Bengaluru: ತಮ್ಮ ಕಂಪನಿಯಿಂದ ವಜಾಗೊಂಡ ನೌಕರರಿಗೆ ಹೊಸ ಜಾಬ್‌ ಹುಡುಕಲು ಸಹಾಯ ಮಾಡುತ್ತಿರುವ ಓನರ್‌ಗಳು

ಬೆಂಗಳೂರು ಮೂಲದ ಸ್ಟಾರ್ಟ್‌ ಅಪ್‌ವೊಂದು 18 ಉದ್ಯೋಗಿಗಳನ್ನು ವಜಾಗೊಳಿಸಿದೆ. ವಜಾ ಮಾಡಿದ ಸಿಬ್ಬಂದಿಗೆ ಹೊಸ ಉದ್ಯೋಗಗಳನ್ನು ಹುಡುಕಲು ಸಹಾಯ ಮಾಡುತ್ತೇವೆಂದು ಕಂಪನಿಯ ಸಹ-ಸಂಸ್ಥಾಪಕರು ಹೇಳಿದ್ದಾರೆ.

ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ನ ಇಬ್ಬರು ಸಹ-ಸಂಸ್ಥಾಪಕರು ಡಜನ್‌ಗೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಬುಧವಾರ ಘೋಷಿಸಿದ್ದಾರೆ.

Bengaluru-based startup lays off 18 employees, co-founders offer to help fired staff find new jobs

ಕಂಪನಿಗೆ ಸ್ಥಿರತೆಯನ್ನು ಒದಗಿಸುವ ದೃಷ್ಟಿಯಿಂದ ಈ ವಜಾಗೊಳಿಸುವಿಕೆ ಅನಿವಾರ್ಯವಾಗಿದೆ ಎಂದು ಸಂಭವ್ ಜೈನ್ ಟ್ವಿಟರ್‌ನಲ್ಲಿ ವಿವರಿಸಿದ್ದಾರೆ.

ಫಿನ್‌ಟೆಕ್ ಅಪ್ಲಿಕೇಶನ್‌ ಸಹ-ಸಂಸ್ಥಾಪಕರಾದ ಜೈನ್‌ ಅವರು ತಮ್ಮ ಕಂಪನಿಯಿಂದ ವಜಾಗೊಂಡ ಸಿಬ್ಬಂದಿಗೆ ಹೊಸ ನೌಕರಿ ನೀಡುವುದಾದರೆ ತಮ್ಮನ್ನು ಸಂಪರ್ಕಿಸಬೇಕೆಂದು ಟ್ವೀಟ್‌ ಮಾಡಿದ್ದಾರೆ. ನಿಮಗೆ ಹೊಸ ಸಿಬ್ಬಂದಿ ಬೇಕಿದ್ದರೆ ನನ್ನನ್ನು ಸಂಪರ್ಕಿಸಿ ಎಂದು ಕಂಪನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಇದೇ ರೀತಿ, ಇನ್ನೊಬ್ಬ ಸಹ-ಸಂಸ್ಥಾಪಕರಾದ ಕುಶ್ ತನೇಜಾ ಅವರು ಜೈನ್ ಅವರ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ್ದಾರೆ. ಹೊಸ ಉದ್ಯೋಗವನ್ನು ಹುಡುಕುವಲ್ಲಿ ಫಾಮ್‌ಸ್ಟಾರ್‌ಗಳಿಗೆ ಸಹಾಯವುದಾಗಿ ತಿಳಿಸಿದ್ದಾರೆ.

Bengaluru-based startup lays off 18 employees, co-founders offer to help fired staff find new jobs

ಕಂಪನಿ ಸಂಸ್ಥಾಪಕರಾಗಿ ಮಾಡಬಹುದಾದ ಅತ್ಯಂತ ಕಷ್ಟಕರವಾದ ಕೆಲಸವೆಂದರೆ ನೌಕರರನ್ನು ಕೈಬಿಡುವುದು. ಇಂದು ಕಠಿಣ ದಿನವಾಗಿತ್ತು. ಏಕೆಂದರೆ ನಾವು ಫ್ಯಾಮ್‌ ಕಂಪನಿಯ 18 ಉದ್ಯೋಗಿಗಳನ್ನು ವಜಾಗೊಳಿಸಬೇಕಾಯಿತು. ಬೇರೆಯಾಗುವುದು ಎಂದಿಗೂ ಸುಲಭದ ಕೆಲಸವಲ್ಲ. ವಜಾಗೊಂಡ ಉದ್ಯೋಗಿಗಳೆಲ್ಲರೂ ಭಾವನಾತ್ಮಕವಾಗಿ ನಮ್ಮ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಜೈನ್‌ ಹೇಳಿದ್ದಾರೆ.

ಫ್ಯಾಮ್ ಅನ್ನು ಅಭಿವೃದ್ಧಿಪಡಿಸುವುದರ ಹೊರತಾಗಿ, ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಉದ್ಯೋಗಿಗಳು ಬೆಂಬಲವಾಗಿ ನಿಂತಿದ್ದಾರೆ. ಅವರ ವೈಯಕ್ತಿಕ ಬೆಳವಣಿಗೆಯನ್ನು ಹೆಚ್ಚಿಸಲು ಆಗಲಿಲ್ಲ ಎಂಬ ಕೊರಗು ನನಗಿದೆ ಎಂದು ಹೇಳಿಕೊಂಡಿದ್ದಾರೆ.

Bengaluru-based startup lays off 18 employees, co-founders offer to help fired staff find new jobs

ವಜಾಗೊಂಡ ಸಿಬ್ಬಂದಿಗೆ ಶುಭ ಹಾರೈಸಿರುವ ಜೈನ್ ಅವರು ಭವಿಷ್ಯದಲ್ಲಿ ಅದ್ಭುತವಾದ ಕೆಲಸಗಳನ್ನು ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ನಾವು ಅವರ ( ವಜಾಗೊಂಡ ಸಿಬ್ಬಂದಿ ) ಬಗ್ಗೆ ಎಲ್ಲಾ ಸಹಾನುಭೂತಿಯನ್ನು ಹೊಂದಿದ್ದೇವೆ. ಈ ಜನರು ಹೋದಲ್ಲೆಲ್ಲಾ ಅದ್ಭುತಗಳನ್ನು ಸಾಧಿಸುತ್ತಾರೆ ಎಂಬ ವಿಶ್ವಾಸವಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಉತ್ತಮವಾಗಿರಲಿ ಎಂದು ಹಾರೈಸುತ್ತೇವೆ' ಎಂದು ಜೈನ್‌ ತಿಳಿಸಿದ್ದಾರೆ.

ಇದೇ ರೀತಿ ಇನ್ನೊಬ್ಬ ಸಂಸ್ಥಾಪಕ ತನೇಜಾ ಕೂಡ ಟ್ವೀಟ್ ಮಾಡಿದ್ದಾರೆ. 'ನಮ್ಮ 18 ಫ್ಯಾಮ್‌ಸ್ಟಾರ್‌ಗಳು ನಿರ್ಗಮಿಸಬೇಕಾಗಿರುವುದರಿಂದ ಇಂದು ನಮಗೆ ಅತ್ಯಂತ ದುಃಖದ ದಿನವಾಗಿದೆ. ಫ್ಯಾಮ್ ಅನ್ನು ನಿರ್ಮಿಸುವಲ್ಲಿ ಅವರು ನೀಡಿರುವ ಕೊಡುಗೆಗಳು ದೊಡ್ಡದಾಗಿವೆ. ಅವರ ಬಗ್ಗೆ ನಾವು ಎಂದೆಂದಿಗೂ ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+