ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಲಕ್ಷಾಂತರ ಮೌಲ್ಯದ ನಕಲಿ ಬ್ರಾಂಡೆಡ್ ಶರ್ಟ್ ವಶ

By Prasad
|
Google Oneindia Kannada News

ಬೆಂಗಳೂರು, ಮೇ 16 : ಖ್ಯಾತ ವಿದೇಶಿ ಬ್ರಾಂಡ್ ಗಳ ಲೆಬೆಲ್ ದುರ್ಬಳಸಿಕೊಂಡು ಲಕ್ಷಾಂತರ ರುಪಾಯಿ ಮೌಲ್ಯದ ಅಂಗಿಗಳ ದಾಸ್ತಾನು ಮಾಡಿಟ್ಟುಕೊಂಡಿದ್ದ ವ್ಯಕ್ತಿಯನ್ನು ಶ್ರೀರಾಂಪುರ ಪೊಲೀರಸು ಮಂಗಳವಾರ ಬಂಧಿಸಿದ್ದಾರೆ.

23 ವರ್ಷದ ಮಹೇಂದ್ರ ಕುಮಾರ್ ಗೋಯೆಲ್ ಎಂಬಾತನನ್ನು ಶ್ರೀರಾಂಪುರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಬರುವ ಓಕಳಿಪುರಂನ, 1ನೇ ಹಂತ, 1ನೇ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ನಕಲಿ ಬ್ರಾಂಡ್ ಲೆಬೆಲ್ ಬಳಸಿ ಆತ ದುಬಾರಿ ಬೆಲೆಗೆ ಬಟ್ಟೆಗಳನ್ನು ಮಾರುತ್ತಿದ್ದ.

ತಮಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಆ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು 39,20,400 ರುಪಾಯಿ ಮೌಲ್ಯದ 3,267 ಅಂಗಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಚರಣೆಯನ್ನು ಬೆಂಗಳೂರು ನಗರದ ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದೆ.

Bengaluru CCB police arrest man with fake branded shirts

ಈ ಪ್ರತಿಷ್ಠಿತ ಕಂಪನಿಗಳ ಲೆಬೆಲ್ ಬಳಸಿಕೊಂಡು ಆತ ಅಲೆನ್ ಸಾಲಿ, ಲೂಯಿ ಫಿಲಿಪ್, ಆರೋ ಮತ್ತು ಯುಎಸ್ ಪೋಲೋ ಕಂಪನಿಯ ಶರ್ಟ್ ಗಳನ್ನು ಮಾರಾಟ ಮಾಡುತ್ತಿದ್ದ. ಈ ಅಂಗಿಗಳು ಖ್ಯಾತ ಕಂಪನಿಯದ್ದು ಅಂದುಕೊಂಡೇ ಜನರು ಅವನ್ನು ಕೊಂಡು ಮೋಸ ಹೋಗುತ್ತಿದ್ದರು.

ಈ ವಂಚನೆಯ ಬಗ್ಗೆ ಖಚಿತ ಮಾಹಿತಿ ದೊರೆಯುತ್ತಿದ್ದಂತೆ, ಆತನ ಮನೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ಮಹೇಂದ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತನ ವಿರುದ್ಧ ಶ್ರೀರಾಂಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮೇಲಾದರೂ ಅಲ್ಲಿಇಲ್ಲಿ ಬಟ್ಟೆ ಕೊಳ್ಳುವಾಗ ಎಚ್ಚರದಿಂದ ಇರಬೇಕು, ಬ್ರಾಂಡ್ ಬಗ್ಗೆ ಮೋಸ ಹೋಗಬಾರದು ಎಂದು ಪೊಲೀಸರು ಸಾರ್ವಜನಿಕರನ್ನು ಕೋರಿದ್ದಾರೆ.

English summary
Bengaluru central crime branch police have arrested a 23-year-old man with more than Rs. 39 lakh worth shirts, with famous international brands. He used to create lebels of Allen Solly, Polo etc and used to sell shirts for higher prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X