• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಬ್ದುಲ್ ಮದನಿ ಕೇಸ್: ಕರ್ನಾಟಕ ಸರ್ಕಾರದಿಂದ ಅಚ್ಚರಿಯ ನಡೆ

By ವಿಕಾಸ್ ನಂಜಪ್ಪ
|

ಬೆಂಗಳೂರು, ನವೆಂಬರ್ 05: ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ ಸ್ಥಾಪಕ ಅಬ್ದುಲ್ ನಾಸರ್ ಮದನಿ ಪ್ರಮುಖ ಆರೋಪಿಯಾಗಿರುವ ಬೆಂಗಳೂರು ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಇಟ್ಟಿರುವ ಹೆಜ್ಜೆ ಅಚ್ಚರಿ ಮೂಡಿಸಿದೆ. ಈ ಹೈಪ್ರೊಫೈಲ್ ಕೇಸಿನ ವಿಶೇಷ ಸರ್ಕಾರಿ ಅಭಿಯೋಜಕ(ಎಸ್ ಪಿ ಪಿ)ರನ್ನು ಬದಲಾಯಿಸಲಾಗಿದೆ.

ದೀಪಾವಳಿ ವಿಶೇಷ ಪುರವಣಿ

ಸರ್ಕಾರಿ ಅಭಿಯೋಜಕರನ್ನು ಬದಲಾಯಿಸುವ ಹಕ್ಕು ಸರ್ಕಾರಕ್ಕಿದೆ ನಿಜ. ಆದರೆ, ಬದಲಾವಣೆ ಮಾಡಿರುವ ಸಮಯ, ಸಂದರ್ಭ ಇಲ್ಲಿ ಮುಖ್ಯವಾಗಲಿದೆ. ಈ ಪ್ರಕರಣದ ವಿಚಾರಣೆ ಕೊನೆ ಹಂತದಲ್ಲಿದೆ. ಹೊಸ ಅಭಿಯೋಜಕರಿಗೆ ಈ ಕೇಸಿನ ಹಿಸ್ಟರಿ ಓದುವುದಕ್ಕೆ ಸಮಯ ಬೇಕಾಗುತ್ತದೆ. ಮತ್ತೊಮ್ಮೆ ವಿಚಾರಣೆ ವಿಳಂಬವಾಗಲಿದೆ.

ಸೆಪ್ಟೆಂಬರ್ 20ರಂದು ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, ವಿಚಾರಣೆಯನ್ನು ಇನ್ನೆರಡು ತಿಂಗಳಿನಲ್ಲಿ ಮುಕ್ತಾಯಗೊಳಿಸುವಂತೆ ಸೂಚಿಸಿತ್ತು. ಇದರ ಪ್ರಕಾರ, ನವೆಂಬರ್ 20ರೊಳಗೆ ವಿಚಾರಣೆ ಮುಕ್ತಾಯವಾಗುವ ನಿರೀಕ್ಷೆಯಿತ್ತು. ಬೆಂಗಳೂರಿನಲ್ಲಿ ಸಂಭವಿಸಿದ ಸರಣಿ ಸ್ಫೋಟದ ರೂವಾರಿ ಮದನಿ ಕಡೆಯಿಂದ ಸರ್ಕಾರಕ್ಕೇನಾದರೂ ರಾಜಕೀಯವಾಗಿ ಒತ್ತಡ ಕಂಡು ಬಂದಿದೆಯೇ ಎಂದು ಪ್ರಶ್ನಿಸಲಾಗಿದೆ.

ಮದನಿಯ ಬಿಡುಗಡೆ ಮಾಡದಿದ್ರೆ ಹಿಂದೂ ನಾಯಕರ ಹತ್ಯೆ

2008ರಲ್ಲಿ ಬೆಂಗಳೂರಿನಲ್ಲಿ ಸುಮಾರು 9 ಕಡೆ ಸಂಭವಿಸಿದ ಸರಣಿ ಸ್ಫೋಟದಲ್ಲಿ 2 ಸಾವನ್ನಪ್ಪಿದ್ದರು. 20ಕ್ಕೂ ಅಧಿಕ ಜನ ಗಾಯಗೊಂಡಿದ್ದರು. ಕೊಯಮತ್ತೂರಿನ ಸರಣಿ ಸ್ಫೋಟ ರುವಾರಿಯೂ ಆಗಿರುವ ಮದನಿ ಕೊಯಮತ್ತೂರು ಸ್ಫೋಟ ಪ್ರಕರಣದಿಂದ ಖುಲಾಸೆಗೊಂಡಿದ್ದಾನೆ. ಆದರೆ, ಬೆಂಗಳೂರು ಪ್ರಕರಣದ ಪ್ರಮುಖ ಆರೋಪಿಯಾಗಿ ಮದನಿ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

ಸುಮಾರು 9 ಕಡೆ ಸಂಭವಿಸಿದ ಸರಣಿ ಸ್ಫೋಟ

ಸುಮಾರು 9 ಕಡೆ ಸಂಭವಿಸಿದ ಸರಣಿ ಸ್ಫೋಟ

2008ರಲ್ಲಿ ಬೆಂಗಳೂರಿನಲ್ಲಿ ಸುಮಾರು 9 ಕಡೆ ಸಂಭವಿಸಿದ ಸರಣಿ ಸ್ಫೋಟದಲ್ಲಿ 2 ಸಾವನ್ನಪ್ಪಿದ್ದರು. 20ಕ್ಕೂ ಅಧಿಕ ಜನ ಗಾಯಗೊಂಡಿದ್ದರು. ಕೊಯಮತ್ತೂರಿನ ಸರಣಿ ಸ್ಫೋಟ ರುವಾರಿಯೂ ಆಗಿರುವ ಮದನಿ ಕೊಯಮತ್ತೂರು ಸ್ಫೋಟ ಪ್ರಕರಣದಿಂದ ಖುಲಾಸೆಗೊಂಡಿದ್ದಾನೆ. ಆದರೆ, ಬೆಂಗಳೂರು ಪ್ರಕರಣದ ಪ್ರಮುಖ ಆರೋಪಿಯಾಗಿ ಮದನಿ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

ಸರಣಿ ಸ್ಫೋಟ: ಮದನಿಗೆ ಜಾಮೀನು ಇಲ್ಲ: ಸುಪ್ರೀಂ

ಮದನಿಗಿದೆ ಅನೇಕ ಕಾಯಿಲೆ

ಮದನಿಗಿದೆ ಅನೇಕ ಕಾಯಿಲೆ

ಮದನಿಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದು, ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಅಲ್ಲದೆ, ಅವರ ಕಣ್ಣು ಸಹ ಕಾಣುತ್ತಿಲ್ಲ. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು. ಆದರೆ, ಚಿಕಿತ್ಸೆಯನ್ನು ಕೇರಳ ಮೂಲದ ಆಯುರ್ವೇದ ಚಿಕಿತ್ಸಾಲಯದಲ್ಲೇ ಕೊಡಿಸಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ, ಪರಪ್ಪನ ಅಗ್ರಹಾರದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಸರ್ಕಾರ ವಾದಿಸಿತ್ತು.

ಅನಾರೋಗ್ಯದ ನೆಪದಲ್ಲಿ ಜಾಮೀನು ಕೋರಿದ್ದ ಮದನಿ

ಅನಾರೋಗ್ಯದ ನೆಪದಲ್ಲಿ ಜಾಮೀನು ಕೋರಿದ್ದ ಮದನಿ

ಪಬ್ಲಿಕ್ ಪ್ರಾಸಿಕ್ಯೂಟರ್ ತಮ್ಮದೇ ಆದ ರೀತಿಯಲ್ಲಿ ಪ್ರತಿವಾದ ಮಂಡಿಸಿದ್ದಾರೆ. ಆರೋಪಿಗೆ ಅಂತಹ ಯಾವುದೇ ದೋಷ/ ಸಮಸ್ಯೆಗಳು ಇಲ್ಲ. ಜಾಮೀನಿಗಾಗಿ ಎಲ್ಲಾ ನಾಟಕವಾಡ್ತಿದ್ದಾನೆ. ಜೈಲಿನಲ್ಲಿ ಪ್ರತಿನಿತ್ಯ ಯಾವುದೇ ತೊಂದರೆಯಿಲ್ಲದೆ ದಿನಪತ್ರಿಕೆ ಓದುತ್ತಾನೆ, ಟಿವಿ ನೋಡ್ತಾನೆ, ಸಿಸಿಟಿವಿ ಕ್ಯಾಮೆರಾದಲ್ಲಿ ಇದೆಲ್ಲಾ ದಾಖಲಾಗಿದೆ. ಆದ್ದರಿಂದ ಅವರು ನೀಡಿರುವ ಕಾರಣಗಳನ್ನು ಪರಿಗಣಿಸಬಾರದು ಎಂದು ಆಗ ಸರ್ಕಾರಿ ಅಭಿಯೋಜಕರಾದ ದೊರೆರಾಜು ವಾದ ಮಂಡಿಸಿದ್ದರು.

ಎಸ್ ಪಿಪಿಯಾದ ಕೆ ರುದ್ರಸ್ವಾಮಿ ಬದಲು

ಎಸ್ ಪಿಪಿಯಾದ ಕೆ ರುದ್ರಸ್ವಾಮಿ ಬದಲು

ಭಯೋತ್ಪಾದನಾ ಕೇಸ್ ಗಳನ್ನು ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ಮಾಜಿ ಪ್ರಾಸಿಕ್ಯೂಟರ್ ಕೆ ರುದ್ರಸ್ವಾಮಿ ಅವರು ಈ ವಿಷಯ ತಿಳಿಸಿ, ಎಸ್ ಪಿಪಿಯಾಗಿ ನೇಮಕವಾಗಿರುವ ಬಗ್ಗೆ ಆದೇಶವನ್ನು ಕೋರ್ಟಿಗೆ ಸಲ್ಲಿಸಿದರು. ಇಲ್ಲಿ ತನಕ ಸದಾಶಿವ ಮೂರ್ತಿ ಅವರು ಈ ಕೇಸಿನಲ್ಲಿ ಪ್ರಾಸಿಕ್ಯೂಟರ್ ಆಗಿದ್ದರು. ಸದ್ಯ ಮದನಿ ಪೆರೋಲ್ ಪಡೆದುಕೊಂಡು ಕೇರಳಕ್ಕೆ ತೆರಳಿದ್ದು, ಅನಾರೋಗ್ಯ ಪೀಡಿತ ತಮ್ಮ ತಾಯಿಯನ್ನು ನೋಡಿಕೊಂಡು ನವೆಂಬರ್ 04ಕ್ಕೆ ಹಿಂತಿರುಗಬೇಕಾಗಿದೆ.

ಮಾಜಿ ಡಿಜಿಪಿ ಶಂಕರ್ ಬಿದರಿಯಿಂದ ಟ್ವೀಟ್

ಮಾಜಿ ಡಿಜಿಪಿ ಶಂಕರ್ ಬಿದರಿಯಿಂದ ಟ್ವೀಟ್ ಮಾಡಿ, ವಿಶೇಷ ಸರ್ಕಾರಿ ಅಭಿಯೋಜಕರನ್ನು ಬದಲಾಯಿಸಿರುವುದೇಕೆ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ. ಬೆಂಗಳೂರು ಬ್ಲಾಸ್ಟ್ ಪ್ರಕರಣ 2008 ಹಾಗೂ 2010ರ ವಿಚಾರಣೆ ಕೊನೆ ಹಂತದಲ್ಲಿದೆ. ಆರೋಪಿಯ ಒತ್ತಡಕ್ಕೆ ಸರ್ಕಾರ ಮಣಿದಿಲ್ಲವಷ್ಟೇ? ಮದನಿ ಈ ಪ್ರಕರಣದಲ್ಲಿ ಖುಲಾಸೆಗೊಳ್ಳದಿರಲಿ ಎಂದಿದ್ದಾರೆ.

English summary
The Karnataka government took a very surprising decision, when it decided to change the Special Public Prosecutor representing the high profile Bengaluru blast case in which Abdul Nasar Madani is also an accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X