ಬಿಎಸ್ ವೈ-ಅನಂತ್ 'ಕಪ್ಪ' ಸಂಭಾಷಣೆ, ವಿಚಾರಣೆಗೆ ಹಾಜರಾಗಲು ಸೂಚನೆ
ಬಿಜೆಪಿ ಹೈಕಮಾಂಡ್ ಗೆ ಕಪ್ಪ ಸಲ್ಲಿಸಿದ್ದ ಬಗ್ಗೆ ಬಿಎಸ್ ವೈ-ಅನಂತ್ ಕುಮಾರ್ ಮಾತನಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗಬೇಕು, ಧ್ವನಿ ಮಾದರಿಯನ್ನು ನೀಡಬೇಕು ಎಂದು ಕೋರ್ಟ್ ಬಿಎಸ್ ವೈಗೆ ಸೂಚನೆ ನೀಡಿದೆ
ಬೆಂಗಳೂರು, ಮೇ 6: ಯಡಿಯೂರಪ್ಪನವರು ತಮ್ಮ ಧ್ವನಿಯ ಮಾದರಿಯನ್ನು ನೀಡಿ, ಸೈಬರ್ ಕ್ರೈಂ ಪೊಲೀಸರ ಮುಂದೆ ಇನ್ನೊಂದು ವಾರದೊಳಗೆ ಹಾಜರಾಗಬೇಕಿದೆ. ಹೀಗೆ ಅದೇಶ ಮಾಡಿರುವುದು ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್. ಇನ್ನೊಂದು ವಾರದೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗಲು ಸೂಚಿಸಲಾಗಿದೆ.
ಇದು ಯಾವ ಪ್ರಕರಣ, ಯಾಕೆ ಅಂತ ಹೇಳದೆ ಹೀಗೆ ಕೋರ್ಟ್ ಆದೇಶ, ಧ್ವನಿ ಮಾದರಿ ಅಂತೆಲ್ಲ ಅಂದರೆ ಹೇಗೆ ಅರ್ಥ ಆಗಬೇಕು ಅಂತೀರಾ? ಕೇಂದ್ರ ಸಚಿವ ಅನಂತ ಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಮಧ್ಯೆ ಬಿಜೆಪಿ ಹೈಕಮಾಂಡ್ ಗೆ ಕಪ್ಪ ಸಲ್ಲಿಸಿದ ಬಗ್ಗೆ ಸಂಭಾಷಣೆ ನಡೆದಿದೆ ಎನ್ನಲಾದ ಸಿಡಿಯ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ.[ಅನಂತ್-ಯಡಿಯೂರಪ್ಪ ಸಂಭಾಷಣೆಯೇ ತಿರುಚಿದ್ದಂತೆ, ಕೇಸ್ ದಾಖಲಿಸಿದ ಬಿಜೆಪಿ]

ವಿಧಾನಪರಿಷತ್ ಸದಸ್ಯ, ಸಿದ್ದರಾಮಯ್ಯ ಅವರ ಆಪ್ತ ಗೋವಿಂದರಾಜು ಮನೆಯಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಗೆ ಕಪ್ಪ ಸಲ್ಲಿಸಿದ ಬಗ್ಗೆ ಯಾರು ಎಷ್ಟು ಹಣ ನೀಡಿದ್ದರು ಎಂಬ ಮಾಹಿತಿ ಇದೆ. ಅದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿತ್ತು ಎಂಬ ಆರೋಪ ಮಾಡಿದ್ದರು ಯಡಿಯೂರಪ್ಪ.[ಯಡಿಯೂರಪ್ಪ- ಅನಂತ್ ಮಾತನಾಡಿಕೊಂಡಿದ್ದು ಯಾರ ಬಗ್ಗೆ?]

ಆ ನಂತರ ಬಿಜೆಪಿಯ ಸಭೆಯೊಂದರಲ್ಲಿ ಅನಂತ ಕುಮಾರ್ ಹಾಗೂ ಯಡಿಯೂರಪ್ಪ ಅವರ ಮಧ್ಯೆ ನಡೆದಿದೆ ಎನ್ನಲಾದ ಸಂಭಾಷಣೆಯಲ್ಲಿ ಇಬ್ಬರೂ ತಾವು ಬಿಜೆಪಿ ಹೈಕಮಾಂಡ್ ಗೆ ಕಪ್ಪ ನೀಡಿದ್ದೇವೆ ಎಂದು ಮಾತನಾಡಿದ್ದಾರೆ ಎಂದು ಆರೋಪಿಸಿದ ಸಿಡಿ ಮಾಧ್ಯಮಗಳಿಗೆ ದೊರೆತಿತ್ತು. ಇದೀಗ ಆ ಸಿಡಿಯ ಸಾಚಾತನ ಪರೀಕ್ಷಿಸಲು ಯಡಿಯೂರಪ್ಪನವರ ಧ್ವನಿ ಮಾದರಿ ಕೇಳಲಾಗಿದೆ.












Click it and Unblock the Notifications