ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕಾಣೆಯಾದವರು ವಾಪಸು ಸಿಗಲ್ಲ: ಅಪರಾಧ ಪತ್ತೆಯಲ್ಲಿ ಪೊಲೀಸರ ವಿಫಲ?

|
Google Oneindia Kannada News

ಬೆಂಗಳೂರು, ಜ. 10: ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗುತ್ತಿವೆ. ಆದರೆ, ದಾಖಲಾದ ಅಪರಾಧ ಪ್ರಕರಣಗಳಲ್ಲಿ ಶೇ. 50 ರಷ್ಟು ಕೂಡ ಪತ್ತೆಯಾಗುತ್ತಿಲ್ಲ. ಇನ್ನೊಂದೆಡೆ ಪ್ರತಿ ವರ್ಷ ಮೂರು ಸಾವಿರ ಮಂದಿ ಕಾಣೆಯಾಗುತ್ತಿದ್ದು, ಕೇವಲ 600 ಮಂದಿಯಷ್ಟು ಪತ್ತೆಯಾಗುತ್ತಿಲ್ಲ ಎಂಬ ಆತಂಕಕಾರಿ ಸಂಗತಿ ಹೊರ ಬಿದ್ದಿದೆ. ಬೆಂಗಳೂರು ಅಪರಾಧ ಲೋಕದ ಚಿತ್ರಣ ವಿವರ ಇಲ್ಲಿದೆ.

2021 ನೇ ಸಾಲಿನಲ್ಲಿ ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ದಾಖಲಾದ ಅಪರಾಧಗಳ ಸಂಖ್ಯೆ 7953, ಅದರಲ್ಲಿ ಪೊಲೀಸರು ಪತ್ತೆ ಮಾಡಿರುವುದು ಕೇವಲ 2749 ಅಂದರೆ ಶೇ. 50 ಕ್ಕಿಂತಲೂ ಹೆಚ್ಚು ಪ್ರಕರಣ ಪತ್ತೆ ಮಾಡಲಾಗುತ್ತಿಲ್ಲ. ಇನ್ನು ಬೆಂಗಳೂರು ಲೋಕದ ಅಪರಾಧ ಲೋಕದ ಅಂಕಿ ಅಂಶಗಳ ವಿವರ ಇಲ್ಲಿದೆ.

ಕೊಲೆ ಪ್ರಕರಣಗಳು:

ಕೊಲೆ ಪ್ರಕರಣಗಳು:

ರಾಜಧಾನಿ ಬೆಂಗಳೂರಿನಲ್ಲಿ 2021 ನೇ ಸಾಲಿನಲ್ಲಿ 148 ಕೊಲೆ ಪ್ರಕರಣ ದಾಖಲಾಗಿದ್ದು, 146 ಕೇಸು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಎರಡು ಪ್ರಕರಣವಷ್ಟೇ ಪತ್ತೆಯಾಗಿಲ್ಲ. ಇನ್ನು 2020 ಕ್ಕೆ ಹೋಲಿಸಿದರೆ ಕೊಲೆ ಪ್ರಕರಣಗಳು ಬೆರಳೆಣಿಕೆ ಕಡಿಮೆಯಾಗಿವೆ. 2020 ರಲ್ಲಿ 173 ಕೇಸು ದಾಖಲಾಗಿದ್ದವು, ಈ ವರ್ಷ 148 ಕೇಸು ದಾಖಲಾಗಿವೆ. ಲಾಭಕ್ಕಾಗಿ ನಡೆದ ಎಂಟು ಕೊಲೆ ಪ್ರಕರಣದಲ್ಲ ಅಷ್ಟೂ ಪತ್ತೆ ಮಾಡಿದ್ದಾರೆ.

ಡಕಾಯಿತಿ ಹಾಗೂ ದರೋಡೆ:

ಡಕಾಯಿತಿ ಹಾಗೂ ದರೋಡೆ:

ಬೆಂಗಳೂರಲ್ಲಿ ಡಕಾಯಿತಿ ಹಾಗೂ ದರೋಡೆ ಪ್ರಕರಣ ಪರಿಗಣಿಸಿದರೆ ಕಳೆದ ವರ್ಷಕ್ಕಿಂತಲೂ ಈ ವರ್ಷ ದರೋಡೆ ಪ್ರಕರಣ ಜಾಸ್ತಿಯಾಗಿವೆ. 2020 ನೇ ಸಾಲಿನಲ್ಲಿ 30 ಡಕಾಯಿತಿ ಪ್ರಕರಣ ವರದಿಯಾಗಿದ್ದು, 29 ಪ್ರಕರಣ ಪತ್ತೆಯಾಗಿವೆ. 2021 ನೇ ಸಾಲಿನಲ್ಲಿ ದಾಖಲಾದ 35 ಪ್ರಕರಣದಲ್ಲಿ 34 ಡಕಾಯಿತಿ ಪ್ರಕರಣ ಪತ್ತೆ ಮಾಡಿದ್ದಾರೆ. ದರೋಡೆಗೆ ಸಂಬಂಧಿಸಿದಂತೆ ಕಳೆದ ವರ್ಷ 378 ದಾಖಲಾಗಿದ್ದು, ಈ ವರ್ಷ 365 ವರದಿಯಾಗಿವೆ. ಈ ವರ್ಷ ಪತ್ತೆಯಾಗಿರುವುದು 273 ಕೇಸು ಮಾತ್ರ.

ಮನೆ ಕಳ್ಳತನ ನಿರ್ಲಕ್ಷ್ಯ

ಮನೆ ಕಳ್ಳತನ ನಿರ್ಲಕ್ಷ್ಯ

ಇನ್ನು ಬೆಂಗಳೂರಿಲ್ಲಿ ವರದಿಯಾಗುತ್ತಿರುವ ಮನೆ ಬಾಗಿಲು ಮುರಿದು ಕಳ್ಳತನ ಪ್ರಕರಣ ಪತ್ತೆ ಮಾಡುವಲ್ಲಿ ಪೊಲೀಸರು ಸೋತಿದ್ದಾರೆ. 2021 ರಲ್ಲಿ ದಾಖಲಾದ 135 ಪ್ರಕರಣದಲ್ಲಿ ಪತ್ತೆ ಮಾಡಿರುವುದು ಕೇವಲ 49. ರಾತ್ರಿ ವೇಳೆ ಆಗಿರುವ 653 ಮನೆ ಬಾಗಿಲು ಮುರಿದ ಕಳ್ಳತನ ಕೇಸುಗಳಲ್ಲಿ ಪತ್ತೆ ಮಾಡಿರುವುದು 224 ಮಾತ್ರ. ಮನೆ ಕಳ್ಳತನ ಸಂಬಂಧ ದಾಖಲಾದ 590 ಕೇಸಲ್ಲಿ ಪತ್ತೆ ಮಾಡಿರುವುದು 185 ಅಷ್ಟೇ. ಇನ್ನು ಮನೆ ಕೆಲಸಗಾರರಿಂದ ಆಗಿರುವ 179 ಕಳ್ಳತನ ಕೇಸಲ್ಲಿ ಪತ್ತೆ ಮಾಡಿರುವುದು ಕೇವಲ 59 ಮಾತ್ರ. ಸಾಮಾನ್ಯ ಕಳ್ಳತನ ಪ್ರಕರಣಗಳ ಸಂಬಂಧ 1170 ಪ್ರಕರಣಗಳಲ್ಲಿ ಪತ್ತೆ ಆಗಿರುವುದು ಕೇವಲ 343 ಎಂಬ ಸಂಗತಿ ಪೊಲೀಸರು ನೀಡಿರುವ ಅಂಕಿ ಅಂಶದಿಂದ ಬೆಳಕಿಗೆ ಬಂದಿದೆ. ಒಟ್ಟಾರೆ, ದಾಖಲಾದ 7953 ಪ್ರಕರಣದಲ್ಲಿ ಪತ್ತೆ ಮಾಡಿದ್ದು 2749 ಅಷ್ಟೇ!

ವಾಹನಗಳ ಕಳ್ಳತನ

ವಾಹನಗಳ ಕಳ್ಳತನ

ರಾಜಧಾನಿ ಬೆಂಗಳೂರು ಈಗಲೂ ದ್ವಿಚಕ್ರ ವಾಹನ ಕಳ್ಳತನ ಹಬ್ ಆಗಿಯೇ ಮಂದುವರೆದಿದೆ. ಕಳ್ಳತನ ಅಗಿರುವ ವಾಹನ ಪತ್ತೆಗೆ ಪೊಲೀಸರು ಕ್ರಮ ಜರುಗಿಸಿದಂತೆ ಕಾಣುತ್ತಿಲ್ಲ. 2021 ರಲ್ಲಿ ದಾಖಲಾದ 4126 ಕೇಸಿನಲ್ಲಿ ಕೇವಲ 915 ಅಷ್ಟೇ ಪತ್ತೆ ಮಾಡಿದ್ದಾರೆ.

ಆಘಾತ ಹುಟ್ಟಿಸಿದ ಮಿಸ್ಸಿಂಗ್ ಕೇಸ್

ಆಘಾತ ಹುಟ್ಟಿಸಿದ ಮಿಸ್ಸಿಂಗ್ ಕೇಸ್

ರಾಜಧಾನಿ ಬೆಂಗಳೂರಿನಲ್ಲಿ ವಾರ್ಷಿಕ ಮೂರು ಸಾವಿರ ವ್ಯಕ್ತಿಗಳು ಕಣ್ಮರೆಯಾಗುತ್ತಿದ್ದಾರೆ. ಅದರಲ್ಲಿ ಪತ್ತೆ ಆಗುತ್ತಿರುವುದು ಕೇವಲ 30 ಕ್ಕಿಂತಲೂ ತೀರಾ ಕಡಿಮೆ. 2021 ನೇ ಸಾಲಿನಲ್ಲಿ ದಾಖಲಾದ 3199 ಪ್ರಕರಣದಲ್ಲಿ ಕೇವಲ ಪತ್ತೆ ಆಗಿರುವುದು 654. ಉಳಿದವರು ಎನಾಗಿದ್ದಾರೆ ಎಂಬುದರ ಮಾಹಿತಿಯೇ ಇಲ್ಲ. ಒಬ್ಬ ವ್ಯಕ್ತಿಯ ಜೀವನ ವಿಚಾರಕ್ಕೆ ಬಂದರೆ, ಮಿಸ್ಸಿಂಗ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ ಕಾಣೆಯಾದವರ ಬಗ್ಗೆ ಹೆಚ್ಚು ಆದ್ಯತೆ ನೀಡಿದಂತೆ ಕಾಣುತ್ತಿಲ್ಲ. ಅದರಲ್ಲೂ ಪುರುಷರಿಗಿಂತಲೂ ಮಹಿಳೆಯರೇ ಹೆಚ್ಚು ಮಿಸ್ಸಿಂಗ್ ಆಗುತ್ತಿದ್ದಾರೆ. 2021 ರಲ್ಲಿ 2072 ಮಹಿಳೆಯರು ಮಿಸ್ಸಿಂಗ್ ಆಗಿದ್ದು, ಪತ್ತೆಯಾದವರು ಕೇವಲ 291 ಮಂದಿ. ಪುರುಷರ ವಿಚಾರಕ್ಕೆ ಬಂದರೆ ಕಾಣೆಯಾಗಿದ್ದು 1127, ಪತ್ತೆಯಾಗಿದ್ದು 363.

ಕಿಡ್ನಾಪ್ ಪ್ರಕರಣ

ಕಿಡ್ನಾಪ್ ಪ್ರಕರಣ

ರಾಜಧಾನಿಯಲ್ಲಿ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕಾಣೆಯಾದರೂ ಸಹ ಅಪಹರಣ ಪ್ರಕರಣ ದಾಖಲಾಗುತ್ತದೆ. ಇನ್ನು ಅಸಲಿ ಅಪರಹಣ ಸೇರಿದಂತೆ ಬೆಂಗಳೂರಿನಲ್ಲಿ 2021 ರಲ್ಲಿ 658 ಕಿಡ್ನಾಪ್ ಪ್ರಕರಣ ದಾಖಲಾಗಿದ್ದು, ಪತ್ತೆ ಆಗಿರುವುದು ಕೇವಲ 167 ಮಾತ್ರ. ಅದರಲ್ಲಿ 137 ಬಾಲಕರು ಅಪಹರಣವಾಗಿದ್ದು, 41 ಬಾಲಕರು ಪತ್ತೆ ಆಗಿದ್ದಾರೆ. ಆದರೆ, ಕಾಣೆಯಾದ 473 ಬಾಲಕಿಯರಲ್ಲಿ ಪತ್ತೆ ಆಗಿರುವುದು ಕೇವಲ 105 ಮಾತ್ರ. ಕಾಣೆಯಾಗುತ್ತಿರುವ ಮಕ್ಕಳು ( ಅಪಹರಣ) ಎಲ್ಲಿ ಹೋಗದ್ದಾರೆ ಎಂಬುದರ ಬಗ್ಗೆ ಪೊಲೀಸ್ ಇಲಾಖೆಯೇ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದಂತೆ ಕಾಣುತ್ತಿಲ್ಲ.

ಮಹಿಳೆಯರ ವಿರುದ್ಧ ಅಪರಾಧಗಳು

ಮಹಿಳೆಯರ ವಿರುದ್ಧ ಅಪರಾಧಗಳು

ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಸೇರಿದಂತೆ ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳು ಬೆಂಗಳೂರಿನಲ್ಲಿ ಹೆಚ್ಚಾಗಿವೆ. ಕಳೆದ ವರ್ಷ 1821 ಪ್ರಕರಣ ದಾಖಲಾಗಿದ್ದವು. ಈ ವರ್ಷ ಅವುಗಳು ಗಣನೀಯವಗಿ ಏರಿಕೆಯಾಗಿದ್ದು, 2009 ಆಗಿವೆ. ಅದರಲ್ಲಿ ಪತ್ತೆ ಮಾಡಿದ ಪ್ರಕರಣ 1829 ಮಾತ್ರ. 2021 ನೇ ಸಾಲಿನಲ್ಲಿ 115 ಅತ್ಯಾಚಾರ, 569 ಲೈಂಗಿಕ ದೌರ್ಜಜ್ಯ, 25 ಮಂದಿ ವರದಕ್ಷಿಣೆ ಕಿರುಕುಳದಿಂದ ಸಾವು, 128 ಮಾನವ ಕಳ್ಳ ಸಾಗಣೆ ಪ್ರಕರಣ, 732 ವರದಕ್ಷಿಣೆ ಕಿರುಕುಳ ಪ್ರಕರಣ ವರದಿಯಾಗಿವೆ.

ಘನ ಘೋರ ಆತ್ಮಹತ್ಯೆಗಳು

ಘನ ಘೋರ ಆತ್ಮಹತ್ಯೆಗಳು

ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವರ ಪ್ರಮಾಣ ಹೆಚ್ಚುತ್ತಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ 2021 ರಲ್ಲಿ ಹೆಚ್ಚು ಆತ್ಮಹತ್ಯೆ ಪ್ರಕರಣ ದಾಖಲಾಗಿವೆ. ಅದರಲ್ಲೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವರೇ ಹೆಚ್ಚಾಗಿದ್ದಾರೆ. 1973 ಮಂದಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟಾರೆ 2262 ಮಂದಿ ಒಂದು ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ನೂರಕ್ಕೂ ಹೆಚ್ಚು ಪ್ರಕರಣ ಹೆಚ್ಚಾಗಿವೆ. ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಪುರುಷರೇ ಹೆಚ್ಚಾಗಿದ್ದಾರೆ.

ಅಪಘಾತ ಪ್ರಕರಣಗಳು

ಅಪಘಾತ ಪ್ರಕರಣಗಳು

ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ರೀತಿಯ ಅಪಘಾತಗಳಿಗೆ ಪ್ರತಿ ವರ್ಷ ಮೂರು ಸಾವಿರ ಮಂದಿ ಸರಾಸರಿ ರಸ್ತೆಗಳಿಗೆ ಬಲಿಯಾಗುತ್ತಿದ್ದಾರೆ. ಅದರಲ್ಲಿ ಶೇ. 70 ಕ್ಕಿಂತಲೂ ಹೆಚ್ಚು ಪುರುಷರೇ ಅಪಘಾತಗಳಿಗೆ ಈಡಾಗುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ 3622 ಮಂದಿ ಅಪಘಾತಗಳಿಗೆ ಬಲಿಯಾಗಿದ್ದಾರೆ. ಅದರಲ್ಲಿಕೇವಲ 578 ಮಂದಿ ಮಾತ್ರ ಮಹಿಳೆಯರು. ಒಟ್ಟಾರೆ ಅಪಘಾತ ಮತ್ತು ಅತ್ಮಹತ್ಯೆ ಕಾರಣದಿಂದ 2021 ರಲ್ಲಿ 5884 ಮಂದಿ ಜೀವ ಕಳೆದುಕೊಂಡಿದ್ದಾರೆ.

ಮಾದಕ ವಸ್ತು ಪ್ರಕರಣ

ಮಾದಕ ವಸ್ತು ಪ್ರಕರಣ

ಇನ್ನು ಡ್ರಗ್ ಪ್ರಕರಣ ಪತ್ತೆ ಮಾಡುವಲ್ಲಿ ಬೆಂಗಳೂರು ಪೊಲೀಸರು ಮುಳುಗಿ ಹೋಗಿದ್ದಾರೆ. ಪ್ರಸಕ್ತ 2021 ನೇ ವರ್ಷದಲ್ಲಿ 4555 ಡ್ರಗ್ ಪ್ರಕರಣ ದಾಖಲಿಸಿದ್ದು, 5749 ಮಂದಿಯನ್ನು ಬಂಧಿಸಿದ್ದಾರೆ. ಬರೋಬ್ಬರಿ 60 ಕೋಟಿ ಮೊತ್ತದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಒಂದು ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದಾರೆ. ಆದರೆ ಮಾದಕ ವಸ್ತು ಬೆಲೆ ವಿಚಾರಕ್ಕೆ ಬಂದರೆ 2020 ರಲ್ಲಿ ಕೇವಲ 21 ಕೋಟಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದರು. 2019 ರಲ್ಲಿ ಕೇವಲ 3 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದರು. ಕಳೆದ ಎರಡು ವರ್ಷದಿಂದ ಬೆಂಗಳೂರು ಪೊಲೀಸರು ಡ್ರಗ್ ಕೇಸಲ್ಲಿ ಮುಳುಗಿ ಹೋಗಿದ್ದಾರೆ ಎಂಬುದಕ್ಕೆ ಇದೊಂದು ಸಾಕ್ಷಿ.

ಅಂತೂ ಬೆಂಗಳೂರು ಜನರು ಬೆಚ್ಚಿ ಬೀಳುವ ಸಂಗತಿ ಎಂದರೆ, ಆತ್ಮಹತ್ಯೆಗಳು ಮತ್ತು ಅಪಘಾತಗಳು ಹೆಚ್ಚಾಗುತ್ತಿವೆ. ಕಾಣೆಯಾದವರಲ್ಲಿ ಬಹುತೇಕರು ಪತ್ತೆಯಾಗುತ್ತಿಲ್ಲ. ಮನೆ ಕಳ್ಳತನ ಪ್ರಕರಣಗಳಲ್ಲಿ ಕಳ್ಳರು ಪತ್ತೆಯಾಗುತ್ತಿಲ್ಲ ಎಂಬುದು. ಕೊರೊನಾ ಲಾಕ್ ಡೌನ್ ನಡುವೆಯೂ ಅಪರಾಧ ಪ್ರಕರಣಗಳು ಕಡಿಮೆಯಾಗಿಲ್ಲ ಎಂಬುದನ್ನು ಈ ಅಂಕಿ ಅಂಶಗಳು ಸಾರಿ ಹೇಳುತ್ತವೆ.

Recommended Video

ಆನೆಯನ್ನ ರಕ್ಷಿಸುವಲ್ಲಿ ಯಶಸ್ವಿ ಆದ ಪೊಲೀಸರು | Oneindia Kannada

English summary
Bengaluru Commissionarte Reported and detected Crime Statistics 2021: Women's Missing cases Raised, above 70 % not traced Yet know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X