• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದು ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್, ಮತ್ತೊಂದರಲ್ಲಿ ನೆಗೆಟಿವ್, ಯಾವುದನ್ನು ನಂಬಬೇಕು?

|

ಬೆಂಗಳೂರು, ಏಪ್ರಿಲ್ 02: ಬೆಂಗಳೂರಿನ ದಂಪತಿ ಮೊದಲ ಬಾರಿ ಕೊರೊನಾ ಪರೀಕ್ಷೆ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದ್ದು, ಬಳಿಕ ಇನ್ನೆರೆಡು ಬಾರಿ ಪರೀಕ್ಷಿಸಿದಾಗ ನೆಗೆಟಿವ್ ಬಂದಿದ್ದು ಗೊಂದಲ ಉಂಟಾಗಿದೆ.

ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಕಾರಣ ದಂಪತಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು, ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದರೆ, ಮತ್ತೆರೆಡು ಬಾರಿ ನೆಗೆಟಿವ್ ಬಂದಿದೆ.

ಕೊರೊನಾ 2ನೇ ಅಲೆ, ರಾಜ್ಯದಲ್ಲಿ ಲಾಕ್‌ಡೌನ್, ನೈಟ್ ಕರ್ಫ್ಯೂ ಇಲ್ಲ: ರವಿಕುಮಾರ್

ಮಾರ್ಚ್ 23 ರಂದು ದಂಪತಿ ಆಸ್ಪತ್ರೆಗೆ ತೆರಳಿದ್ದರು, ಆಸ್ಪತ್ರೆಯಲ್ಲಿ ಫಾರ್ಮ್ ತುಂಬಲು ಹೇಳಿದಾಗ ಆಶ್ಚರ್ಯವಾಗಿತ್ತು ಹಾಗೆಯೇ ಒಬ್ಬ ವ್ಯಕ್ತಿಗೆ 1200 ರೂ. ತೆಗೆದುಕೊಂಡರು.

ಮರುದಿನ ವರದಿ ಪಾಸಿಟಿವ್ ಬಂದಿತ್ತು, ನಮ್ಮ ಮನೆಯಲ್ಲಿ ವಯಸ್ಸಾದ ತಂದೆತಾಯಿ ಇದ್ದಾರೆ, 20 ತಿಂಗಳ ಮಗುವಿದೆ ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ತಲೆನೋವು ಉಂಟು ಮಾಡಿದ್ದರು.

ಬಳಿಕ ಮಣಿಪಾಲ್ ಆಸ್ಪತ್ರೆಗೆ ತೆರಳಿ ಅದೇ ಸಂಜೆ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಪ್ರತಿಯೊಬ್ಬರಿಗೆ 2900 ತೆಗೆದುಕೊಂಡರು. 4-5 ತಾಸಿನ ಒಳಗಾಗಿ ವರದಿ ಬಂದಿದ್ದು, ಅದರಲ್ಲಿ ನೆಗೆಟಿವ್ ಎಂದಿತ್ತು ಇದರಿಂದ ಗಾಬರಿಗೊಂಡೆವು ಎಂದು ದಂಪತಿ ಹೇಳಿದ್ದಾರೆ.

ಬಳಿಕ ಮತ್ತೆ ಅದೇ ಆಸ್ಪತ್ರೆಗೆ ಹೋಗಿ ಈ ವಿಚಾರವನ್ನು ಹೇಳಿದಾಗ ಅದೇ ಮಾದರಿಯನ್ನು ಮತ್ತೆ ಪರೀಕ್ಷಿಸುವುದಾಗಿ ಹೇಳಿದ್ದಾರೆ, ಇನ್ನೂ ವರದಿ ಬರಬೇಕಿದೆ.

ಮಾರ್ಚ್ 26 ರಂದು ಮೂರನೇ ಬಾರಿ ಚಿನ್ಮಯ್ ಮಿಷನ್ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದಾಗ 300 ರೂ ಪ್ರತಿ ವ್ಯಕ್ತಿಗೆ ಹಾಗೂ ಕನ್ಸಲ್ಟೇಷನ್ ಫೀ ಆಗಿ 700 ರೂ ಕೊಡುವಂತೆ ಹೇಳಿದರು. ಅಲ್ಲಿ ವರದಿ ನೆಗೆಟಿವ್ ಬಂದಿದೆ. ಹಾಗೆಯೇ ಇದು ಆಸ್ಪತ್ರೆಗಳ ನಿರ್ಲಕ್ಷ್ಯವೋ ಎನು ಎಂಬುದು ತಿಳಿದಿಲ್ಲ ಎಂದಿದ್ದಾರೆ.

   ಭಾರತದಲ್ಲಿ ಮತ್ತೆ ಮಹಾಮಾರಿ ಕೊರೊನಾ ಸ್ಫೋಟ..! | Oneindia Kannada

   English summary
   Doubts are being raised over the accuracy of COVID-19 tests after a Bengaluru couple decided to test themselves since they came in contact with an infected person last week even though they were not experiencing any symptoms.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X