Bengaluru Airport: ಪಿಕ್ ಅಪ್ ವಾಹನಗಳ ನಿಯಮ ಬದಲು, ಪಾಲಿಸದಿದ್ದರೆ ಡಿ.8ರಿಂದ ದಂಡ ಕಟ್ಟಲು ಸಜ್ಜಾಗಿ..
Bengaluru International Airport: ದೇಶದಲ್ಲೇ ಪ್ರತಿನಿತ್ಯ ಅತ್ಯಧಿಕ ಪ್ರಯಾಣಿಕರ ಸಂಚಾರ ದಾಖಲಿಸುವ ಮೂರನೇ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಪಿಕ್ ಅಪ್ ವಾಹನಗಳ ಸಮಯ, ಸಂಚಾರ ನಿಯಮಗಳಲ್ಲಿ ಒಂದಷ್ಟು ಬದಲಾವಣೆ ಆಗಿದೆ. ಈ ನಿಯಮ ಡಿಸೆಂಬರ್ 08ರಿಂದ ಜಾರಿಗೆ ಬರಲಿವೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಇಂತಹ ಕ್ರಮಕ್ಕೆ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ನಿರ್ಧರಿಸಿದೆ.
ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್ 1 ಮತ್ತು ಟರ್ಮಿನಲ್ 2 ಸೇರಿ ನಿತ್ಯ 1.30 ಲಕ್ಷಕ್ಕೂ ಅಧಿಕ ಮಂದಿ ಓಡಾಡುತ್ತಾರೆ. ನಿತ್ಯ ಸುಮಾರು ಒಂದು ಲಕ್ಷದಷ್ಟು ವಾಹನಗಳು ಏರ್‌ಪೋರ್ಟ್‌ಗೆ ಬರುತ್ತವೆ. ಇವುಗಳಿಂದ ಏರ್‌ಪೋರ್ಟ್ ಮುಂದೆ ಸಾಕಷ್ಟು ಟ್ರಾಪಿಕ್ ಉಂಟಾಗುತ್ತಿದೆ. ಪಿಕ್ ಅಪ್ ಮತ್ತು ಡ್ರಾಪ್ ಮಾಡಿದ ಮೇಲೆ ಅದೆಷ್ಟೊ ವಾಹನಗಳು ಸ್ಥಳದಲ್ಲೇ ನಿಂತಿರುತ್ತವೆ. ಇದೆಲ್ಲ ಗಮನಿಸಿ ದಟ್ಟಣೆಗೆ ಕಡಿವಾಣ ಹಾಕಲು ಬಿಐಎಎಲ್ ಮುಂದಾಗಿದೆ.

ಏನಿದು ಹೊಸ ನಿಯಮ, ದಂಡ ಹೇರಿಕೆ
ಏರ್‌ಪೋರ್ಟ್‌ಗೆ ಬರುವ ಖಾಸಗಿ ವಾಹನಗಳು (ಬಿಳಿ ಬೋರ್ಡ್) ಪಿಕ್ ಅಪ್ ಡ್ರಾಪ್‌ಗೆ ಮೊದಲ 08 ಎಂಟು ನಿಮಿಷ ಉಚಿತವಾಗಿರಲಿದೆ. ಇಷ್ಟು ಸಮಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಾನದಂಡಗಳಿಗೆ ಹೋಲಿಸಿದರೆ ಹೆಚ್ಚು ಎನ್ನಲಾಗಿದೆ. ಈ ನಿಗದಿತ ಸಮಯ ಮೀರಿದರೆ ದಂಡ ಅನ್ವಯವಾಗುತ್ತದೆ.
ಏರ್‌ಪೋರ್ಟ್ ಆವರಣದಲ್ಲಿ ಪಿಕ್ ಅಪ್ ಖಾಸಗಿ ವಾಹನಗಳೂ 18 ನಿಮಿಷಕ್ಕಿಂತ ಹೆಚ್ಚು ಸಮಯ ನಿಂತರೆ ವಾಹನ ಟೋಯಿಂಗ್ ಮಾಡಲಾಗುತ್ತದೆ. ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿದೆ. ಹಾಗಾದರೆ ಎಷ್ಟು ನಿಮಿಷ ನಿಲ್ಲಬಹುದು, ದಂಡ ಹೇರಿಕೆ ಪ್ರಮಾಣವೆಷ್ಟು?
ದಂಡ, ನಿಮಿಷಗಳ ಪಟ್ಟಿ
1. ಮೊದಲ 8 ವರೆಗೆ ಉಚಿತ ಪ್ರವೇಶ
2. 8 ನಿಮಿಷ ಮೇಲೆ 13 ನಿಮಿಷಗಳವರೆಗೆ ₹150 ದಂಡ
3. 13-18 ನಿಮಿಷಗಳಿಗೆ ₹300 ರೂಪಾಯಿ ದಂಡ
4. 18 ನಿಮಿಷಗಳ ನಂತರ ಎಳೆದುಕೊಂಡು ಹೋಗಬಹುದು
5. ವಾಣಿಜ್ಯ ವಾಹನಗಳಿಗೆ (ಟ್ಯಾಕ್ಸಿ) 10 ನಿಮಿಷಗಳು ಉಚಿತ ಪ್ರವೇಶ
@BLRAirport introduces charges for passengers pickup after 8 minutes for private vehicles
— Bangalore Aviation (@BLRAviation) December 2, 2025
₹150 for 8-13 mins
₹300/- for 13-18 mins.
After 18 minutes towed away
10 minutes free for taxis.
Terminal flows as per the pics below. pic.twitter.com/29LQNuPqbA
ಈ ನಿಯಮಗಳ ಮೂಲಕ ಅನಗತ್ಯವಾಗಿ ಹೆಚ್ಚು ಸಮಯದವರೆಗೆ ವಾಹನ ನಿಲ್ಲಿಸಿಕೊಂಡು ದಟ್ಟಣೆ ಮಾಡುವ, ತೊಂದರೆ ಉಂಟು ಮಾಡುವ ವಾಹನಗಳ ಮೇಲೆ ಈ ಕ್ರಮ ಜರುಗಿಸಲಾಗುತ್ತದೆ. ಇನ್ನೂ ಹಳದಿ ಬೋರ್ಡ್ ಹೊಂದಿರುವ ವಾಹನಗಳು/ಟ್ಯಾಕ್ಸಿಗಳು ಎಲ್ಲೆಂದರಲ್ಲಿ ನಿಲ್ಲದೇ ತಮಗಾಗಿ ಸೂಚಿಸಿರುವ ಜಾಗದಲ್ಲಿ ಪಾರ್ಕಿಂಗ್ ಮಾಡಿಕೊಂಡು ಕಾಯಬೇಕು. ದೇಶದಲ್ಲಿ ಅತ್ಯಧಿಕ ಹೆಚ್ಚಿನ ಪ್ರಮಾಣಿಕರು ಬಂದು ಹೋಗುವ ಏರ್‌ಪೋರ್ಟ್ ಇದಾಗಿದೆ. ಇಲ್ಲಿ ಶಿಸ್ತು ಕಾಯ್ದುಕೊಳ್ಳುವುದು, ಪ್ರಯಾಣಿಕರಿಗೆ ಸೂಕ್ತ ರಕ್ಷಣೆ, ದಟ್ಟಣೆಗೆ ಕಡಿವಾಣ ಹಾಕುವುದು ನಮ್ಮ ಜವಾಬ್ದಾರಿ ಆಗಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications