Cheetah: ಎಚ್ಚರ.. ಎಚ್ಚರ.. ಬೆಂಗಳೂರು ನಗರದಲ್ಲಿ ಚಿರತೆ ಪ್ರತ್ಯಕ್ಷ್ಯ!

ಬೆಂಗಳೂರು ನಗರಕ್ಕೂ & ಚಿರತೆಗಳಿಗೂ ಬಿಡಿಸಲಾರದ ನಂಟು ಇರಬೇಕು. ಈ ಕಾರಣಕ್ಕೇ, ಪದೇ ಪದೆ ರಾಜಧಾನಿ ಬೆಂಗಳೂರಿನ ನಗರ ಪ್ರದೇಶದಲ್ಲೂ ಚಿರತೆಗಳು ಕಾಣಿಸಿಕೊಳ್ಳುತ್ತವೆ. ಆದ್ರೆ ಕೆಲ ವರ್ಷಗಳಿಂದ ಚಿರತೆಗಳ ಓಡಾಟದಲ್ಲಿ ಗಣನೀಯ ಇಳಿಕೆ ಕಂಡಿತ್ತು. ಹೀಗಿದ್ದಾಗ ದಿಢೀರ್ ಚಿರತೆಯೊಂದು ವಸತಿ ಪ್ರದೇಶದಲ್ಲಿ ಓಡಾಡಿ, ಬೆಂಗಳೂರಿನ ಹೃದಯ ಭಾಗಕ್ಕೂ ಆಘಾತ ನೀಡಿದೆ!

ಹೌದು, ಬೆಂಗಳೂರು ದೊಡ್ಡದಾಗಿ ಬೆಳೆದಂತೆಲ್ಲಾ ಕಾಡು ನಾಶವಾಗುತ್ತಿದೆ. ಅದರಲ್ಲೂ ಈ ಮಹಾನಗರಿ ಬೆಂಗಳೂರು ಬೆಳೆಸಲು, ಕಳೆದ 20 ವರ್ಷದಲ್ಲಿ ಬೆಂಗಳೂರು ಹೊರವಲಯದ ಕಾಡುಗಳನ್ನ ನಾಶ ಮಾಡಲಾಗಿದೆ. ಇದರ ಪರಿಣಾಮ ಕಾಡು ಪ್ರಾಣಿಗಳು ನಗರಕ್ಕೆ ಬಂದು ಕಾಟ ಕೊಡುತ್ತಿವೆ. ಕೆಲ ವರ್ಷದ ಹಿಂದೆ ಚಿರತೆಯೊಂದು ಸೀದಾ ಅಪಾರ್ಟ್‌ಮೆಂಟ್ ಒಳಗೆ ನುಗ್ಗಿತ್ತು. ಅದಕ್ಕೂ ಮೊದಲು ರಾತ್ರಿ ಸಮಯಕ್ಕೆ ಸ್ಕೂಲ್ ಒಳಗೆ ಚಿರತೆ ಓಡಾಡುವ ದೃಶ್ಯ ಕಂಡು ಇಡೀ ಜಗತ್ತೇ ಶಾಕ್ ಆಗಿತ್ತು. ಬೆಂಗಳೂರಲ್ಲಿ ಚಿರತೆ ಸ್ಕೂಲ್‌ಗೆ ನುಗ್ಗಿದ್ದ ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಈಗ ಬೆಂಗಳೂರಿನ ನಡು ರಸ್ತೆಯಲ್ಲೇ ಈ ಚಿರತೆ ರಾಯ ಪ್ರತ್ಯಕ್ಷ್ಯನಾಗಿದ್ದಾನೆ.

Bengaluru Citizens Feared After Founding Cheetah Near The City Area

ಎಲ್ಲಿ ಕಂಡಿತು ಡೆಡ್ಲಿ ಚಿರತೆ?

ಬೆಂಗಳೂರು ಹೃದಯಭಾಗ ಮೆಜೆಸ್ಟಿಕ್‌ನಿಂದ ಸಮೀಪದಲ್ಲೇ ಇರುವ ಜಾಗದಲ್ಲಿ ಈಗ ಚಿರತೆ ಕಾಣಿಸಿಕೊಂಡಿದೆ. ಹೀಗೆ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿ ರಾಜಧಾನಿ ಬೆಂಗಳೂರಿಗರ ನಿದ್ದೆಗೆಡಿಸಿದೆ. ನಗರ ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಚಿರತೆ ಆರಾಮವಾಗಿ ನಡು ರಸ್ತೆಯಲ್ಲಿ ಓಡಾಡಿದೆ ಹೊಸೂರು ರಸ್ತೆ, ಕೂಡ್ಲುಗೇಟ್ ಬಳಿ ಹೀಗೆ ರಾತ್ರಿ ವೇಳೆಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಕೂಡ್ಲು ಗೇಟ್‌ನ ಹೊಸಪಾಳ್ಯದ ಸಮೀಪ ಚಿರತೆ ಕಾಣಿಸಿಕೊಂಡಿದೆ.

ಸಿಸಿ ಕ್ಯಾಮೆರಾ ನೋಡಿದಾಗ ಶಾಕ್!

ಅಂದಹಾಗೆ ಚಿರತೆಗಳು ರಾತ್ರಿ ವೇಳೆ ವೇಗವಾಗಿ ಸಂಚರಿಸುತ್ತವೆ, ಹಾಗೇ ಆಹಾರವನ್ನೂ ಈ ಸಮಯದಲ್ಲೇ ಹೆಚ್ಚಾಗಿ ಹುಡುಕುತ್ತವೆ. ಯಾಕಂದ್ರೆ ರಾತ್ರಿ ಸಮಯದಲ್ಲಿ ಚಿರತೆಗಳಿಗೆ ಅಡ್ಡಿ ಮಾಡುವವರು ಯಾರೂ ಇರುವುದಿಲ್ಲ ಎನ್ನಬಹುದು. ಹಾಗೇ ನಗರ ಪ್ರದೇಶದಲ್ಲಿ ನಾಯಿ ಸೇರಿದಂತೆ, ಇತರ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಲು ಚಿರತೆಗಳು ಬರುತ್ತವೆ. ಇದೇ ರೀತಿ ಚಿರತೆಯೊಂದು ಹೊಸೂರು ರಸ್ತೆಯ ಕೂಡ್ಲು ಗೇಟ್ ಬಳಿ ಕಾಣಿಸಿಕೊಂಡಿದೆ. ಕೂಡ್ಲು ಗೇಟ್‌ನ ಹೊಸಪಾಳ್ಯದ ಸಮೀಪವೇ ಚಿರತೆ ಕಾಣಿಸಿಕೊಂಡಿದ್ದು ನಾಯಿಗಳು ಆ ಚಿರತೆಯನ್ನ ಬೆನ್ನತ್ತಿ ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

ಒಟ್ನಲ್ಲಿ ಚಿರತೆ ಹಾವಳಿಗೆ ಬೆಂಗಳೂರು ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಹೀಗಾಗಿ ಹೊರಗಡೆ ಹೋಗಲು ಭಯಪಡುವ ಸ್ಥಿತಿ ಎದುರಾಗಿದೆ. ಇದೀಗ ಚಿರತೆ ಕಾಣಿಸಿಕೊಂಡ ಜಾಗದಲ್ಲಿರುವ ಜನ ಅಲರ್ಟ್ ಆಗಿದ್ದು, ಕೂಡಲೇ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಆದರೆ ಇಷ್ಟೊತ್ತಿಗೆ ಚಿರತೆ ಅದೆಲ್ಲಿಗೆ ಓಡಿ ಹೋಗಿರುತ್ತೋ ಗೊತ್ತಿಲ್ಲ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+