Bengaluru-Chnnai Expressway: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್
Bengaluru-Chnnai Expressway: ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ದಿನಾಂಕ ಕಾರಣಾಂತರಗಳಿಂದ ಮುಂದೂಡಿಕೆಯಾಗುತ್ತಲಿದೆ. ಆದರೆ, ಕರ್ನಾಟಕ ಭಾಗದಲ್ಲಿನ 71 ಕಿ.ಮೀ. ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಮತ್ತೊಂದೆಡೆ, ಎಕ್ಸ್‌ಪ್ರೆಸ್‌ನ ಈ ಭಾಗದಲ್ಲಿ ಕೆಲವೇ ತಿಂಗಳಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕ್ರಾಂತಿಯೇ ಆಗಲಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲಿದೆ. ಈಗಾಗಲೇ ಕರ್ನಾಟಕ ಭಾಗದಲ್ಲಿನ 71 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು, ವಾಹನಗಳು ಸಹ ಸಂಚಾರ ಮಾಡುತ್ತಿವೆ. ಆದರೆ, ಆಂಧ್ರ ಹಾಗೂ ತಮಿಳುನಾಡು ಭಾಗದಲ್ಲಿ ಕಾಮಗಾರಿ ವಿಳಂಭ ಕಾರಣ ಪೂರ್ಣ ಎಕ್ಸ್‌ಪ್ರೆಸ್ ಉದ್ಘಾಟನೆ ದಿನಾಂಕ ಮುಂದೂಡಿಕೆ ಆಗುತ್ತಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಹಿತಿ ಪ್ರಕಾರ, ಮುಂದಿನ ವರ್ಷದ ಜೂನ್-ಜುಲೈ ವೇಳೆಗೆ ಲೋಕಾರ್ಪಣೆಯಾಗಲಿದೆ.

ಈ ನಡುವೆಯೇ ಎಕ್ಸ್‌ಪ್ರೆಸ್ ವೇನ ಈ ಭಾಗದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕ್ರಾಂತಿಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕಾರಿಡಾರ್‌ನಲ್ಲಿ ಪ್ರಯಾಣಿಕರು ವಿಶ್ರಾಂತಿ ಪಡೆದು ಮುಂದೆ ಪ್ರಯಾಣ ಮಾಡಲು ಹೆದ್ದಾರಿಯ ಪಕ್ಕದಲ್ಲಿ ಅಲ್ಲಲ್ಲಿ ಊಟ ತಿಂಡಿ ಸವಿಯಲು, ಆಟ-ಮನರಂಜನೆ ಪಡೆಯಲು ವಿವಿಧ ಸೌಲಭ್ಯಗಳು ಉಳ್ಳ ಮಿನಿ ನಗರ ಕೆಲವೇ ತಿಂಗಳಲ್ಲಿ ತಲೆ ಎತ್ತಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಂಗಾರಪೇಟೆ ತಲ್ಲೂಕಿನ ಐತಾಂಡಹಳ್ಳಿ ಬಳಿ ಹಾದು ಹೋಗಿರುವ ಈ ಕಾರಿಡಾರ್‌ನಲ್ಲಿ 30 ಹೆಕ್ಟೇರ್ ಪ್ರದೇಶದಲ್ಲಿ ವೈ-ಸ್ಪೇಸ್ ಸಂಸ್ಥೆಯು ವೇಸೈಡ್ ಫೆಸಿಲಿಟಿ ಸ್ಥಾಪಿಸಲಿದೆ. ಈಗಾಗಲೇ ಈ ಕಾಮಗಾರಿಗೆ ಈಗಾಗಲೇ ಭೂಮಿಪೂಜೆ ನೆರವೇರಿಸಲಾಗಿದೆ. ಈ ಮಾರ್ಗದಲ್ಲಿ ಆರಾಮದಾಯಕ ಪ್ರಯಾಣ ಕಲ್ಪಿಸಲು ಫುಡ್‌ಕೋರ್ಟ್‌ಗಳು, ಫ್ಯಾಕ್ಟರಿ ಔಟ್‌ಲೆಟ್ ಮಾಲ್, ಇಂಧನ ಕೇಂದ್ರ, ಡ್ರೈವ್-ಥ್ರೂ ರೆಸ್ಟೋರೆಂಟ್, ಮಕ್ಕಳ ಆಟದ ವಲಯ, ಹೋಟೆಲ್, ರೆಸಾರ್ಟ್, ಪಾರ್ಕಿಂಗ್ ಪ್ರದೇಶವನ್ನು ಈ ಕೇಂದ್ರ ಹೊಂದಿರಲಿದೆ. ಇದು ಪೂರ್ಣಗೊಂಡರೆ, ಪ್ರಯಾಣಿಕರಿಗೆ ತುಂಬಾ ಅನುಕೂಲ ಆದಂತಾಗಲಿದೆ.
ಈ ಮಿನಿ ನಗರವನ್ನು ವಿಶ್ವದರ್ಜೆಯ ಸೌಲಭ್ಯಗಳನ್ನು ಒಳಗೊಂಡಿರುವಂತೆ ಸ್ಥಪನೆ ಮಾಡಲು ವೈ-ಸ್ಪೇಸ್ ಸಂಸ್ಥೆ ಮುಂದಾಗಿದೆ. ಈ ಎಕ್ಸ್‌ಪ್ರೆಸ್‌ವೇ ಕಾರಿಡಾರ್ ಉದ್ದಕ್ಕೂ ಮೂರು ಸ್ಥಳಗಳಲ್ಲಿ ವೇಸೈಡ್ ಸೌಲಭ್ಯಗಳಿಗಾಗಿ ವಿಎಸ್‌ಎಸ್ ಹಾಗೂ ವೈಎಸ್‌ಇಐಎಲ್ ಸಂಸ್ಥೆಗಳು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ದಿಂದ ಜಂಟಿ ಟೆಂಡರ್ ಪಡೆದುಕೊಂಡಿದೆ.
ತಲಾ 30 ಹೆಕ್ಟೇರ್ ಪ್ರದೇಶದಲ್ಲಿ ಬಂಗಾರಪೇಟೆ, ಚಿತ್ತೂರು ಹಾಗೂ ಕಾಂಚೀಪುರಂನಲ್ಲಿ ವಿವಿಧ ಸೌಲಭ್ಯವಿರುವ ಇಂತಹ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಎತ್ತರದ (144.9 ಅಡಿ) ಆಂಜನೇಯನ ವಿಗ್ರಹ ಸಹ ಇಲ್ಲಿ ತಲೆ ಎತ್ತಲಿದೆ.
ಈ ಕೇಂದ್ರದ ಆವರಣದಲ್ಲಿ ಸೋಮವಾರ (ಅಕ್ಟೋಬರ್ 6) ಭೂಮಿ ಪೂಜೆ ನಡೆದಿದ್ದು, ಬಳಿಕ ನಡೆದ ವೇದಿಕೆ ಕಾರ್ಯಕ್ರಮಕ್ಕೆ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದರು.
ಈ ಬಗ್ಗೆ ಮಾತನಾಡಿದ ಅವರು, ವೇ-ಸ್ಪೇಸ್ ಕಲ್ಪಿಸುತ್ತಿರುವ ಈ ಸೌಲಭ್ಯದಿಂದ ಈ ಭಾಗದ 500ಕ್ಕೂ ಅಧಿಕ ಮಂದಿಗೆ ಉದ್ಯೋಗ ಅವಕಾಶ ಸಿಕ್ಕಂತಾಗಲಿದೆ. ಇದು ಮುಂದಿನ ವರ್ಷದ ದಸರಾ ವೇಳೆಗೆ ಉದ್ಘಾಟನೆ ಆಗಲಿದೆ. ರಾಜ್ಯ ಸರ್ಕಾರದಿಂದ ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ವೈ-ಸ್ಪೇಸ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ಪಾಲುದಾರ ವೈ.ವಿ.ರತ್ನಕುಮಾರ್ ಮಾತನಾಡಿದ್ದು, ಈ ಭಾಗದಲ್ಲಿ ಹೋಟೆಲ್, ರೆಸಾರ್ಟ್, ಆಟದ ವಲಯ ಸೇರಿ ಎಲ್ಲಾ ವ್ಯವಸ್ಥೆ ಇರಲಿದೆ. ಕನ್ಯಾಕುಮಾರಿ-ಕಾಶ್ಮೀರದವರೆಗಿನ ಎಲ್ಲಾ ರೀತಿಯ ತಿಂಡಿ ತಿನಿಸು ಸಿಗಲಿದೆ ಎಂದು ಹೇಳಿದರು. ಇನ್ನು 260 ಕಿಲೋ ಮೀಟರ್ ಉದ್ದದ ಈ ಎಕ್ಸ್‌ಪ್ರೆಸ್ ವೇ ಅನ್ನು ಗ್ರೀನ್‌ಫೀಲ್ಡ್ ಯೋಜನೆಯಡಿ ₹17,900 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಇದು ಪೂರ್ಣಗೊಂದರೆ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯ 5-6 ಗಂಟೆಗಳಿಂದ ಕೇವಲ 2.15 ಗಂಟೆಗಳಿಗೆ ಇಳಿಕೆಯಾಗಲಿದೆ. ಅಲ್ಲದೆ, ಆರ್ಥಿಕ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ.












Click it and Unblock the Notifications