ಸರಣಿ ಸರಗಳ್ಳತನ: ಸಿಸಿಬಿ ಪೊಲೀಸರಿಗೆ ಮಹತ್ವದ ಸುಳಿವು
ಬೆಂಗಳೂರು, ಜೂ. 13: ಬೆಂಗಳೂರಿನಲ್ಲಿ ಎರಡು ದಿನ ನಡೆದ ಸರಣಿ ಸರಗಳ್ಳತನ ಪ್ರಕರಣದ ಹಿಂದೆ ಇರಾನಿ ಗ್ಯಾಂಗ್ ಕೈವಾಡವಿರುವ ಬಗ್ಗೆ ಸಿಸಿಬಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು ಬೆಳಗಾವಿಗೆ ತೆರಳಿ ಕಳೆದ ವಾರ ಸಿಕ್ಕಿಬಿದ್ದಿರುವ ಇರಾನಿ ಗ್ಯಾಂಗ್ ನ ಮುಖ್ಯಸ್ಥರಲ್ಲಿ ಒಬ್ಬನಾದ ಮೊಹಮದ್ ಇರಾನಿಯನ್ನು ವಿಚಾರಣೆ ನಡೆಸಿ ಹಿಂದಿರುಗಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕದಲ್ಲಿ ಸರಗಳ್ಳತನ ನಡೆಸುತ್ತಿದ್ದ ಇರಾನಿ ಗ್ಯಾಂಗ್‌ನ ಮುಖಂಡ ಮಹಮ್ಮದ್ ಇರಾನಿ ಯನ್ನು ಬೆಳಗಾವಿ ಪೊಲೀಸರು ಪುಣೆ ಯಿಂದ ಬಂಧಿಸಿ ತಂದು ವಿಚಾರಣೆಗೆ ಒಳಪಡಿಸಿದ್ದರು.[ಬೆಂಗ್ಳೂರಲ್ಲಿ ಮುಂದುವರಿದ ಸರಗಳ್ಳತನ, ಪೊಲೀಸರು ಕಕ್ಕಾಬಿಕ್ಕಿ]

ವಿಚಾರಣೆ ವೇಳೆ ಮೊಹಮದ್ ಇರಾನಿ ಪೊಲೀಸರಿಗೆ ಮಹತ್ವದ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಗುರುವಾರ ಮತ್ತು ಶುಕ್ರವಾರ ಕಪ್ಪು ಬಣ್ಣದ ಪಲ್ಸರ್ ಏರಿಬಂದ ದರೋಡೆಕೋರರು ಬೆಂಗಳೂರಿನ ಹಲವೆಡೆ ಸರ ಅಪಹರಣ ಮಾಡಿದ್ದರು.
ಸಿಸಿಟಿವಿಯ ದೃಶ್ಯಾವಳಿಗಳನ್ನು ತೋರಿಸಿ ಇರಾನಿಯಿಂದ ಮಾಹಿತಿ ಪಡೆದುಕೊಂಡು ಬರಲಾಗಿದೆ. ಬ್ಯಾಟರಾಯನಪುರ ಮತ್ತು ಕಾಮಾಕ್ಷಿ ಪಾಳ್ಯ ಪೊಲೀಸ್ ಇನ್ಸ್ ಪೆಕ್ಟರ್ ಗಳ ತಂಡ ಶುಕ್ರವಾರ ಬೆಳಗಾವಿಗೆ ತೆರಳಿ ಸಂಪೂರ್ಣ ಮಾಹಿತಿ ಕಲೆ ಹಾಕಿ ಹಿಂದಕ್ಕೆ ಬಂದಿದೆ.[ಬೆಂಗಳೂರು : 1 ಗಂಟೆಯಲ್ಲಿ 10 ಕಡೆ ಸರಗಳ್ಳತನ]
ಇರಾನಿ ಗ್ಯಾಂಗ್ ಎಂದರೇನು?
ಮುಂಬೈ ಮೂಲದ ಕಳ್ಳರ ಗ್ಯಾಂಗ್ ಇದಾಗಿದ್ದು ಸ್ವಂತ ವಾಹನದ ಮೂಲಕವೇ ಪಕ್ಕದ ರಾಜ್ಯಗಳಿಗೆ ಲಗ್ಗೆ ಇಡುತ್ತದೆ. ಸರಣಿ ಸರಗಳ್ಳತನ ಮಾಡಿ ಒಡವೆಗಳನ್ನು ತಮ್ಮ ಹೆಂಡತಿಯರ ಮುಖಾಂತರ ಸಾಗಿಸುತ್ತಾರೆ. ವಾಹದ ಎಲ್ಲ ದಾಖಲಾತಿಗಳನ್ನು ಹೊಂದಿರುತ್ತಾರೆ. ಬೈಕ್ ಓಡಿಸುವುದರಲ್ಲಿ ರೇಸ್ ಪಟುಗಳಂತೆ ನಿಸ್ಸಿಮರು. ಒಮ್ಮೆ ಸಾಕಷ್ಟು ಕಳ್ಳತನ ಮಾಡಿದ ನಂತರ ಆ ಜಾಗಕ್ಕೆ ವರ್ಷಗಳ ಕಾಲ ಮುಖ ಹಾಕುವುದಿಲ್ಲ.












Click it and Unblock the Notifications