Highway: 68 ಕಿ.ಮೀ ಬೆಂಗಳೂರು ಬಿಸಿನೆಸ್ ಕಾರಿಡಾರ್: 4 ಪ್ಯಾಕೇಜ್‌ನಲ್ಲಿ ಯೋಜನೆ ಜಾರಿ, ಆಗಸ್ಟ್‌ನಲ್ಲಿ ಟೆಂಡರ್

ಬೆಂಗಳೂರು: ಎರಡು ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಹಾಗೂ ಇತ್ತೀಚೆಗೆ ಎಲ್ಲ ಹಂತಗಳಲ್ಲೂ ಅನುಮೋದನೆ ಪಡೆದು ವೇಗವಾಗಿ ಮುನ್ನುಗ್ಗುತ್ತಿರುವ ಬೆಂಗಳೂರು ಬಿಸಿನೆಸ್ ಕಾರಿಡಾರ್ (BBC) ಅಥವಾ ಪೆರಿಫೆರಲ್ ರಿಂಗ್ ರಸ್ತೆ (PRR) ಯೋಜನೆಯನ್ನು ಮೂರರ ಬದಲಿಗೆ ನಾಲ್ಕು ಹಂತಗಳಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಪ್ಯಾಕೇಜ್ 1ರ ಟೆಂಡರ್ ಮುಗಿದಿದೆ. ಇನ್ನೂ ಉಳಿದ ಪ್ಯಾಕೇಜ್ ಯೋಜನೆಗಳ ಟೆಂಡರ್ ಗೆ ಸಂಬಂಧಿಸಿದಂತೆ ಬಿಬಿಸಿ ಅಧ್ಯಕ್ಷ ಎಲ್.ಕೆ.ಅಥೀಕ್ ಅವರು ಅಪ್ಡೇಟ್ ನೀಡಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮನಿ ಕಂಟ್ರೋಲ್ ರೈಸಿಂಗ್ ಭಾರತ್ ಶೃಂಗಸಭೆಯಲ್ಲಿ ಮಾತನಾಡಿ ಅಥೀಕ್ ಅವರು, ತುಮಕೂರು ರಸ್ತೆ ನೆಲಮಂಗಲದಿಂದ ಬಳ್ಳಾರಿ ರಸ್ತೆ, ಹೆಬ್ಬಾಳ, ಸರ್ಜಾಪುರ ಮೂಲಕ ಎಲೆಕ್ಟ್ರಾನಿಕ್ ಸಿಟಿವರೆಗೆ ಸಂಪರ್ಕ ಕಲ್ಪಿಸುವ ಪ್ರಮುಖ 68 ಕಿಲೋ ಮೀಟರ್ ಉದ್ದದ ಹೆದ್ದಾರಿ ರಸ್ತೆ (ಹೊರ ವರ್ತುಲ ಹೆದ್ದಾರಿ ರಸ್ತೆ) ಯೋಜನೆ ಇದಾಗಿದೆ. ಒಟ್ಟು ನಾಲ್ಕು ಪ್ಯಾಕೇಜ್‌ಗಳಲ್ಲಿ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಸಾಕಾರಗೊಳಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.

Bengaluru Business Corridor

ಆಗಸ್ಟ್, ಸೆಪ್ಟಂಬರ್‍‌ನಲ್ಲಿ ಟೆಂಡರ್ ಆಹ್ವಾನ ಸಾಧ್ಯತೆ

ಮಾದಾವರ-ಬಳ್ಳಾರಿ ರಸ್ತೆವರೆಗಿನ ಪ್ಯಾಕೇಜ್-1ರ ಟೆಂಡರ್ ಸಹ ಅಂತಿಮವಾಗಿದ್ದು ಗುತ್ತಿಗೆದಾರರಿಗೆ ಅನುಮೋದನೆ ನೀಡಲಾಗಿದೆ. ಅವರು ಭೂಮಿ ಗುರುತಿಸುವ ಕಾರ್ಯ ಆರಂಭಿಸಿದ್ದಾರೆ. ಕೇವಲ ಎರಡು ವರ್ಷದಲ್ಲಿ ಕೆಲಸ ಮುಗಿಸಿ ಕೊಡುವಂತೆ ಅವರಿಗೆ ಕೇಳಲಾಗಿದೆ. ಇನ್ನೂ ಪ್ಯಾಕೇಜ್-2 ಮತ್ತು ಪ್ಯಾಕೇಜ್-3ರ ಟೆಂಡರ್ ಮುಂದಿನ ಆಗಸ್ಟ್ ತಿಂಗಳಲ್ಲಿ ಕರೆಯಲು ರಾಜ್ಯ ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ. ನಂತರ ಪ್ಯಾಕೇಜ್ 4ರ ಟೆಂಡರ್ ಸೆಪ್ಟಂಬರ್ ತಿಂಗಳಲ್ಲಿ ಕರೆಯಲು ಸರ್ಕಾರ ತೀರ್ಮಾನಿಸಿದೆ ಎಂದು ಅವರು ಮಾಹಿತಿ ನೀಡಿದರು.

ಪ್ಯಾಕೇಜ್ 1 ತುಮಕೂರು ರಸ್ತೆ (ಮಾದಾವರ)- ಬಳ್ಳಾರಿ ರಸ್ತೆಯವರೆಗಿನ (21 ಕಿಮೀ.), ಪ್ಯಾಕೇಜ್ 2 ಬಳ್ಳಾರಿ ರಸ್ತೆಯಿಂದ ಹಳೆ ಮದ್ರಾಸ್ ರಸ್ತೆಯವರೆಗೆ (17 ಕಿ.ಮೀ.), ಪ್ಯಾಕೇಜ್-3 (ಹಳೇ ಮದ್ರಾಸ್ ರಸ್ತೆ- ಹೊಸೂರು ರಸ್ತೆ (14.6 ಕಿ.ಮೀ.) ಹಾಗೂ ಪ್ಯಾಕೇಜ್ -4 ಎಲೆಕ್ಟ್ರಾನಿಕ್ ಸಿಟಿವರಿಗಿನ ಉಳಿದ 15.6 ಕಿ.ಮೀ. ವ್ಯಾಪ್ತಿ ಹೊಂದಿದೆ. ಇದರಲ್ಲಿ ಎತ್ತರಿಸಿದ ಕಾರಿಡಾರ್ ಸಹ ಒಳಗೊಂಡಿದೆ ಎಂದು ವಿವರಿಸಿದರು.

2007ರ ಯೋಜನೆಗೆ 2026ರಲ್ಲಿ ವೇಗ

ಈ ಯೋಜನೆಗೆ 2007ರಲ್ಲಿ ಪ್ರಸ್ತಾಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು. ಸದ್ಯ 19 ವರ್ಷಗಳ ಬಳಿಕ 2026ರಲ್ಲಿ ಯೋಜನೆಗೆ ವೇಗ ಸಿಗುತ್ತಿದೆ. ತುಮಕೂರು ರಸ್ತೆ, ಹೆಬ್ಬಾಳ, ಕೆ.ಆರ್.ಪುರಂ ನಂತಯ ಹೆಚ್ಚು ಸಂಚಾರ ದಟ್ಟಣೆಯ ತಲೆ ಬಿಸಿ ಕಡಿಮೆ ಮಾಡಲಿದೆ. ನಿತ್ಯ ಅಪಾರ ಪ್ರಯಾಣಿಕರಿಗೆ ಅನುಕೂಲ ಒದಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಮಗಾರಿಗೆ ವೇಗ ನೀಡಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆಗಳು ವಿಳಂಬವಿಲ್ಲದೇ ನಡೆಯುವ ಸಾಧ್ಯತೆ ಇದೆ. ಇದೇ ಡಿಸೆಂಬರ್ 2026ರ ಹೊತ್ತಿಗೆ ಆರಂಭಿಕ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು, 2029ರ ಅಂತ್ಯದ ಹೊತ್ತಿಗೆ ರಸ್ತೆಯು ಹಂತ ಹಂತವಾಗಿ ವಾಹನ ಸವಾರರ ಬಳಕೆಗೆ ಮುಕ್ತಗೊಳ್ಳುವ ಸಾಧ್ಯತೆಗಳು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+