ಬಿಬಿಎಂಪಿ: ಬೊಮ್ಮನಹಳ್ಳಿ, ದಕ್ಷಿಣ ವಲಯದಲ್ಲಿ ಬೀದಿ ನಾಯಿ ಕಾಟ, ನಿತ್ಯ 40-50 ಕೇಸ್
ಬೆಂಗಳೂರು, ಡಿಸೆಂಬರ್ 08: ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಬೈಕ್ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ನೌಕರರು ನಾಯಿಗಳ ಕಾಟಕ್ಕೆ ಅಪಘಾತಕ್ಕೀಡಾಗಿ ಕೆಲಸಕ್ಕೆ ಹೋಗದೇ ಮನೆಗೆ ಹಿಂದಿರುಗಿದ್ದಾರೆ.
ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಹಲವು ಕ್ರಮಗಳ ಹೊರತಾಗಿಯೂ ನಗರದಲ್ಲಿ ನಿತ್ಯ ನಾಯಿ ಕಡಿತದ ಸುಮಾರು 50 ಪ್ರಕರಣಗಳು ವರದಿಯಾಗುತ್ತಿವೆ ಎಂದು ತಿಳಿದು ಬಂದಿದೆ. ಬಿಬಿಎಂಪಿ ಪಶುಸಂಗೋಪನಾ ಇಲಾಖೆ 2019 ರಿಂದ ಈವರೆಗೆ ನಗರದಲ್ಲಿ ಬೀದಿ ನಾಯಿ ಕಡಿತದ ಪ್ರಕರಣಗಳು ಶೇ.60 ರಷ್ಟು ಕಡಿಮೆಯಾಗಿದೆ ಎಂದು ಹೇಳಿದೆ.
ನಾಯಿಗಳ ಹಾವಳಿ ನಿಯಂತ್ರಣಕ್ಕಾಗಿ ಬಿಬಿಎಂಪಿ ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಂಡಿದೆ. ಜೊತೆಗೆ ಆಂಟಿ-ರೇಬೀಸ್ ವ್ಯಾಕ್ಸಿನೇಷನ್ (ಎಆರ್‌ವಿ) ಅನ್ನು 2018ರಲ್ಲಿಯೇ ಚಾಲನೆ ನೀಡಿದೆ ಎಂದು ತನ್ನ ಕ್ರಮಗಳನ್ನು ಬಿಬಿಎಂಪಿ ಸಮರ್ಥಸಿಕೊಂಡಿದೆ. ಆದರೆ ನಾಯಿಗಳ ಕಾಟದಿಂದ ಸಾರ್ವಜನಿಕರು ಬೇಸತ್ತಿದ್ದಾರೆ.

ಬೀದಿ ನಾಯಿ, ಸಾಕು ನಾಯಿ ಸಂಖ್ಯೆ 3ಲಕ್ಷ
ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿಯ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ಪಿ.ರವಿಕುಮಾರ್ ಅವರು, ನಗರದಲ್ಲಿ ಬೀದಿನಾಯಿಗಳ ಸಂಖ್ಯೆ 1.5 ಲಕ್ಷದಷ್ಟಿದೆ ಮತ್ತು ಮಾಲೀಕತ್ವದ ನಾಯಿ'ಗಳ ಸಂಖ್ಯೆಯೂ ಅಷ್ಟೇ ಇದೆ. ಆದರೆ, ಬಿಬಿಎಂಪಿ ವಲಯಗಳಾದ ದಕ್ಷಿಣ, ಮಹದೇವಪುರ, ಆರ್‌ಆರ್ ನಗರ ಮತ್ತು ಬೊಮ್ಮನಹಳಿ ವಲಯಗಳಿಗೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳು ಹತ್ತಿರವಾಗುತ್ತವೆ. ಈ ಕಾರಣದಿಂದ ಆಯಾ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ನಗರದ ವಿವಿಧ ಪ್ರದೇಶಗಳಲ್ಲಿ ಮಾಸಿಕವಾಗಿ ಸರಾಸರಿ 40 ರಿಂದ 50 ಬೀದಿನಾಯಿ ಕಡಿತದ ಬಗ್ಗೆ ದೂರುಗಳನ್ನು ಸ್ವೀಕರಿಸುತ್ತೇವೆ. ದಕ್ಷಿಣ, ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯಗಳು ವ್ಯಾಪ್ತಿಗೆ ಹೊರಗಿನ ಗ್ರಾಮ ಪಂಚಾಯಿತಿ ಅಡಿಯ ಪ್ರದೇಶಗಳಲ್ಲಿ ಈ ಸಮಸ್ಯೆ ಕೇಳಿ ಬಂದಿದೆ ಎಂದರು.
2022ರ ಏಪ್ರಿಲ್ ನಿಂದ ಇಲ್ಲಿಯವರೆಗೆ, ಇಲಾಖೆಯು 52,635 ಲಸಿಕೆ ಹಾಕಿದೆ. ಎಲ್ಲಾ ಎಂಟು ಬಿಬಿಎಂಪಿ ವಲಯಗಳಲ್ಲಿ ಲಸಿಕೆ ನೀಡುವ ಕೆಲಸವನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಅನುಮೋದಿತ ಎನ್‌ಜಿಒಗಳಿಗೆ ಹೊರಗುತ್ತಿಗೆ ಅಡಿ ನೀಡಲಾಗಿದೆ. ಬಿಬಿಎಂಪಿಯ ಶ್ವಾನ ಜನಸಂಖ್ಯೆಯ ಸಮೀಕ್ಷೆಯ ಪ್ರಕಾರ, ಆರ್‌ಆರ್‌ನಗರದಲ್ಲಿ ಅತಿ ಹೆಚ್ಚು ಬೀದಿ ನಾಯಿಗಳು (52,968) ಇವೆ, ಮಹದೇವಪುರ (46,333) ನಂತರದ ಸ್ಥಾನದಲ್ಲಿವೆ ಎಂದು ಅವರು ತಿಳಿಸಿದರು.












Click it and Unblock the Notifications