• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರ ಸೈಕಲ್ ಕ್ರೇಜ್‌ಗೆ ಸಿಕ್ತು ಪ್ರಶಸ್ತಿಯ ಗರಿ

|
Google Oneindia Kannada News

ಬೆಂಗಳೂರು, ಜುಲೈ 29: ಬೆಂಗಳೂರು, ವಾರಂಗಲ್‌ನಲ್ಲೇ ಸೈಕಲ್‌ ಕ್ರೇಜ್ ಹೆಚ್ಚಿದೆ. ಹೀಗಾಗಿ ಬೆಂಗಳೂರು ಪ್ರಶಸ್ತಿಯೊಂದನ್ನು ತನ್ನದಾಗಿಸಿಕೊಂಡಿದೆ.

ಸೈಕಲ್ 4 ಚೇಂಜ್ ಚಾಲೆಂಜ್‌ನ ಭಾಗವಾಗಿ ಕೇಂದ್ರ ಸರ್ಕಾರವು ನೀಡುವ "ಇಂಡಿಯಾಸ್ ಟಾಪ್ 11 ಸೈಕ್ಲಿಂಗ್ ಪಿಯೋನರ್ಸ್' ಪ್ರಶಸ್ತಿಗೆ ಬೆಂಗಳೂರು ಕೂಡ ಭಾಜನವಾಗಿದೆ.

ಜುಲೈ 28ರಂದು ನಡೆದ ಆನ್‌ಲೈನ್ ಕಾರ್ಯಕ್ರಮದ ಮೂಲಕ ಆಯ್ದ ನಗರಗಳಲ್ಲಿ ತಮ್ಮ ಉಪಕ್ರಮಗಳನ್ನು ಹೆಚ್ಚಿಸಲು ತಲಾ 1 ಕೋಟಿ ರೂ. ಪಡೆಯಲಿವೆ ಎಂದು ಸಚಿವ ದುರ್ಗಾ ಶಂಕರ್ ಮಿಶ್ರಾ ತಿಳಿಸಿದ್ದಾರೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಾರಿಗೆ ತಜ್ಞರನ್ನೊಳಗೊಂಡ ತೀರ್ಪುಗಾರರ ತಂಡವು ಶಾರ್ಟ್ ಲಿಸ್ಟ್‌ ಮಾಡಿದ 25 ನಗರಗಳಲ್ಲಿ 11 ನಗರಗಳನ್ನು ಆಯ್ಕೆ ಮಾಡಲಾಯಿತು.

ಭುವನೇಶ್ವರ, ಚಂಡೀಗಢ, ನಾಗ್ಪುರ, ಕೊಹಿಮಾ, ನ್ಯೂ ಟೌನ್ ಕೊಲ್ಕತ್ತಾ, ಪಿಂಪ್ರಿ ಚಿಂಚ್ ವಾಡ್, ರಾಜ್‌ಕೋಟ್, ಸೂರತ್ ಮತ್ತು ವಡೋದರಾ ಕೂಡ ಈ ಪಟ್ಟಿಯಲ್ಲಿ ಸೇರಿದೆ.

ಬೆಂಗಳೂರು ಮತ್ತು ವಾರಂಗಲ್ ಮಾತ್ರ ದಕ್ಷಿಣ ಭಾರತದ ಎರಡು ನಗರಗಳಾಗಿವೆ. ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ತನ್ನ ಯೋಜನೆಯ ಭಾಗವಾಗಿ ಪಾಪ್‌-ಟಪ್ ಸೈಕಲ್ ಪಥಗಳು ಮತ್ತು ಇತರೆ ಶಾಶ್ವತ ಮೂಲಸೌಕರ್ಯಗಳನ್ನು ಜಾರಿಗೆ ತಂದಿದೆ.

ನಗರದಲ್ಲಿ ಸೈಕ್ಲಿಂಗ್ ಪ್ರಮಾಣ ಹೆಚ್ಚಿಸಲು ನಾಗರಿಕರು ಮೊದಲ ಬಾರಿಗೆ ಕೈ ಜೋಡಿಸಿದ್ದರು. ಸೈಕ್ಲಿಂಗ್‌ನಿಂದಾಗುವ ಪ್ರಯೋಜನಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಅಗತ್ಯವಿದೆ.
ಇದೀಗ ಮತ್ತೊಂದು ಹಂತದ ಸ್ಪರ್ಧೆಯು ಆಗಸ್ಟ್‌ನಿಂದ ಪ್ರಾರಂಭವಾಗಲಿದೆ. ಆಗ 82 ನಗರಗಳು ಇದರ ಭಾಗವಾಗಿರುವುದಿಲ್ಲ ಹೊಸ ನಗರಗಳು ಸೇರ್ಪಡೆಗೊಳ್ಳಲಿದೆ.

ವಾಕಿಂಗ್ ಮತ್ತು ಸೈಕ್ಲಿಂಗ್ ಜನರು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಹೃದ್ರೋಗ, ಸ್ಟ್ರೋಕ್, ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುವುದಲ್ಲದೇ ಸಂಚಾರಿ ಸಾಧನವಾಗಿ ಸಹಕಾರಿ. ವಿಶೇಷವಾಗಿ ಟೈಪ್ 1 ಮತ್ತು ಟೈಪ್ 2 ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಆರೋಗ್ಯಕರ ಜೀವನಶೈಲಿ ಅಳವಡಿಕೆಗೆ ಪ್ರೇರೇಪಣೆ ನೀಡಲು ಸಹ ಈ ದಿನವನ್ನು ಆಚರಿಸಲಾಗುತ್ತದೆ.

ಸೈಕಲ್ ಎಂದರೆ ಯಾರಿಗೆ ಇಷ್ಟವಿಲ್ಲ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯವರೆಗೆ ಸೈಕಲ್ ಸವಾರಿ ಮಾಡುವುದು ಎಂದರೆ ಎಲ್ಲರಿಗೂ ಇಷ್ಟವೇ. ಸೈಕ್ಲಿಂಗ್ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ.

Recommended Video

   KL Rahul ಅವರ ಕಡೇ ಪಂದ್ಯವಾಡಿದ್ದು 2019ರಲ್ಲಿ | Oneindia Kannada

   ತೂಕ ಇಳಿಕೆಯಿಂದ ಹಿಡಿದು ಮನಸ್ಸಿಗೆ ಆಹ್ಲಾದ ನೀಡುವವರೆಗೆ ಸೈಕ್ಲಿಂಗ್ ಹಲವು ರೀತಿಯಲ್ಲಿ ನಮಗೆ ಅನುಕೂಲಗಳನ್ನುಂಟು ಮಾಡುತ್ತದೆ. ಕೆಲಸಕ್ಕೆ, ಶಾಲೆಗೆ, ಪಾರ್ಕ್‌ಗೆ ಹೋಗಲು ನಿಜಕ್ಕೂ ಸೈಕಲ್ ಅನುಕೂಲಕಾರಿ.

   English summary
   Bengaluru and Warangal are among ‘India’s top 11 cycling pioneers’ awarded by the Union government as part of the Cycles4Change Challenge. The selected cities will receive Rs 1 crore each to scale up their cycling initiatives, announced Durga Shanker Mishra, Secretary, Ministry of Housing and Urban Affairs (MoHUA), via an online event held on Wednesday, July 28.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X