ಬೆಂಗಳೂರು - ಗೋವಾ ಮದುವೆಯಾದರೆ ವಿಶಾಖಪಟ್ಟಣಂ ಅದರ ಮಗು: ಆಂಧ್ರ ಸಚಿವ!
ಬೆಂಗಳೂರಿನ ಬಗ್ಗೆ ನಿತ್ಯವೂ ಒಂದಿಲ್ಲೊಂದು ಚರ್ಚೆಗಳು ನಡೆಯುತ್ತಲ್ಲೇ ಇರುತ್ತವೆ. ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮಗ ಹಾಗೂ ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಅವರು ಬೆಂಗಳೂರಿನ ಬಗ್ಗೆ ಕೊಟ್ಟಿರುವ ಹೇಳಿಕೆಯೊಂದು ಬೆಂಗಳೂರಿಗರು ಹೆಮ್ಮೆ ಪಡುವಂತೆ ಹಾಗೂ ನಗುವಂತೆ ಆಗಿದೆ. ಆಂಧ್ರಪ್ರದೇಶದ ಪ್ರಮುಖ ನಗರವೊಂದರ ತಂದೆ ಬೆಂಗಳೂರು ಎಂದು ಅವರು ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿ ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಇದೀಗ ಬೆಂಗಳೂರಿನಂತೆಯೇ ನಮ್ಮ ರಾಜ್ಯದ ನಗರಗಳನ್ನೂ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ನೆರೆಯ ರಾಜ್ಯದವರು ಹೇಳುತ್ತಿದ್ದಾರೆ.
ಬೆಂಗಳೂರು ನಗರವು ಅಭಿವೃದ್ಧಿಯಲ್ಲಿ ಕುದುರೆಯಂತೆ ಓಡುತ್ತಿದೆ. ಈಗ ಬೆಂಗಳೂರು ಅಭಿವೃದ್ಧಿ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ನಗರಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಪಕ್ಷ ಹಾಗೂ ಜನಸೇನಾ ಪಕ್ಷ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದೆ. ಈ ರಾಜ್ಯದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ತೆಗೆದುಕೊಂಡಿರುವ ನಿರ್ಧಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಈ ರೀತಿ ಇರುವಾಗಲೇ ಆಂಧ್ರಪ್ರದೇಶದ ಈ ನಗರದ ತಂದೆ ಬೆಂಗಳೂರು ಆಗಿದೆ ಎಂಬರ್ಥದಲ್ಲಿ ಹೇಳಿದ್ದಾರೆ.

ವಿಶಾಖಪಟ್ಟಣವು ಐಟಿ ಉದ್ಯಮಕ್ಕೆ ಸೂಕ್ತ ಜಾಗವಾಗಿ ಅಭಿವೃದ್ಧಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ. ನಗರದಲ್ಲಿ ಹಲವು ಮೂಲಸೌಕರ್ಯಗಳು ಇವೆ. ಅದ್ಭುತ ಪ್ರತಿಭೆಗಳಿವೆ. ಉತ್ತಮ ಮೂಲಸೌಕರ್ಯ ಸೇವೆ ಹಾಗೂ ಸಬ್ಸಿಡಿ ಬೆಲೆಯಲ್ಲಿ ಭೂಮಿಯನ್ನು ಕೊಡುತ್ತಿದ್ದೇವೆ. ಈ ಭಾಗದಲ್ಲಿ ಹೆಚ್ಚಿನ ಹೂಡಿಕೆ ಮಾಡುದುವುದಕ್ಕೆ ಆಕರ್ಷಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು - ಗೋವಾ ಮದುವೆಯಾದರೆ: ಇನ್ನು ಇದೇ ಸಂದರ್ಭದಲ್ಲಿ ಅವರು ಬೆಂಗಳೂರು ಹಾಗೂ ಗೋವಾ ಮದುವೆಯಾಗಿ ಮಗುವನ್ನು ಹೊಂದಿದ್ದರೆ ಅದು ವಿಶಾಖಪಟ್ಟಣಂ ಆಗಿರುತ್ತಿತ್ತು ಎಂದು ಅವರು ಹೇಳಿದ್ದಾರೆ. ವಿಶಾಖಪಟ್ಟಣಂ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಯಾಗಿದೆ. ಇಲ್ಲಿನ ಸಮುದ್ರ ಹಾಗೂ ಐಟಿ ಕ್ಷೇತ್ರಕ್ಕೆ ಪೂಕರ ವಾತಾರಣ ಇರುವುದನ್ನು ರೂಪಕವಾಗಿ ಇರಿಸಿಕೊಂಡು ಅವರು ಬೆಂಗಳೂರು - ಗೋವಾ ಮದುವೆಯಾಗಿದ್ದರೆ ವಿಶಾಖಪಟ್ಟಂ ಅದರ ಮಗು ಎಂದಿದ್ದಾರೆ.
ನಾನು ಯಾವಾಗಲೂ ತಮಾಷೆಯಾಗಿ ಈ ವಿಚಾರವನ್ನು ಹೇಳುತ್ತಿರುತ್ತೇನೆ. ಗೋವಾ - ಬೆಂಗಳೂರು ಎರಡೂ ಪ್ರದೇಶದ ವಿಶೇಷತೆಗಳು ಸಹ ವಿಶಾಖಪಟ್ಟಣಂನಲ್ಲಿ ಇದೆ ಎಂದು ಅವರು ಹೇಳಿದ್ದಾರೆ. ಮುಂದುವರಿದು ನಮಲ್ಲಿ ಎಲ್ಲಾ ಮಾದರಿಯ ಸೌಲಭ್ಯಗಳೂ ಇವೆ. ವಿಶಾಖಪಟ್ಟಣಕ್ಕೆ ದೊಡ್ಡ ದೊಡ್ಡ ಹೂಡಿಕೆಗಳು ಬರಲಿವೆ ಎಂದಿದ್ದಾರೆ.
ಇನ್ನು ಐಟಿ ಕ್ಷೇತ್ರದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಟಿಸಿಎಸ್ ಕಂಪನಿಗೆ ವಿಶಾಖಪಟ್ಟಣದಲ್ಲಿ ಅಭಿವೃದ್ಧಿ ಕೇಂದ್ರಕ್ಕಾಗಿ ಬರೋಬ್ಬರಿ 21 ಎಕರೆ ಭೂಮಿಯನ್ನು ಕೇವಲ 99 ಪೈಸೆಗೆ ಕೊಡುವ ಒಪ್ಪಂದವನ್ನು ಆಂಧ್ರಪ್ರದೇಶ ಸರ್ಕಾರ ಮಾಡಿಕೊಂಡಿದ್ದು, ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಅವರು ಬೆಂಗಳೂರಿನ ಉದಾಹರಣೆಯನ್ನು ಕೊಟ್ಟಿದ್ದಾರೆ.
ಇನ್ನು ಈಚೆಗಷ್ಟೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಬೆಂಗಳೂರಿಗಿಂತ ಹೈದರಾಬಾದ್ ನಗರವು ಯಾವುದೇ ವಿಷಯದಲ್ಲೂ ಹಿಂದಿಲ್ಲ. ಹೈದರಾಬಾದ್ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿ ಇದೆ ಎಂದು ಹೇಳಿದ್ದರು.












Click it and Unblock the Notifications