ಬೆಂಗಳೂರು ಪೊಲೀಸರ ನಿರ್ಮಾಣದ 'ವಿದಾಯ'ದ ಥೀಮ್ ಏನು?
ಬೆಂಗಳೂರು, ಆಗಸ್ಟ್ 29: ಶಾಲಾ, ಕಾಲೇಜು ವಿದ್ಯಾರ್ಥಿಗಳು ಮಾದಕವಸ್ತುಗಳ ದಾಸರಾಗಿ ಜೀವವನ್ನು ಕಳೆದುಕೊಳ್ಳುತ್ತಿರುವ ಕುರಿತಂತೆ ಜನಜಾಗೃತಿ ಮೂಡಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.
ಈ ಕುರಿತಂತೆ ಬೆಂಗಳೂರು ನಗರದಲ್ಲಿ ಅಭಿಯಾನ ಆರಂಭಿಸಿರುವ ಪೊಲೀಸರು ಅದರ ಭಾಗವಾಗಿ ಒಂಬತ್ತು ನಿಮಿಷ ನಲವತ್ತು ಸೆಕೆಂಡುಗಳ ವಿದಾಯ ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಯೂಟ್ಯೂಬ್ ನಲ್ಲಿ ಸಾರ್ವಜನಿಕರಿಗೆ ಮನವರಿಗೆ ಮಾಡಲು ಮುಂದಾಗಿದ್ದಾರೆ.
ಗಾಂಜಾ, ಅಫೀಮು ಮಾತ್ರವಲ್ಲದೆ ಸಿಗರೇಟ್, ತಂಬಾಕು, ಮದ್ಯಪಾನದಿಂದ ಯುವ ಜನಾಂಗದ ಮೇಲೆ ದೈಹಿಕ ಮತ್ತು ಮಾನಸಿಕವಾಗಿ ಆಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
"Vidaya" - Drug Effects Awareness short movie by Bengaluru City Police BCP https://t.co/F60bKo1S8H via @YouTube @CPBlr
— BengaluruCityPolice (@BlrCityPolice) August 29, 2018
ಯುವಕ, ಯುವತಿಯರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಹಾಗೂ ಸ್ವಾಂತ್ರತ್ರ್ಯವನ್ನು ಸ್ವೇಚ್ಚಾಚಾರವನ್ನಾಗಿಸಿ ದಾರಿತಪ್ಪುತ್ತಿರುವ ಕುರಿತಂತೆ ಚಿತ್ರೀಕರಿಸಲಾಗಿದೆ.ಒಂಬತ್ತು ನಿಮಿಷ ಸಾಕ್ಷ್ಯಚಿತ್ರದಲ್ಲಿ ಗೌರವ್ ಎಂಬ ಯುವಕ ಎಂಜಿನಿಯರಿಂಗ್ ಶಿಕ್ಷಣ ಪಡೆಯುವ ವೇಳೆ ಸಹವಾಸದೋಷದಿಂದ ಮಾದಕ ವಸ್ತುಗಳಿಗೆ ದಾಸನಾಗಿ ಕೊನೆಗೆ ತನ್ನ ಜೀವನವನ್ನೇ ಬಲಿ ಕೊಡುವ ಕಥಾ ಹಂದರವನ್ನೊಳಗೊಂಡ ಸಾಕ್ಷ್ಯಚಿತ್ರವು ಯುವಕರು ದಾರಿತಪ್ಪದಂತೆ ಪ್ರೇರೇಪಿಸುತ್ತದೆ.

ಇದರಲ್ಲಿ ಗೌರವ್ ಎಂಬ ಯುವಕನ ತಂದೆ ವಿದ್ಯಾರ್ಥಿ ಸಮೂಹದ ಮನಮುಟ್ಟುವಂತಿದೆ, ಆಟ, ಪಾಠ ಚಟುವಟಿಕೆಯಲ್ಲಿ ಚುರುಕಾಗಿದ್ದ ವಿದ್ಯಾರ್ಥಿ ಎಂಜಿನಿಯರಿಂಗ್ ಗೆ ಪ್ರವೇಶ ಪಡೆಯುತ್ತಿದ್ದಂತೆಯೇ ಸಹಪಾಠಿಗಳೊಂದಿಗೆ ಸೇರಿ ಹಾದಿತಪ್ಪಿ ಕೊನೆಗೆ ಜೀವವನ್ನೇ ಕಳೆದುಕೊಳ್ಳುವುದನ್ನು ಈ ಸಾಕ್ಷ್ಯಚಿತ್ರದ ಮೂಲಕ ತೋರಿಸಲಾಗಿದೆ. ಯುವ ಪೀಳಿಗೆ ಕ್ಷಣಿಕ ಖುಷಿಗೋಸ್ಕರ ಇಡೀ ಜೀವನವನ್ನೇ ಹಾಳುಮಾಡಿಕೊಳ್ಳಬಾರದು ಎನ್ನುವ ಬುದ್ಧಿಮಾತನ್ನು ಈ ವಿಡಿಯೋ ಸಾರುತ್ತದೆ.












Click it and Unblock the Notifications