• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಂಪೇಗೌಡ ಏರ್‌ಪೋರ್ಟ್: 2022ಕ್ಕೆ ಬಳಕೆದಾರರ ಶುಲ್ಕ ಹೆಚ್ಚಳ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09: ಕೆಂಪೇಗೌಡ ಏರ್‌ಪೋರ್ಟ್ ಬಳಕೆದಾರರ ಶುಲ್ಕ 2022ರಲ್ಲಿ ಹೆಚ್ಚಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮುಂದಿನ ವರ್ಷದ ಮಾರ್ಚ್ ವರೆಗೂ ಬಳಕೆದಾರರ ಶುಲ್ಕವನ್ನು ಯಥಾ ಸ್ಥಿತಿ ಕಾಯ್ದುಕೊಳ್ಳಲು ಎಇಆರ್ ಎ ಹೇಳಿದೆ. ಆದರೆ 2022 ರ ಏಪ್ರಿಲ್ 1 ರಿಂದ ಹೆಚ್ಚಿನ ಪ್ರಮಾಣದಲ್ಲಿ ವಿಮಾನ ನಿಲ್ದಾಣದ ಶುಲ್ಕ ಹೆಚ್ಚಿಸಲು ಅನುಮತಿ ನೀಡಿದೆ.

ಈ ದೇಶಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ RTPCR ಕಡ್ಡಾಯವಲ್ಲಈ ದೇಶಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ RTPCR ಕಡ್ಡಾಯವಲ್ಲ

ಜುಲೈ ನ ಮೊದಲ ವಾರದಲ್ಲಿ ಎಇಆರ್ ಎ ಅ.1 ರಿಂದ ಶುಲ್ಕ ಹೆಚ್ಚುಗೊಳಿಸುವುದನ್ನು ಪ್ರಸ್ತಾವಿಸಿತ್ತು. ಈ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಶುಲ್ಕ ಏರಿಕೆಯಲ್ಲಿ ವಿಳಂಬ ಉಂಟಾಗಿದೆ.

   ಪಾಕಿಸ್ತಾನ ಚೀನಾಗೆ ನಡುಕ ಹುಟ್ಟಿಸಲು ಬಲಿಷ್ಠವಾಯ್ತು ಭಾರತೀಯ ವಾಯುಸೇನೆ | Oneindia Kannada

   ಅಕ್ಟೊಬರ್ 2021 ರಿಂದ 2023 ರ ಮಾರ್ಚ್ ವರೆಗೂ ಯುಡಿಎಫ್ ಶುಲ್ಕವನ್ನು 450 ರೂಪಾಯಿಗಳಿಗೆ ಏರಿಕೆ ಮಾಡುವುದು, 2023 ರ ಏಪ್ರಿಲ್ ನಿಂದ 2024 ರ ಮಾರ್ಚ್ ವರೆಗೆ 550 ರೂಪಾಯಿ 2024 ರ ಏಪ್ರಿಲ್ ನಿಂದ 2026 ರ ಮಾರ್ಚ್ ವರೆಗೂ 555 ರೂಪಾಯಿಗಳಿಗೆ ದೇಶೀಯ ಪ್ರಯಾಣಿಕ ವಿಮಾನಗಳಿಗೆ ಶುಲ್ಕ ಹೆಚ್ಚಿಸುವ ಪ್ರಸ್ತಾವನೆಯನ್ನು ಮುಂದಿಡಲಾಗಿತ್ತು. ಬಿಐಎಎಲ್ ನ ಏರ್ ಪೋರ್ಟ್ ಆಪರೇಟರ್ ಎಇಆರ್ ಎ ಯ ಶುಲ್ಕ ನಿರ್ಧಾರಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

   ಕೆಂಪೇಗೌಡ ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕ ಸದ್ಯಕ್ಕೆ ಏರಿಕೆ ಇಲ್ಲ ಎಂದು ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಕ ಪ್ರಾಧಿಕಾರ (ಎಇಆರ್ ಎ) ತನ್ನ ಆದೇಶದಲ್ಲಿ ತಿಳಿಸಿದೆ.

   ಮುಂದಿನ ಆರ್ಥಿಕ ವರ್ಷದಿಂದ ಈ ಶುಲ್ಕದ ದರ ದೇಶೀಯ, ಹೊರಹೋಗುವ ವಿಮಾನಗಳಿಗೆ 350 ರೂಪಾಯಿ, ಹೊರಹೋಗುವ ಅಂತಾರಾಷ್ಟ್ರೀಯ ವಿಮಾನಗಳಿಗೆ 1,200 ರೂಪಾಯಿಗಳನ್ನು ನಿಗದಿಪಡಿಸಗುತ್ತದೆ. ಹೊಸ ಶುಲ್ಕ ದರ ಮಾರ್ಚ್ 2023 ಕ್ಕೆ ಜಾರಿಯಲ್ಲಿರಲಿದೆ.

   ಈಗ ದೇಶೀಯ, ಹೊರ ತೆರಳುವ ವಿಮಾನಗಳಿಗೆ ಏರ್ ಪೋರ್ಟ್ ಬಳಕೆದಾರರ ಶುಲ್ಕ 184 ರೂಪಾಯಿಗಳಾಗಿದ್ದು, ಹೊರ ಹೋಗುವ ಅಂತಾರಾಷ್ಟ್ರೀಯ ವಿಮಾನಗಳಿಗೆ 839 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಇದು 2021-2026 ರ ನಡುವಿನ ಮೂರನೇ ನಂತರದ ಅವಧಿ ಪ್ರಾರಂಭವಾದ ನಂತರವೂ ಅಕ್ಟೋಬರ್ 1 ವರೆಗೆ ಈ ದರವೇ ಮುಂದುವರೆಯಲಿದೆ.

   ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಹೊಣೆ ಹೊತ್ತಿರುವ ಬೆಂಗಳೂರು ಇಂಟರ್‌ ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಡಿಜಿಟಲ್ ಸೇವೆ, ತಂತ್ರಜ್ಞಾನ, ಕಾರ್ಯಾಚರಣೆ ಹಾಗೂ ಗ್ರಾಹಕರ ಸೇವೆಗಳನ್ನು ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಐಬಿಎಂ ಕಂಪನಿಯೊಂದಿಗೆ 10 ವರ್ಷದ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.

   ಐಬಿಎಂನ ಹೈಬ್ರಿಡ್ ಕ್ಲೌಡ್ ಸಾಧ್ಯತೆಗಳು, ರೆಡ್ ಹಾಟ್ ಆಟೊಮೇಷನ್ ಹಾಗೂ ಕಿಂಡ್ರಿಲ್ ತಂತ್ರಜ್ಞಾನವು ವಿಮಾನ ನಿಲ್ದಾಣದ ಮೂಲಸೌಕರ್ಯ ನಿರ್ವಹಣೆ ಸೇವೆಗಳನ್ನು ಉತ್ತಮಪಡಿಸಲು ನೆರವಾಗಲಿದೆ.

   ಹಾಗೆಯೇ ಭವಿಷ್ಯದಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ನಿಭಾಯಿಸುವ ಹಾಗೂ ಕಾರ್ಯಾಚರಣೆಯಲ್ಲಿ ಹೊಂದಾಣಿಕೆ ತರುವ ನಿಟ್ಟಿನಲ್ಲಿ ತಂತ್ರಜ್ಞಾನದ ನೆರವು ನೀಡಲಿದೆ.

   ಕೆಐಎ ವಿಮಾನ ನಿಲ್ದಾಣವನ್ನು ಮತ್ತಷ್ಟು ಸ್ಮಾರ್ಟ್, ಡಿಜಿಟಲೈಜ್ ವಿಮಾನ ನಿಲ್ದಾಣವಾಗಿ ರೂಪಿಸಿರುವ ನಮ್ಮ ಪರಕಲ್ಪನೆ ಸಾಕಾರಗೊಳಿಸಲು ಐಬಿಎಂ ಜತೆಗಿನ ಪಾಲುದಾರಿಕೆ ಒಪ್ಪಂದ ಸಹಕಾರಿಯಾಗಲಿದೆ.

   ಈ ನಿಟ್ಟಿನಲ್ಲಿ ಬಿಐಎಎಲ್, ಐಬಿಎಂ ಪಾಲುದಾರಿಕೆಯಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಕೆಲಸ ಮಾಡಲು ಉತ್ಸುಕವಾಗಿದೆ ಎಂದು ಬಿಐಎಎಲ್ ಸಿಇಒ ಹರಿ ತಿಳಿಸಿದ್ದಾರೆ.

   ಮೂಲಸೌಕರ್ಯ ಸೇವೆಗಳ ವ್ಯವಹಾರ ವೃದ್ಧಿ, ವಿಮಾನ ನಿಲ್ದಾಣದಲ್ಲಿ ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡು ವಾಸ್ತುಶಿಲ್ಪ ವಿನ್ಯಾಸ ಹಾಗೂ ಅನುಷ್ಠಾನದಂತಹ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ಐಬಿಎಂ ತಿಳಿಸಿದೆ.

   English summary
   From April 2022, passengers flying out of Bengaluru will have to pay more for flight tickets since the Airports Economic Regulatory Authority (AERA) has allowed the Bangalore International Airport Ltd (BIAL) to increase the user development fee (UDF) for four years till March 2026.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X