ಒಂದು ವರ್ಷಕ್ಕೆ 47,00,000 ರೂಪಾಯಿ ಖರ್ಚು ಮಾಡಿದ ಬೆಂಗಳೂರಿನ ದಂಪತಿ: ಹೆಚ್ಚು ವೆಚ್ಚ ಯಾವುದಕ್ಕೆ? ಇಲ್ಲಿದೆ ಶಾಕಿಂಗ್ ಮಾಹಿತಿ
ಬೆಂಗಳೂರು, ಜನವರಿ 5: ಕೆಲವೊಂದು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಲಿರುತ್ತವೆ. ಹಾಗೆಯೇ ಇದೀಗ ಬೆಂಗಳೂರು ದಂಪತಿ ಈ ವರ್ಷ ಖರ್ಚು ಮಾಡಿದ ಹಣದ ಮಾಹಿತಿಯನ್ನು ಹಚಿಕೊಂಡಿದ್ದಾರೆ. ಇದು ಭಾರೀ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಹಾಗಾದ್ರೆ ಯಾವುದಕ್ಕೆ ಹೆಚ್ಚು ಖರ್ಚು ಮಾಡಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ವಾಸ ಮಾಡುವವರಿಗೆ ಪ್ರತಿನಿತ್ಯವೂ ಖರ್ಚು ಇದ್ದೇ ಇರುತ್ತದೆ. ಆದರೆ, ಇಲ್ಲೊಬ್ಬ ದಂಪತಿ 2025ರ ವಾರ್ಷಿಕ ಖರ್ಚಿನ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಇದೀಗ ದೊಡ್ಡ ಮಟ್ಟದಲ್ಲಿ ವೈರಲ್ ಆಗುವುದಲ್ಲದೆ, ಚರ್ಚೆಗೂ ಕಾರಣವಾಗಿದೆ.

ಪ್ರಕೃತಿ ಅರೋರಾ ಮತ್ತು ಆಶಿಶ್ ಕುಮಾರ್ ಎಂಬ ದಂಪತಿ ಕಳೆದ ವರ್ಷಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಇವರು ಬಾಡಿಗೆ, ಪ್ರವಾಸ, ಫಿಟ್‌ನೆಸ್ ಮತ್ತು ಶಾಪಿಂಗ್‌ವರೆಗೆ ಎಷ್ಟು ಖರ್ಚು ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಾರ್ಷಿಕ ಖರ್ಚಿನ ವಿವರ: ಬೆಂಗಳೂರಿನ ಕಂಟೆಂಟ್ ಕ್ರಿಯೇಟರ್ ದಂಪತಿ ಪ್ರಕೃತಿ ಅರೋರಾ ಮತ್ತು ಆಶಿಶ್ ಕುಮಾರ್ ಎಂಬುವವರು 2025ರ ತಮ್ಮ ವಾರ್ಷಿಕ ವೆಚ್ಚಗಳ ವಿವರವನ್ನು ಬಿಚ್ಚಿಟ್ಟಿದ್ದಾರೆ. ಇದರಲ್ಲಿ ಅವರು ಒಂದಲ್ಲ.. ಎರಡಲ್ಲ, ಬರೋಬ್ಬರಿ 47,00,000 ರೂಪಾಯಿ ಖರ್ಚು ಮಾಡಲಾಗಿದೆ. ಇದರಲ್ಲಿ ಬಾಡಿಗೆ, ಫಿಟ್‌ನೆಸ್, ಆಹಾರ ಹಾಗೂ 29,00,000 ರೂಪಾಯಿ ಪ್ರವಾಸಕ್ಕೆ ಸೇರಿದೆ ಎಂದು ತಿಳಿಸಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಭಾರೀ ಚರ್ಚೆ ಹುಟ್ಟುಹಾಕಿದೆ.
ಬೆಂಗಳೂರಿನಲ್ಲಿ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡಸುತ್ತಿರುವ ಇವರ ವಾರ್ಷಿಕ ಬಾಡಿಗೆ 5 ಲಕ್ಷ ರೂಪಾಯಿ ಜೊತೆಗೆ ಫಿಟ್‌ನೆಸ್‌ಗೂ ಖರ್ಚು ಮಾಡಿದ್ದಾರೆ. ಇದಕ್ಕಾಗಿ ವೈಯಕ್ತಿಕ ಟ್ರೈನರ್ ಅನ್ನು ಸಹ ನೇಮಕ ಮಾಡಿಕೊಂಡಿದ್ದಾರೆ. ಇದಕ್ಕೆ ವರ್ಷಕ್ಕೆ ಒಟ್ಟು 1 ಲಕ್ಷ ರೂಪಾಯಿ ಖರ್ಚಾಗುತ್ತಿತ್ತು. ದಿನಸಿ, ಸಲಾಡ್‌ಗಳನ್ನು ಆರ್ಡರ್ ಮಾಡಿ ಮತ್ತು ಹೊರಗೆ ತಿನ್ನುವುದರಿಂದ ವಾರ್ಷಿಕ 2.5 ಲಕ್ಷ ರೂಪಾಯಿ ವೆಚ್ಚ ಆಗಿದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಮನೆ ಕೆಲಸದವರಿಗೆ, ಅಪ್ಲಿಕೇಶನ್ ಚಂದಾದಾರಿಕೆಗಳಿಗೆ ಒಟ್ಟು 1.5 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಆರೈಕೆ ಮತ್ತು ಕ್ಯಾಬ್ ಪ್ರಯಾಣದಂತಹ ಇತರ ವೆಚ್ಚಗಳು ಒಟ್ಟು 1.3 ಲಕ್ಷ ರೂಪಾಯಿ ಆಗಿದೆ ಎಂದು ತಿಳಿಸಿದ್ದಾರೆ. ಇಲ್ಲಿ ಗಮನಿಸುವುದಾದ್ರೆ, ಇವರು ಹೆಚ್ಚು ಹಣ ಖರ್ಚು ಮಾಡಿರುವುದು ಪ್ರವಾಸಕ್ಕೆ. ವರ್ಷದಲ್ಲಿ 63 ವಿಮಾನಗಳಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಯಾವುದಕ್ಕೆ ಹೆಚ್ಚು ವೆಚ್ಚ?: 2025ರಲ್ಲಿ 13 ದೇಶಗಳಿಗೆ ಭೇಟಿ ನೀಡಿದ್ದಾರೆ. ಹೋಟೆಲ್‌ಗಳು ಮತ್ತು ಏರ್ ಬೆಡ್ ಅಂಡ್ ಬ್ರೇಕ್‌ಫಾಸ್ಟ್‌ಗಳಲ್ಲಿ 121 ರಾತ್ರಿ ಕಳೆದಿದ್ದಾರೆ. ಒಟ್ಟು 29,00,000 ರೂಪಾಯಿ ಖರ್ಚು ಮಾಡಿದ್ದಾರೆ. ಕಂಟೆಂಟ್ ಕ್ರಿಯೇಟರ್ ಆಗಿರುವ ಈ ದಂಪತಿ ಇದಕ್ಕಾಗಿ 2.5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಜೊತೆಗೆ ಇತರ ವಸ್ತುಗಳಿಗಾಗಿ 4.5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಒಟ್ಟು 2025ರಲ್ಲಿ ವಾರ್ಷಿಕ ಖರ್ಚು ಸುಮಾರು 47 ಲಕ್ಷ ರೂಪಾಯಿ ಎಂದು ಹೇಳಿದ್ದಾರೆ. ಇನ್ನೂ ಇದಕ್ಕೆ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ನಮಗೂ ಕೂಡ ಈ ರೀತಿ ಸುತ್ತಬೇಕು ಎಂಬ ಆಸೆ ಇದೆ. ಐಡಿಯಾ ಕೊಡಿ ಎಂದು ಒಬ್ಬರು ಕೇಳಿದ್ದಾರೆ. ಇನ್ನೂ ಕೆಲವರು ನಿಮಗೆ ದಿನಕ್ಕೆ ಎಷ್ಟು ಆದಾಯ ಇದೆ ಅಂತಲೂ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಪ್ರವಾಸಕ್ಕೆ ನೀವು ಇಷ್ಟೊಂದು ಹಣ ಖರ್ಚು ಮಾಡಿದ್ದೀರಿ. ಪ್ರವಾಸ ಮಾಡುವುದು ಒಳ್ಳೆಯದೇ. ಆದರೆ, ಇಷ್ಟೊಂದು ಹಣ ಹೇಗೆ ಬರುತ್ತದೆ? ಕಂಟೆಂಟ್ ಕ್ರಿಯೆಟ್ ಮಾಡುವುದರಿಂದ ಇಷ್ಟೊಂದು ಹಣ ಬರುತ್ತದೆ ಎಂದಾದ್ರೆ ನಾಳೆಯಿಂದ ನಾವು ಕೂಡ ಈ ಕೆಲಸಕ್ಕೆ ಇಳಿದು ಕಂಟೆಂಟ್ ಕೊಡುತ್ತೇವೆ ಅಂತಲೂ ಹೇಳಿದ್ದಾರೆ.












Click it and Unblock the Notifications