'ಪಾಡ್ ಕಾರ್ ಟ್ಯಾಕ್ಸಿ' ಯೋಜನೆಗೆ ಬಿಬಿಎಂಪಿಯಿಂದ ಜಾಗತಿಕ ಟೆಂಡರ್

ಬೆಂಗಳೂರು, ನವೆಂಬರ್ 16: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 'ಪಾಡ್ ಕಾರ್ ಟ್ಯಾಕ್ಸಿ' ಯೋಜನೆಗೆ ಜಾಗತಿಕ ಟೆಂಡರ್ ಕರೆದಿದೆ.

"ಪರ್ಸನಲ್ ರ್‍ಯಾಪಿಡ್‌ ಟ್ರಾನ್ಸ್ ಪೋರ್ಟ್ ಸಿಸ್ಟಂ ಜಾರಿಗೆ ಬಿಬಿಎಂಪಿ ಟೆಂಡರ್ ಕರೆದಿದ್ದು ವಿನ್ಯಾಸ, ನಿರ್ಮಾಣ, ಹಣಕಾಸು, ನಿರ್ವಹಣೆ ಮತ್ತು ವರ್ಗವಣೆ (DBFOT) ನೆಲೆಯಲ್ಲಿ ಖಾಸಗೀ ಪಾಲುದಾರಿಕೆಯ ಟೆಂಡರ್ ಕರೆಯಲಾಗಿದೆ," ಎಂದು ಕೆಜೆ ಜಾರ್ಜ್ ಟ್ವೀಟ್ ನಲ್ಲಿ ಹೇಳಿದ್ದಾರೆ.

"ನಾವು ಭಾನುವಾರವೇ ಈ ಸಂಬಂಧ ಟೆಂಡರ್ ಕರೆದಿದ್ದೇವೆ. ಆರಂಭದಲ್ಲಿ ಈ ಯೋಜನೆಯ ಅನುಷ್ಠಾನದ ಸಾಧ್ಯತೆಗಳ ಬಗ್ಗೆ ಐಐಎಸ್ಸಿ ಗೆ ವರದಿ ನೀಡಲು ಸೂಚಿಸಲಾಗಿತ್ತು. ಐಐಎಸ್ಸಿ ವರದಿ ನೀಡದ ನಂತರ ನಾವು ಟೆಂಡರ್ ಕರೆದಿದ್ದೇವೆ. ಯೋಜನೆಗೆ ಬಿಬಿಎಂಪಿ ಒಂದು ರೂಪಾಯಿ ಹಣವನ್ನೂ ಖರ್ಚು ಮಾಡುತ್ತಿಲ್ಲ. ಯೋಜನೆ ಜಾರಿ ಮಾಡುವ ಕಂಪನಿಗಳೇ ಹಣ ಖರ್ಚು ಮಾಡಲಿವೆ," ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ ಭಂಡಾರಿ ಹೇಳಿದ್ದಾರೆ.

30 ಕಿಲೋಮೀಟರ್ ಯೋಜನೆ

ಈ ಕುರಿತು ಟ್ವೀಟ್ ಮಾಡಿರುವ ಕೆಜೆ ಜಾರ್ಜ್, "ಪಾಡ್ ಕಾರ್ ಟ್ಯಾಕ್ಸಿ ತಂತ್ರಜ್ಞಾನಕ್ಕೆ ಐಐಎಸ್ಸಿ ಅನುಮೋದನೆ ನೀಡಿರುವುದರಿಂದ ಬಿಬಿಎಂಪಿ ಟೆಂಡರ್ ಕರೆದಿದೆ. ಬಿಬಿಎಂಪಿ 30ಕಿ.ಮೀ ಉದ್ದದ ಈ ಪಾಡ್ ಕಾರು ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದೆ. ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುವ ಟಾಕ್ಸಿಗಳಂತೆ ಇದು ಕಾರ್ಯ ನಿರ್ವಹಿಸಲಿದೆ. ಇದರಿಂದ ದೂರದಲ್ಲಿರುವ ಪ್ರಯಾಣಿಕರೂ ಮೆಟ್ರೋಗಳನ್ನು ಸಂಪರ್ಕಿಸಬಹುದು," ಎಂದು ಜಾರ್ಜ್ ಹೇಳಿದ್ದಾರೆ.

ಏನಿದು ಪಾಡ್‌ ಕಾರ್‌?

ಏನಿದು ಪಾಡ್‌ ಕಾರ್‌?

5ರಿಂದ 6 ಮಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಸಣ್ಣ ಕಾರುಗಳಿವು. ಪರ್ಸನಲ್‌ ರ್‍ಯಾಪಿಡ್‌ ಟ್ರಾನ್ಸಿಟ್‌ (ಪಿಆರ್‌ಟಿ) ಎಂಬುದು ಈ 'ಪಾಡ್‌ ಕಾರ್‌'ನ ವಿಸ್ತೃತ ರೂಪ. ಇವು ಚಿಕ್ಕ ವಾಹನಗಳಾಗಿದ್ದು ಸ್ವಯಂ ಚಾಲಿತವಾಗಿ ಚಲಿಸುತ್ತವೆ.

ಕಂಬಿ ಕೆಳಗೆ ನೇತಾಡುವಂತೆ ಇವು ಚಲಿಸುತ್ತವೆ. ಗಂಟೆಗೆ ಸರಾಸರಿ 60 ಕಿ.ಮೀ ವೇಗದಲ್ಲಿ ಚಲಿಸುವ ಇವುಗಳಿಗೆ ಅಲ್ಲಲ್ಲಿ ನಿಲ್ದಾಣಗಳನ್ನು ಮಾಡಲಾಗಿರುತ್ತದೆ. ಇಳಿಯುವ ನಿಲ್ದಾಣಗಳನ್ನು ಟಚ್ ಸ್ಕ್ರೀನ್‌ನಲ್ಲಿ ಪ್ರಯಾಣಿಕರಿಗೆ ಆಯ್ಕೆ ಮಾಡಿಕೊಳ್ಳುವ ಅವಕಾಶಗಳಿರುತ್ತವೆ.

ಉದ್ದೇಶವೇನು?

ಉದ್ದೇಶವೇನು?

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡುವುದು ಈ ಪಾಡ್ ಕಾರಿನ ಮುಖ್ಯ ಉದ್ದೇಶ. ಜತೆಗೆ ಈಗಾಗಲೇ ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಮೆಟ್ರೋ ವ್ಯವಸ್ಥೆಗೆ ಪೂರಕವಾಗಿ ಅಂದರೆ ಸಂಪರ್ಕ ರಸ್ತೆಗಳಾಗಿ ಇವು ಕೆಲಸ ಮಾಡಲಿದೆ. ಮೆಟ್ರೋ ರೈಲ್ವೇ ನಿಲ್ದಾಣಗಳಿಗೆ ಸರಿಯಾದ ಸಂಪರ್ಕಗಳಿಲ್ಲದೇ ಇರುವುದರಿಂದ ಇದು ಸಹಾಯಕ್ಕೆ ಬರಲಿದೆ ಎನ್ನಲಾಗಿದೆ.

6-8 ತಿಂಗಳಲ್ಲಿ ಜಾರಿ

6-8 ತಿಂಗಳಲ್ಲಿ ಜಾರಿ

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಮತ್ತು ಮೇಯರ್‌ ಜಿ.ಪದ್ಮಾವತಿ 'ಪಾಡ್‌ ಕಾರ್‌' ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಸೂಚಿಸಿದ್ದಾರೆ. ಈಗಾಗಲೇ ಜಾಗತಿಕ ಟೆಂಡರ್ ಕೂಡಾ ಕರೆಯಲಾಗಿದೆ. 6-8 ತಿಂಗಳಲ್ಲಿ ಇದರ ಕಾಮಗಾರಿ ಆರಂಭವಾಗಲಿದೆ ಎಂದುಕೊಳ್ಳಲಾಗಿದೆ.

ಪ್ರಾಯೋಗಿಕ ಜಾರಿ

ಪ್ರಾಯೋಗಿಕ ಜಾರಿ

ಈ ಪಾಡ್ ಕಾರ್ ಯೋಜನೆಯನ್ನು ಇಂದಿರಾ ನಗರ ಮತ್ತು ವೈಟ್‌ಫೀಲ್ಡ್‌ ನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತದೆ. ಇದರ ಯಶಸ್ಸು ನೋಡಿಕೊಂಡು ಇತರ ಸ್ಥಳಗಳಲ್ಲಿ ಯೋಜನೆ ಜಾರಿಗೆ ತರುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಪಾಡ್ ಕಾರ್ ಯೋಜನೆ ಜಾರಿಗೆ ತರಬಹುದಾದ 35 ಕಿಲೋಮೀಟರ್ ಉದ್ದದ ಒಟ್ಟು 6 ರಸ್ತೆಗಳನ್ನು ಗುರುತಿಸಲಾಗಿದೆ.

ಪರಿಸರಕ್ಕೆ ಯಾವುದೇ ಹಾನಿಯಿಲ್ಲ

ಪರಿಸರಕ್ಕೆ ಯಾವುದೇ ಹಾನಿಯಿಲ್ಲ

ಈ ಪಾಡ್‌ ಕಾರ್‌ ಯೋಜನೆ ಈಗಾಗಲೇ ಮುಂದುವರಿದ ರಾಷ್ಟ್ರಗಳಲ್ಲಿ ಯಶಸ್ವಿಯಾಗಿದೆ ಮತ್ತು ಇದಕ್ಕಾಗಿ ಭೂಸ್ವಾಧೀನ ನಡೆಸುವ, ಮರಗಿಡ ತೆಗೆಯುವ ಻ಅಗತ್ಯವಿಲ್ಲ ಎಂದು ಸರಕಾರ ವಾದಿಸಿದೆ. ರಸ್ತೆ ಮಧ್ಯದ ವಿಭಜಕದಲ್ಲಿ ಪಿಲ್ಲರ್‌ ಮತ್ತು ಕಂಬಿ ಅಳವಡಿಸಿ ಈ ಪಾಡ್ ಕಾರ್ ಯೋಜನೆ ಜಾರಿಗೆ ತರಲಾಗುತ್ತದೆ. ಇದನ್ನು ಖಾಸಗಿ ಸಂಸ್ಥೆಗಳೇ ವಿನ್ಯಾಸಗೊಳಿಸಿ, ನಿರ್ಮಿಸುವುದಲ್ಲದೆ ನಿರ್ವಹಣೆಯನ್ನೂ ಮಾಡಲಿವೆ. ಇದರಿಂದ ಬಿಬಿಎಂಪಿಗೆ ಯಾವುದೇ ಖರ್ಚು ಇರುವುದಿಲ್ಲ.

ತಜ್ಞರ ವಿರೋಧ

ತಜ್ಞರ ವಿರೋಧ

ಆದರೆ ಬಿಬಿಎಂಪಿಯ ಈ ಪಾಡ್ ಕಾರ್ ಯೋಜನೆಗೆ ತಜ್ಞರು ವಿರೊಧ ವ್ಯಕ್ತಪಡಿಸಿದ್ದಾರೆ. ಮೊದಲೇ ಬೆಂಗಳೂರಿನ ರಸ್ತೆಗಳು ಕಿರಿದಾಗಿವೆ. ಇದರ ಮಧ್ಯೆ ಮತ್ತೆ ಪಾಡ್ ಕಾರಿಗಾಗಿ ರಸ್ತೆಗಳ ನಡುವೆ ಡಿವೈಡರ್ ನಿರ್ಮಿಸಿದರೆ ರಸ್ತೆ ಮತ್ತಷ್ಟು ಕಿರಿದಾಗುತ್ತದೆ ಎಂದು ಟ್ರಾಫಿಕ್ ಎಂಜಿನಿಯರ್ ಎಸ್ ನರೇಶ್ ಕುಮಾರ್ ಹಾಗೂ ಸಾರಿಗೆ ತಜ್ಞ ಎಂ.ಎನ್ ಶ್ರೀಹರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+