ ಸಲಹೆ ನೀಡಿದ್ದಾರೆ.
The youngest patient I've sent for a triple bypass surgery was a 23y old girl smoker. #HeartAttack #MedTwitter
— Dr Deepak Krishnamurthy (@DrDeepakKrishn1) May 6, 2024
Be a loser (as per this lady) and live healthy. https://t.co/TsJI8qFrWG
ಯುವತಿ ವಿರುದ್ಧ ವ್ಯಾಪಕ ಟೀಕೆ
ಯುವತಿಯ ಪೋಸ್ಟ್‌ಗೆ ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದು "ನೀವು ಧೂಮಪಾನದಿಂದ ಅನಾರೋಗ್ಯಕ್ಕೆ ಒಳಗಾದಾಗ, ಇದೇ ಟ್ವೀಟ್ ಅನ್ನು ಬರೆಯಲು ನಾನು ನಿಮಗೆ ಸವಾಲು ಹಾಕುತ್ತೇನೆ. ವೈಯಕ್ತಿಕವಾಗಿ ಏನೂ ಇಲ್ಲ. ತಂಬಾಕನ್ನು ಪ್ರಚಾರ ಮಾಡಬೇಡಿ." ಎಂದು ಕಿವಿಮಾತು ಹೇಳಿದ್ದಾರೆ.
ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿ, "ನಿಮ್ಮ ಪೋಷಕರನ್ನು ಟ್ಯಾಗ್ ಮಾಡಿ ಮತ್ತು ನೀವು ಸೋತವರಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಅವರು ನಿರ್ಣಯಿಸಲಿ. ಜೀವನ ನಿಮ್ಮನ್ನು ತೊರೆಯುವ ಮುನ್ನ ನೀವು ಧೂಮಪಾನ ತ್ಯಜಿಸಿ." ಎಂದಿದ್ದಾರೆ.
"ಸೋತವರು ಧೂಮಪಾನ ಮಾಡುವವರು, ಧನ್ಯವಾದಗಳು" ಎಂದು ಮೂರನೇ ಬಳಕೆದಾರರು ಬರೆದಿದ್ದಾರೆ.
ವೈದ್ಯರ ಸಲಹೆಗೆ ಮೆಚ್ಚುಗೆ
ವೈದ್ಯರ ಪ್ರತಿಕ್ರಿಯೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಹಲವಾರು ವರ್ಷಗಳ ಹೋರಾಟದ ನಂತರ ನಾನು ನನ್ನ ಧೂಮಪಾನದ ಅಭ್ಯಾಸದಿಂದ ಹೊರಬಂದೆ. ಆ ನಿರ್ಧಾರದ ನಂತರ ನನ್ನ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ" ಎಂದು ಹೇಳಿದರು.












Click it and Unblock the Notifications