Bengaluru Rain: ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ಬೆಂಗಳೂರಿನಲ್ಲಿ ಇಂದಿನಿಂದ ಮಳೆ ಎಂದ ಹವಾಮಾನ ಇಲಾಖೆ

ಬೆಂಗಳೂರು, ಮಾರ್ಚ್ 20: ಇತ್ತೀಚಿನ ವಾರಗಳಲ್ಲಿ ಉತ್ತರ ಕರ್ನಾಟಕಕ್ಕೂ ಬೆಂಗಳೂರಿನ ಈ ಬಿಸಿಲಿಗೂ ಯಾವುದೇ ವ್ಯತ್ಯಾಸ ಕಾಣಿಸುತ್ತಿಲ್ಲ. ಸೂರ್ಯ ಬೆಂಗಳೂರಿಗರ ತಲೆಯ ಮೇಲೆಯೇ ಪಟ್ಟುಬಿಡದೆ ಕೂತಿದ್ದಾನೆ. ಮೊದಲಿದ್ದ ತಣ್ಣಗಿನ ವಾತಾವಾರಣ ಈಗ ಊಹಿಸಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ನಾಗರಿಕರನ್ನು ಸಂಕಷ್ಟಕ್ಕೆ ನೂಕಿರುವ ಕುಡಿಯುವ ನೀರಿನ ಬಿಕ್ಕಟ್ಟು ಬೇರೆ.

ಬೆಂಗಳೂರಿನಲ್ಲಿ ಒಂದು ತಿಂಗಳಿನಿಂದ ಕುಡಿಯುವ ನೀರಿನ ಬಿಕ್ಕಟ್ಟು ಹೆಚ್ಚಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಅಂತರ್ಜಲ ಇಲ್ಲದೆ ನೀರು ಸಿಗುತ್ತಿಲ್ಲ. ಕಾವೇರಿ ನೀರಿನ ಮೇಲೆ ಇಡೀ ಸಿಲಿಕಾನ್ ಸಿಟಿ ಅವಲಂಬಿಸಿದೆ. ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇವೆಲ್ಲದರ ನಡುವೆ ಜನರ ಒಂದೇ ಪ್ರಶ್ನೆ ಮಳೆ ಬರೋದು ಯಾವಾಗ ಅನ್ನೋದು.

Bengaluru City Will get Rain from March 20 Predicts India Meteorological Department

ಬೆಂಗಳೂರಿಗೆ ಬರಲಿದೆ ಮಳೆ!

ಹೌದು... ಬೆಂಗಳೂರಿನಲ್ಲಿ ಮಳೆ ಬಂದರೆ ಅದೆಷ್ಟೋ ಸಮಸ್ಯೆಗಳು ತಾವಾಗಿಯೇ ಬಗೆಹರಿಯಲಿವೆ. ನೀರಿನ ಬಿಕ್ಕಟ್ಟು, ತಾಪಮಾನ ಸುಧಾರಿಸಲಿದೆ. ಅದೃಷ್ಟವಶಾತ್, ಹವಾಮಾನ ವರದಿಗಳು ಶುಭಸುದ್ದಿಯನ್ನೇ ನೀಡುತ್ತಿವೆ. ವಿಶೇಷವಾಗಿ ದಕ್ಷಿಣ ಭಾರತದ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಳೆ ಸುರಿಯಲು ಆರಂಭಿಸಿದೆ. ಭಾನುವಾರದಂದು ಉತ್ತರ ಒಳನಾಡಿನಲ್ಲಿ ಲಘು ಮಳೆಯಾದ ನಂತರ, ಬೆಂಗಳೂರು ಮತ್ತು ದಕ್ಷಿಣ ಆಂತರಿಕ ಕರ್ನಾಟಕದ ಉಳಿದ ಭಾಗಗಳಲ್ಲಿ ಈ ಬುಧವಾರದಿಂದ (ಮಾರ್ಚ್ 20) ಆರ್ದ್ರ ವಾತಾವರಣವನ್ನು ಅನುಭವಿಸುವ ಮುನ್ಸೂಚನೆ ಇದೆ.

ಉದ್ಯಾನನಗರಿಯಲ್ಲಿ ಯಾವಾಗ ಇದೆ ಮಳೆರಾಯನ ಕೃಪೆ?

ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಮೈಸೂರು, ತುಮಕೂರು ಮತ್ತು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬುಧವಾರದಿಂದ ಭಾನುವಾರದವರೆಗೆ ಅಂದರೆ ಮಾರ್ಚ್ 20 ರಿಂದ ಮಾರ್ಚ್ 23)ರ ವರೆಗೆ ಲಘು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

Bengaluru City Will get Rain from March 20 Predicts India Meteorological Department

ಹವಾಮಾನ ಇಲಾಖೆಯು ಉತ್ತರ ಒಳ ಕರ್ನಾಟಕದ ಪ್ರತ್ಯೇಕ ಪ್ರದೇಶಗಳಲ್ಲಿ ಲಘು ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವೆ ಮುಂದುವರೆಯಲಿದೆ. ಹೆಚ್ಚುವರಿಯಾಗಿ, ಬಾಗಲಕೋಟೆ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಮೈಸೂರು ಜಿಲ್ಲೆಗಳು ಸೇರಿದಂತೆ ಮಧ್ಯ ಕರ್ನಾಟಕದ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ.

ಜಲಾಶಯಗಳ ನೀರಿನ ಮಟ್ಟ

ಕೇಂದ್ರ ಜಲ ಆಯೋಗದ ಪ್ರಕಾರ, ಕರ್ನಾಟಕದ 16 ಪ್ರಮುಖ ಜಲಾಶಯಗಳು ಕಳೆದ ವರ್ಷದ 45% ಗೆ ಹೋಲಿಸಿದರೆ 29% ಮಾತ್ರ ತುಂಬಿವೆ. ಇವುಗಳಲ್ಲಿ ಹನ್ನೆರಡು ಜಲಾಶಯಗಳು 10 ವರ್ಷಗಳ ಸರಾಸರಿ 40% ಕ್ಕಿಂತ ಕಡಿಮೆ ನೀರಿನ ಮಟ್ಟವನ್ನು ಹೊಂದಿವೆ ಎಂದು ದಿ ಹಿಂದೂ ವರದಿ ಮಾಡಿದೆ.

ಕರ್ನಾಟಕದಲ್ಲಿ ಸಾಮಾನ್ಯವಾಗಿ ಮಾರ್ಚ್ ಮತ್ತು ಮೇ ನಡುವೆ ಮುಂಗಾರು ಪೂರ್ವ ಮಳೆ ಸುರಿಯುತ್ತದೆ. ಕಳೆದ ವರ್ಷ ರಾಜ್ಯದ ಒಳನಾಡಿನಲ್ಲಿ 18 ದಿನಗಳ ಭಾರೀ ಮಳೆ ಸುರಿದಿತ್ತು. ಆದರೆ, ಒಣಗುತ್ತಿರುವ ಎಲ್ ನಿನೋ ವಿದ್ಯಮಾನವು 2023 ರಲ್ಲಿ ರಾಜ್ಯದಾದ್ಯಂತ ಮಳೆಯ ಕೊರತೆಯನ್ನು ಉಂಟುಮಾಡಿತು, ಈ ಪರಿಸ್ಥಿತಿಯು ಇನ್ನೂ ಮುಂದುವರೆದಿದೆ. ಕರ್ನಾಟಕವು ಮಾರ್ಚ್ 1 ಮತ್ತು 17 ರ ನಡುವೆ ಗಮನಾರ್ಹ ಮಳೆ ಕೊರತೆಯನ್ನು ದಾಖಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+