Bengaluru Airport: 50ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬ, ರದ್ದು, ನಟರು ಸೇರಿ ಸಾರ್ವಜನಿಕರ ಪರದಾಟ, ಕಾರಣ?

ಬೆಂಗಳೂರು, ಜನವರಿ 15: ಭಾನುವಾರ ದೇಶದಲ್ಲಿ ಘಟಿಸಿದ ಹಾವಾಮಾನ ವೈಪರಿತ್ಯಗಳ ಪರಿಣಾಮವಾಗಿ ಬಾಲಿವುಡ್ ನಟ ಸೇರಿದಂತೆ ಸಾವಿರಾರು ಪ್ರಯಾಣಿಕರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಪರದಾಡಬೇಕಾಯಿತು.

ಹೌದು, ಬೆಂಗಳೂರಿನ ವಿಮಾನ ನಿಲ್ದಾಣದಿಂದ ದೇಶದ ವಿವಿಧೆಡೆ ತೆರಳಬೇಕಿದ್ದ ಸುಮಾರು 50ಕ್ಕೂ ಹೆಚ್ಚು ದೇಶೀಯ ವಿಮಾನಗಳು ಭಾನುವಾರ ಗಂಟೆಗಳ ಕಾಲ ತಡವಾಗಿ ತೆರಳಬೇಕಾಯಿತು. ಇದರಿಂದ ಪ್ರಯಾಣಿಕರು ನಿರಾಶೆಗೊಂಡರು. ಸಾಕಷ್ಟು ಕಾಲ ಏರ್‌ಪೋರ್ಟ್‌ನಲ್ಲಿಯೇ ಸಿಕ್ಕಿಹಾಕಿಕೊಂಡು ಪರದಾಡಿದರು.

Bengaluru Airport Witnessed More Than 50 Flights Delayed due to Bad Condition of Weather

ಈ ಮಾರ್ಗದ ವಿಮಾನಗಳು ರದ್ದು

ಮೂಲಗಳ ಪ್ರಕಾರ, ಬೆಂಗಳೂರಿನಿಂದ ಗೋವಾ, ದೆಹಲಿ, ವಾರಣಾಸಿ, ಮುಂಬೈ, ಪ್ರಯಾಗರಾಜ್ ಮತ್ತು ವಿಜಯವಾಡಕ್ಕೆ ಹೋಗಬೇಕಿದ್ದ ಕೆಲವು ವಿಮಾನಗಳು ಮಂಜಿನ ವಾತಾವರಣ, ಹವಾಮಾನ ವೈಪರಿತ್ಯದಿಂದಾಗಿ ರದ್ದಾದವು. ಇಂಡಿಗೋ, ಆಕಾಶ ಏರ್ ಮತ್ತು ಏರ್ ಇಂಡಿಯಾ ವಿಮಾನಗಳು ವಿಳಂಬಗೊಂಡ ವಿಮಾನಗಳಲ್ಲಿ ಸೇರಿವೆ. ಅಲ್ಲದೇ ವಿಮಾನಗಳ ನಿಗದಿತ ಸಮಯದಲ್ಲಿ ಹಾರದ ಪರಿಣಾಮ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 1 ಅಸ್ತವ್ಯಸ್ತಗೊಂಡಿತು.

ವಿಮಾನ ವಿಳಂಬಕ್ಕೆ ಬಾಲಿವುಡ್ ನಟ ಅಸಮಾಧಾನ

ಬಾಲಿವುಡ್ ನಟ 'ರಣವೀರ್ ಶೋರೆ' ಅವರು ಸಾಮಾಜಿಕ ಜಾಲತಾಣದಲ್ಲಿ ಏರ್‌ಲೈನ್‌ನ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ ತೊಂದರೆಗೆ ಅವರು ಪೋಸ್ಟ್ ಮಾಡಿದ್ದು, ಅದರಲ್ಲಿ 'ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಸಸೂತ್ರವಾಗಿ ನಡೆಯದ ಹಿನ್ನೆಲೆ ಸಂಪೂರ್ಣ ಗದ್ದಲ ಉಂಟಾಗಿತ್ತು. ಈ ಅವ್ಯವಸ್ಥೆಗೆ ವಿಮಾನಯಾನ ಸಂಸ್ಥೆಗಳು ಜವಾಬ್ದಾರರೇ ಅಥವಾ ಇಲ್ಲವೇ? ಎಂಬುದನ್ನು ತಿಳಿಸಬೇಖು. ಇಂತಹ ಸಮಯದಲ್ಲಿ ಪ್ರಯಾಣಿಕರು ಏನು ಮಾಡಬೇಕು ಎಂದೆಲ್ಲ'' ಬರೆದುಕೊಂಡಿದ್ದಾರೆ.

ಇಂದು ಸಹ ವಿಮಾನಗಳು ತಡವಾಗಿ ಹಾರಾಟ

ಕೇವಲ ನಟ ಮಾತ್ರವಲ್ಲದೇ ಹಲವಾರು ಪ್ರಯಾಣಿಕರು ವಿಮಾನ ವಿಳಂಬದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂಕಟವನ್ನು ವ್ಯಕ್ತಪಡಿಸಿದ್ದಾರೆ. ಅಸಹಾಯಕತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವಿಮಾನಯಾನ ವಿಳಂಬ ಸಂಬಂಧ ನಮ್ಮ ಪ್ರಶ್ನೆಗಳಿಗೆ ಸಿಬ್ಬಂದಿ ಪ್ರತಿಕ್ರಿಯಿಸಲಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಇದರೊಂದಿಗೆ ಇಂದು ಸೋಮವಾರ ಬೆಳಗ್ಗೆ ವಿಮಾನಗಳು ತಡವಾಗಿ ಹಾರಲಿವೆ ಎಂದು ನಿಲ್ದಾಣದ ಮೂಲಗಳು ಮಾಹಿತಿ ನೀಡಿವೆ.

Bengaluru Airport Witnessed More Than 50 Flights Delayed due to Bad Condition of Weather

ಕೇವಲ ಬೆಂಗಳೂರಿನಿಂದ ಬೇರೆಡೆ ತೆರಳುವ ಜೊತೆಗೆ ಬೆಂಗಳೂರಿಗೆ ಬರುವ ವಿಮಾನಗಳು ಸಹ ತಡವಾಗಿ ಆಗಮಿಸಿವೆ ಎಂದು ಇಂಡಿಗೋ ಮಾಹಿತಿ ನೀಡಿದೆ. ನಾವು ಅಸ್ವಸ್ಥತೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ. ವಿಳಂಬ ಮಾಡುವ ಉದ್ದೇಶ ನಮ್ಮದಲ್ಲ. ಇದರಿಂದ ನಮಗೂ ತೊಂದರೆ ಆಗಿದೆ ಎಂದು ಇಂಡಿಯೋ ತಿಳಿಸಿದೆ.

ದೆಹಲಿಯಿಂದಲೂ ತಡವಾಗಿ ವಿಮಾನ ಹಾರಾಟ

ಬೆಂಗಳೂರು ಮಾತ್ರವಲ್ಲದೆ, ಉತ್ತರ ಭಾರತದ ರಾಜ್ಯಗಳಲ್ಲಿ ಭಾನುವಾರ ದಟ್ಟ ಮಂಜು ಆವರಿಸಿತ್ತು. ಇದರಿಂದಾಗಿ ದೆಹಲಿಯಿಂದ ಹಲವು ವಿಮಾನಗಳ ಹಾರಾಟ ಸಹ ವಿಳಂಬವಾಯಿತು. ತಡವಾದ ವಿಮಾನಗಳ ಸಂಖ್ಯೆಯ ಬಗ್ಗೆ ಅಧಿಕೃತ ದೃಢೀಕರಣವಿಲ್ಲ ಆದರೂ ಸಹಿತಿ ದೆಹಲಿ ವಿಮಾನ ನಿಲ್ದಾಣದ ವೆಬ್‌ಸೈಟ್ ಸುಮಾರು 200 ವಿಮಾನಗಳು ದಿನವಿಡೀ ವಿಳಂಬವಾಗಿದೆ ಎಂದು ಪ್ರದರ್ಶನದಲ್ಲಿ ತೋರಿಸಲಾಯಿತು. ವಿಮಾನ ಬುಕ್ಕಿಂಗ್ ಬಹುತೇಕ ಸೈಟ್‌ಗಳು ಸಹ ವಿಮಾನ ರದ್ದಿನ ಬಗ್ಗೆ ಮಾಹಿತಿ ನೀಡಿದವು.

ವಿಮಾನಯಾನಕ್ಕೆ ಮಾತ್ರವಲ್ಲದೇ ಹವಾಮಾನ ವೈಪರಿತ್ಯದಿಂದ ಭಾರತದ ವಿವಿಧೆಡೆ ರೈಲುಗಳು ತಡವಾಗಿ ಸಂಚರಿಸಿವೆ. ಅದರಲ್ಲೂ ವಿಶೇಷವಾಗಿ ಉತ್ತರ ಭಾರತದಿಂದ ದೇಶದ ವಿವಿಧೆಡೆಗೆ ಸಂಚರಿಸಬೇಕಾಗಿದ್ದ ರೈಲುಗಳು ವಿಳಂಭಗೊಂಡವು, ಕೆಲವು ರೈಲುಗಳ ಸಂಚಾರ ಅಸ್ತವೆಸ್ತದಿಂದ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+