ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧುಮೇಹಿಗಳ ಸಂಖ್ಯೆː ಭಾರತಕ್ಕೆ ಎರಡನೇ ಸ್ಥಾನ

|
Google Oneindia Kannada News

ಬೆಂಗಳೂರು, ನ. 16 : ಜಯನಗರದ ಸಾಗರ್ ಆಸ್ಪತ್ರೆ ಮಧುಮೇಹ ತಪಾಸಣಾ ಶಿಬಿರ ಹಮ್ಮಿಕೊಂಡಿತ್ತು. ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ, ಐಶಾನಿ ಶೆಟ್ಟಿ ಮತ್ತು ವಿನಾಯಕ ಜೋಷಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಭಾರತದಲ್ಲಿ 44 ಲಕ್ಷ ಜನ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅಲ್ಲದೇ ಇದರಿಂದ ಹೃದಯ ಸಂಬಂಧಿ ರೋಗಗಳು, ನರ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ರೋಗ ಬರುವುದಕ್ಕೆ ಮುನ್ನವೇ ಮುಂಜಾಗೃತಾ ಕ್ರಮ ತೆಗೆದುಕೊಳ್ಳುವುದು ಒಳಿತು ಎಂದು ತಾರಾ ಅನುರಾಧಾ ತಿಳಿಸಿದರು.

ಇಂಥ ಉಚಿತ ತಪಾಸಣೆ ಶಿಬಿರಗಳು ರೋಗ ಪತ್ತೆಗೆ ಕಾರಣವಾಗುತ್ತವೆ. ಆದಷ್ಟು ಬೇಗ ರೋಗ ಗುರುತಿಸಿದರೆ ಚಿಕಿತ್ಸೆ ಮತ್ತು ಪರಿಹಾರ ಸುಲಭ. ಸಾಮಾಜಿಕ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು. [ಮಧುಮೇಹ ರೋಗಿಗಳಿಗೆ ಸಕತ್ 'ಸಿಹಿ' ಸುದ್ದಿ]

ಚೀನಾದ ನಂತರ ಭಾರತದಲ್ಲಿಯೇ ಅತಿ ಹೆಚ್ಚಿನ ಮಧುಮೇಹಿಗಳಿದ್ದು ಎಷ್ಟು ಮುಂಜಾಗೃತೆ ವಹಿಸಿದರೂ ಸಾಕಾಗುತ್ತಿಲ್ಲ. ರೋಗ ಪತ್ತೆ ಮತ್ತು ಸುಲಭ ಪರಿಹಾರಕ್ಕೆ ಶಿಬಿರ ಆಯೋಜಿಸಲಾಗಿದೆ ಎಂದು ಆಸ್ಪತ್ರೆ ಹಿರಿಯ ವೈದ್ಯರು ಮಾಹಿತಿ ನೀಡಿದರು. [ಪ್ರಮೇಹ ಮೋಕ್ಷಂ ಸೇವಿಸಿ ಮಧುಮೇಹದಿಂದ ಮುಕ್ತಿ]

health 1
English summary
Jayanagar Sagar hospital conducted a special free diabetic camp. Noted actress and MLC Thara Anuradha, actor Vinayak Joshi and actress Aishani Shetty were the chief guests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X