ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ '4 Star' ನೀಡಿದ ಯುಕೆ ಸಂಸ್ಥೆ- ಮಾನದಂಡವೇನು? ತಿಳಿಯಿರಿ
ಬೆಂಗಳೂರು, ಜುಲೈ 31: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಮೆಗೆ (ಕೆಐಎ) ಮತ್ತೊಂದು ಗರಿ ಸಿಕ್ಕಿದೆ. ಇಂಗ್ಲೆಂಡ್ (ಯುಕೆ) ಮೂಲದ ಏರ್‌ಲೈನ್ಸ್ ಹಾಗೂ ಏರ್‌ಪೋರ್ಟ್ ರಿವೀವ್ ಕಂಪನಿಯಾಗಿರುವ 'ಸ್ಕೈಟ್ರಾಕ್ಸ್' ಬೆಂಗಳೂರು ವಿಮಾನ ನಿಲ್ದಾಣವನ್ನು ಗುರುತಿಸಿ ಸ್ಟಾರ್‌ಗಳನ್ನು ನೀಡಿದೆ. ಬೆಂಗಳೂರು ಏರ್‌ಪೋರ್ಟ್‌ಗೆ 'ನಾಲ್ಕು ಸ್ಟಾರ್ ಪ್ರಾದೇಶಿಕ ವಿಮಾನ ನಿಲ್ದಾಣ' ಎಂದು ರೇಟಿಂಗ್ ನೀಡಿದೆ.
ಈ ನಿಲ್ದಾಣದಲ್ಲಿರುವ ಸೌಲಭ್ಯ, ಸೌಕರ್ಯ, ಶುಚಿತ್ವ, ಶಾಪಿಂಗ್, ಆಹಾರ, ಪಾನೀಯಗಳು, ಸಿಬ್ಬಂದಿ ಸೇವೆ ಮತ್ತು ಭದ್ರತೆಗಳನ್ನು ಆಧರಿಸಿ ಶ್ರೇಣಿಯನ್ನು ನೀಡಲಾಗಿದೆ ಎಂದು ಸ್ಕೈಟ್ರಾಕ್ಸ್ ಹೇಳಿದೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಬೆಂಗಳೂರು ಏರ್‌ಪೋರ್ಟ್ ಆಡಳಿತ ಮಂಡಳಿ, 'Skytrax ವತಿಯಿಂದ ಆಯೋಜಿಸಲ್ಪಟ್ಟ 2023 ರ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣಗಳ ವಿಭಾಗದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ 4 ಸ್ಟಾರ್ ನೀಡಿ ಪ್ರಮಾಣೀಕರಿಸಲ್ಪಟ್ಟಿದೆ' ಎಂದು ತಿಳಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ನೀಡಲಾಗುತ್ತಿರುವ ಸೌಲಭ್ಯ, ಸೌಕರ್ಯ, ಸ್ವಚ್ಛತೆ, ಮಾರಾಟ ಮಳಿಗೆಗಳು, ಆಹಾರ ಮತ್ತು ಪಾನೀಯಗಳು, ಸಿಬ್ಬಂದಿ ಸೇವೆ ಮತ್ತು ಭದ್ರತೆ/ವಲಸೆ ಸೇವೆಗಳಿಗಾಗಿ ನಮಗೆ ಈ ಪಟ್ಟ ದೊರೆತಿದೆ ಎಂದು ಹೇಳಿದೆ.
#BLRAirport is certified as a 4-Star Regional Airport for 2023 by Skytrax.
— BLR Airport (@BLRAirport) July 31, 2023
We’ve been rated for the facilities, comfort, cleanliness, shopping, food & beverages, staff service and security/immigration services offered at Kempegowda International Airport Bengaluru.#Skytrax2023 pic.twitter.com/FtJu5sJdCP
ಬೆಂಗಳೂರು ವಿಮಾನದ ಹೊರತಾಗಿ, ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಆಮ್‌ಸ್ಟರ್‌ಡ್ಯಾಮ್ ಏರ್‌ಪೋರ್ಟ್ ಶಿಪೋಲ್, ಅಂಕಾರಾ ಎಸೆನ್‌ಬೋಗಾ ವಿಮಾನ ನಿಲ್ದಾಣ ಮತ್ತು ಆಕ್ಲೆಂಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ನಾಲ್ಕು-ಸ್ಟಾರ್ ರೇಟಿಂಗ್ ಪಡೆದ ಇತರ ವಿಮಾನ ನಿಲ್ದಾಣಗಳಾಗಿವೆ.
'ಬೆಂಗಳೂರು ವಿಮಾನ ನಿಲ್ದಾಣವು ಟರ್ಮಿನಲ್ 1 ರಲ್ಲಿ ಉತ್ತಮ ಮತ್ತು ವೈವಿಧ್ಯಮಯ ಊಟದ ಆಯ್ಕೆಗಳಿವೆ. ಇದು ಆಕರ್ಷಕ ಗ್ರಾಹಕ ಅನುಭವವನ್ನು ನೀಡುತ್ತದೆ' ಎಂದು ಸ್ಕೈಟ್ರಾಕ್ಸ್ ಹೇಳಿದೆ.

'ಟರ್ಮಿನಲ್‌ನ ಡೊಮೆಸ್ಟಿಕ್ ಭಾಗವು ದಟ್ಟಣೆಯಿಂದ ಕೂಡಿದೆ. ಆದರೆ, ಇಂಟರ್‌ನ್ಯಾಷನಲ್ ಭಾಗದಲ್ಲಿ ತೀರಾ ದಟ್ಟಣೆ ಕಂಡುಬರುವುದಿಲ್ಲ' ಎಂದು ಸ್ಕೈಟ್ರಾಕ್ಸ್ ತಿಳಿಸಿದೆ.
ಟರ್ಮಿನಲ್ ಒನ್‌ನಲ್ಲಿ ಡೊಮೆಸ್ಟಿಕ್ ಫ್ಲೈಟ್‌ಗಳು ಅಷ್ಟೇ ಕಾರ್ಯ ನಿರ್ವಹಿಸಲಿವೆ. ಇಂಟರ್‌ನ್ಯಾಷನಲ್ ಫ್ಲೈಟ್‌ಗಳಿಗಾಗಿ ಟರ್ಮಿನಲ್ 2 ಅನ್ನು ನಿರ್ಮಿಸಲಾಗಿದೆ. ಇದು ಪ್ರಯಾಣಿಕರನ್ನು ಮತ್ತಷ್ಟು ಆಕರ್ಷಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾರ್ವಜನಿಕ ಸಾರಿಗೆ ಆಯ್ಕೆಗಳು, ಸಿಬ್ಬಂದಿ ಭಾಷಾ ಕೌಶಲಗಳು, ಕಾಯುವ ಸಮಯ, ಶೌಚಾಲಯಗಳ ಲಭ್ಯತೆ, ಆಹಾರ ಮತ್ತು ಪಾನೀಯಗಳ ಆಯ್ಕೆಯ ಮಾನದಂಡಗಳನ್ನು ಪರಿಗಣಿಸಲಾಗಿದೆ ಎಂದು ಯುಕೆ ಮೂಲದ ಕಂಪನಿ ಹೇಳಿದೆ.












Click it and Unblock the Notifications