ಪೌರಕಾರ್ಮಿಕರ ಬೋನಸ್ ಹಣದಲ್ಲಿ ವಸೂಲಿ, ಕಮಿಷನ್ ಪಡೆದರೆ ಕ್ರಿಮಿನಲ್ ಕೇಸ್: ಜಿಬಿಎ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪೌರಕಾರ್ಮಿಕರ ಬೋನಸ್ ಹಣದಲ್ಲಿ ಕಮಿಷನ್ ಅಥವಾ ಪಾಲು ಕೇಳುವುದು, ವಸೂಲಿ ಮಾಡುವುದು ಕಂಡುಬಂದರೆ ಸಂಬಂಧಪಟ್ಟ ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಕ್ರಿಮಿನಲ್ ಮಕೋದ್ದಮೆ ದಾಖಲಿಸಲಾಗುವುದು ಎಂದು ಜಿಬಿಎ ಖಡಕ್ ಎಚ್ಚರಿಕೆ ನೀಡಿದೆ.

ಪೌರಕಾರ್ಮಿಕರು ಯಾವುದೇ ವ್ಯಕ್ತಿ ಅಥವಾ ಸಂಘ-ಸಂಸ್ಥೆಗಳಿಗೆ ಬೋನಸ್ ಹಣದಲ್ಲಿ ಕಮಿಷನ್ ನೀಡಬಾರದು. ಇಂತಹ ಪ್ರಕರಣಗಳು ಕಂಡುಬಂದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಿಳಿಸಿದೆ.

Bengaluru Civic Workers

ಬ್ಯಾಂಕ್ ಖಾತೆಗೆ 22,000 ರೂ. ಬೋನಸ್

2026ನೇ ಸಾಲಿನ ಸಂವಿಧಾನ ಶಿಲ್ಪಿ ಡಾ. ಬಿ.ಆ‌ರ್. ಅಂಬೇಡ್ಕರ್ ಜಯಂತಿಯನ್ನು ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರಿಗೆ ಮತ್ತು 'ಡಿ' ಗ್ರೂಪ್ ದರ್ಜೆಯ ನೌಕರರಿಗೆ ಬೋನಸ್ ಮಾದರಿಯಲ್ಲಿ 22,000 ರೂಪಾಯಿ ಹಣವನ್ನು ಅವರವರ ಬ್ಯಾಂಕ್‌ ಖಾತೆಗೆ ಪಾವತಿಸಲು ಆದೇಶಿಸಲಾಗಿದೆ.

ಬೋನಸ್ ಪಾವತಿ ಸಂದರ್ಭದ ಲಾಭ ಪಡೆಯಲು ಕೆಲವು ಸಂಘ ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳು ಸಂಘ ಸಂಸ್ಥೆಗಳ ನಾಯಕರುಗಳೆಂದು ಹೇಳಿಕೊಂಡು ಪೌರ ಕಾರ್ಮಿಕರುಗಳ ಬಳಿ ಬೋನಸ್ ಹಣವನ್ನು ಮಂಜೂರು ಮಾಡಿಸಿರುವುದಾಗಿ ಕಾರಣ ಹೇಳಿದ್ದಾರೆ. ಜೊತೆಗೆ ಅವರಿಗೆ ನೀಡಲಾದ ಬೋನಸ್ ಹಣದಲ್ಲಿ ಶೇಕಡಾವಾರು ಹಣ ನೀಡಬೇಕೆಂದು ಪೌರ ಕಾರ್ಮಿಕರಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಮತ್ತು ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ಈ ಹಿನ್ನೆಲೆಯಲ್ಲಿ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬಟವಾಡೆ ಅಧಿಕಾರಿಗಳು ಪೌರಕಾರ್ಮಿಕರ ಬಳಿ ಸಂಘಸಂಸ್ಥೆಯವರು/ನಾಯಕರುಗಳೆಂದು ಹೇಳಿಕೊಂಡು ಹಣದ ಬೇಡಿಕೆ ಇಟ್ಟಿರುವ ದೂರಿನ ಕುರಿತು ಕೂಡಲೇ ಪರಿಶೀಲಿಸಬೇಕು. ಎಲ್ಲ ಪೌರ ಕಾರ್ಮಿಕರುಗಳಿಗೆ ಯಾವುದೇ ಸಂಘ, ಸಂಸ್ಥೆಯವರು/ನಾಯಕರುಗಳೆಂದು ಹೇಳಿಕೊಂಡು ಬರುವ ವ್ಯಕ್ತಿಗಳಿಗೆ ಹಣವನ್ನು ನೀಡದಂತೆ ಅರಿವು ಮೂಡಿಸಲು ಬಟವಾಡೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು. ಈ ರೀತಿಯ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಿಮನಲ್‌ ಮೊಕದ್ದಮೆ ಹೂಡಲು ಎಲ್ಲಾ ಬಟವಾಡೆ ಅಧಿಕಾರಿಗಳಿಗೆ ಜಿಬಿಎ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

H1N1 ಪ್ರಕರಣ ಪತ್ತೆ ಆಯ್ತಾ?

ಬೆಂಗಳೂರಿನ ಪ್ರತಿಷ್ಠಿತ ಕ್ಲಾರೆನ್ಸ್ ಹೈಸ್ಕೂಲ್‌ನಲ್ಲಿ ಜಿಬಿಎ ಆರೋಗ್ಯಾಧಿಕಾರಿಗಳು ಆರೋಗ್ಯ ನಿಗಾ ವಹಿಸಿದ್ದಾರೆ. 215 ವಿದ್ಯಾರ್ಥಿಗಳನ್ನು ಪರಿಶೀಲಿಸಿದ್ದಾರೆ. ಅವರಿಗೆಲ್ಲ ಹೇಳಿಕೊಳ್ಳುವಂತಹ ಗರಿಷ್ಠ ಮಟ್ಟದ ಕಾಯಿಲೆ H1N1ಲಕ್ಷಣಗಳಿಲ್ಲ ಎಂದಿರುವ ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ಸಾರ್ವಜನಿಕ ಆರೋಗ್ಯ ಇಲಾಖೆಯು ಸಕ್ರಿಯ ಆರೋಗ್ಯ ತಪಾಸಣೆ ಮುಂದುವರಿಸಲಾಗಿದೆ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ವೈದ್ಯ ಸಿಬ್ಬಂದಿ ಶಾಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿದ್ದು, ಯಾರಲ್ಲೂ ಪಾಸಿಟಿವ್ ಪ್ರಕರಣ ಪತ್ತೆ ಆಗಿಲ್ಲ ಎಂದು ಪಾಲಿಕೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+