Bengaluru: ಬೈಕ್ ಕದ್ದು ಗೆಳೆಯನ ಹೆಂಡತಿಗೆ ಕ್ಯಾನ್ಸರ್ ಚಿಕಿತ್ಸೆಗೆ ನೆರವಾದ ಖತರ್ನಾಕ್ ಕಳ್ಳ!
ಐಷಾರಾಮಿ ಜೀವನ ಸಾಗಿಸಲು ಮತ್ತು ಸುಲಭವಾಗಿ ಹಣ ಸಂಪಾದನೆ ಮಾಡಲು ಹಲವರು ಕಳ್ಳತನದ ದಾರಿ ಹಿಡಿಯುತ್ತಾರೆ. ಆದರೆ ಇಲ್ಲೊಬ್ಬ ಮಾತ್ರ ಸ್ನೇಹಿತನ ಹೆಂಡತಿಗೆ ಚಿಕಿತ್ಸೆ ಕೊಡಿಸಲು ಕದ್ದ ಬೈಕ್‌ಗಳನ್ನು ಮಾರಿದ ಹಣವನ್ನೆಲ್ಲಾ ಖರ್ಚು ಮಾಡಿದ್ದಾನೆ. ಸದ್ಯ ಪೊಲೀಸರ ಅತಿಥಿಯಾಗಿದ್ದು, ಪೊಲೀಸರೇ ಇವನ ಕಥೆ ಕೇಳಿ ಶಾಕ್ ಆಗಿದ್ದಾರೆ.
ಬೆಂಗಳೂರು ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಆರೋಪಿಯ ಸ್ನೇಹಿತನ ಪತ್ನಿ ಕ್ಯಾನ್ಸರ್ ನಿಂದ ಉಳಿಸಿದಲು ಚಿಕಿತ್ಸೆ ನೀಡಲು ಹಣವನ್ನೆಲ್ಲಾ ಬಳಸಿದ್ದಾನೆ ಎಂದು ತಿಳಿದುಬಂದಿದೆ. ಕೆಲವು ತಿಂಗಳ ಹಿಂದೆ ಆರೋಪಿಯ ಪತ್ನಿ ಆತನನ್ನು ಬಿಟ್ಟು ಹೋದಾಗ ಸ್ನೇಹಿತ ಮತ್ತು ಆತನ ಪತ್ನಿ ಆರೋಪಿಗೆ ಆಶ್ರಯ ನೀಡಿದ್ದರು ಎಂದು ವರದಿಯಾಗಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, ಅಶೋಕ್, ಅಲಿಯಾಸ್ ಆಪಲ್, ಬೆಂಗಳೂರಿನಲ್ಲಿ ಹಣ್ಣು ಮಾರಾಟಗಾರನಾಗಿದ್ದು, ಸುಲಭ ಹಣಕ್ಕಾಗಿ ಬೈಕ್ ಕಳ್ಳನಾಗಿದ್ದಾನೆ. ಅಶೋಕ್ ಕೆಟಿಎಂ ಮತ್ತು ಪಲ್ಸರ್ ಬೈಕ್ ಗಳನ್ನು ಗುರಿಯಾಗಿಸಿಕೊಂಡು ನಗರದ ವಿವಿಧೆಡೆ ಕಳ್ಳತನ ಮಾಡುತ್ತಿದ್ದ.
ಇತ್ತೀಚೆಗಷ್ಟೇ ಬೆಂಗಳೂರಿನ ಗಿರಿನಗರದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರಿಗೆ ಸೇರಿದ ಬೈಕ್ ಅನ್ನು ಅಶೋಕ್ ಮತ್ತು ಆತನ ಸ್ನೇಹಿತ ಸತೀಶ್ ಸೇರಿ ಕಳವು ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಸಿದಾಗ ಅಶೋಕ್ ಈ ಮೊದಲು ಕೂಡ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರು ಪತ್ತೆ ಹಚ್ಚಿದ್ದು, ಆತನ ವಿರುದ್ಧ 15 ಪ್ರಕರಣಗಳಿವೆ. ಜೈಲಿನಿಂದ ಒಂದು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿ ಮತ್ತೊಂದು ಅಪರಾಧದಲ್ಲಿ ಪತ್ತೆಯಾಗಿದ್ದ.
ಹೆಚ್ಚಿನ ವಿಚಾರಣೆಯ ನಂತರ, ಅಶೋಕ್ ಅವರು ಬೈಕ್ ಕಳ್ಳತನದಿಂದ ಗಳಿಸಿದ ಎಲ್ಲಾ ಹಣವನ್ನು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ತನ್ನ ಸ್ನೇಹಿತನ ಹೆಂಡತಿಯ ಚಿಕಿತ್ಸೆಗೆ ಬಳಸುತ್ತಿದ್ದ ಎಂದು ಬಹಿರಂಗಪಡಿಸಿದ್ದಾನೆ. ಅಶೋಕ್ ಅಪರಾಧಿ ಎಂದು ಗೊತ್ತಾದ ಬಳಿಕ ಅವರ ಹೆಂಡತಿ ಆತನನ್ನು ಬಿಟ್ಟುಹೋಗಿದ್ದರು. ಆದರೆ ಸ್ನೇಹಿತ ಮತ್ತು ಆತನ ಹೆಂಡತಿ ಅಶೋಕ್‌ರನ್ನು ನೋಡಿಕೊಂಡಿದ್ದರಿಂದ, ಅದಕ್ಕೆ ಪ್ರತಿಯಾಗಿ ಅವರ ಚಿಕಿತ್ಸೆಗೆ ಹಣ ಕೊಡುತ್ತಿರುವುದಾಗಿ ಹೇಳಿದ್ದಾರೆ.
ಇದೇ ವೇಳೆ ಮತ್ತೊಬ್ಬ ಆರೋಪಿ ಸತೀಶ್ ಕೂಡ ಈ ಮೊದಲು ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಕೊಲೆ, ದರೋಡೆ ಸೇರಿದಂತೆ 40ಕ್ಕೂ ಹೆಚ್ಚು ಪ್ರಕರಣಗಳಿವೆ. ಇವರಿಬ್ಬರು ಕದ್ದ ಬೈಕ್‌ಗಳನ್ನು ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದು, ಇಬ್ಬರಿಂದ ಹತ್ತು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications