Bengaluru Airport: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಜಗತ್ತಿನಲ್ಲೇ 3ನೇ ಸ್ಥಾನ-ಯಾವುದರಲ್ಲಿ ತಿಳಿಯಿರಿ

ಬೆಂಗಳೂರು, ಜನವರಿ, 03: ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಾಗ ಸುದ್ದಿಯಲ್ಲಿರುತ್ತದೆ. ಇತ್ತೀಚೆಗಷ್ಟೇ ಜಗತ್ತಿನ ಅತೀ ಸುಂದರ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಪಾತ್ರವಾಗಿದ್ದು, ಇದೀಗ ಮತ್ತೊಂದು ಗರಿ ಲಭಿಸಿದೆ. ಕಾರ್ಯಕ್ಷಮತೆಯಲ್ಲಿ ಜಗತ್ತಿನಲ್ಲೇ ನಂಬರ್‌ 3ನೇ ಸ್ಥಾನ ಪಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಯುನೇಸ್ಕೋದ 2023ರ ಪ್ರಿಕ್ಸ್ ವರ್ಸೇಲ್ಸ್‌ (Prix Versailles)ನ ಪ್ರತಿಷ್ಠಿತ ಪುರಸ್ಕಾರದೊಂದಿಗೆ ಗೌರವಿಸಲ್ಪಟ್ಟಿದೆ. ವಿಮಾನ ನಿಲ್ದಾಣದ ಟರ್ಮಿನಲ್ 2ಗೆ ಜಗತ್ತಿನ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. ಮತ್ತು ಒಳಾಂಗಣ ವಿನ್ಯಾಸ 2023ರ ವಿಶ್ವ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡಿದೆ.

Bengaluru Airport: Kempegowda International Airport ranks 3rd in world At terms of performance

ಕಾರ್ಯಾಚರಣೆಯಲ್ಲಿನ ನಿರ್ವಹಣಾ ಸಾಧನೆ ಮತ್ತು ಸಮಯ ಕ್ಷಮತೆ ವಿಷಯದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಜಾಗತಿಕ ಮಟ್ಟದಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ.

ಅಮೆರಿಕದ ಮಿನ್ನೆ ಪೊಲೀಸ್ ನಿಲ್ದಾಣ ಮೊದಲ ಸ್ಥಾನ ಪಡೆದಿದ್ರೆ, 2ನೇ ಸ್ಥಾನದಲ್ಲಿ ಹೈದ್ರಾಬಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಮೂರನೇ ಸ್ಥಾನವನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಪಡೆದುಕೊಂಡಿದೆ.

ಜನವರಿ 22ರಿಂದ ಬೆಂಗಳೂರು-ಮುಂಬೈ ಏರ್‌ಬಸ್‌ ಸೇವೆ

ಏರ್‌ ಇಂಡಿಯಾ ಕಂಪನಿಯು ಆಗಾಗ ಸಿಹಿಸುದ್ದಿಯನ್ನು ಕೊಡುತ್ತಲೇ ಬಂದಿದೆ. ಹಾಗೆಯೇ ಇದೀಗ ಈ ಕಂಪನಿಯ ಮೊದಲ ಏರ್‌ಬಸ್‌ ಎ350 ವಿಮಾನ ಸೇವೆ ಇದೇ ಜನವರಿ 22ರಿಂದ ಆರಂಭವಾಗಲಿದೆ. ಹಾಗಾದರೆ ಯಾವಲ್ಲ ಮಾರ್ಗಗಳಲ್ಲಿ ಈ ಹೊಸ ಸೇವೆ ಇರಲಿದೆ ಎಂದು ಇಲ್ಲಿ ತಿಳಿಯಿರಿ.

ಏರ್‌ಬಸ್‌ ಎ350 ವಿಮಾನ ಸೇವೆ ಇದೇ ಜನವರಿ 22ರಿಂದ ಬೆಂಗಳೂರು ಮತ್ತು ಮುಂಬೈ ನಡುವೆ ಆರಂಭ ಆಗಲಿದೆ. ಎ 350-900 ವಿಮಾನವು ಮೂರು ವರ್ಗದ ಕ್ಯಾಬಿನ್‌ ಹೊಂದಿದ್ದು, ಒಟ್ಟು 316 ಸೀಟುಗಳನ್ನು ಹೊಂದಿದೆ. 24 ಬ್ಯುಸಿನೆಸ್‌ ಕ್ಲಾಸ್‌, 24 ಪ್ರೀಮಿಯಂ ಎಕಾನಮಿ ಮತ್ತು 264 ಎಕಾನಮಿ ದರ್ಜೆಯ ಸೀಟುಗಳು ಈ ವಿಮಾನದಲ್ಲಿ ಇವೆ.

ದೇಶೀಯ ಮಾರ್ಗದಲ್ಲಿ ಏರ್‌ಬಸ್‌ನ ಪ್ರಥಮ ವಾಣಿಜ್ಯ ಸಂಚಾರ ಸೇವೆ ಆರಂಭಕ್ಕೆ ಸಿದ್ಧತೆ ಪೂರ್ಣವಾಗಿದೆ. ಹಾಗೂ ಎಲ್ಲಾ ಸಿಬ್ಬಂದಿಗೂ ಸೂಕ್ತ ತರಬೇತಿ ನೀಡಲಾಗಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ತಿಂಗಳ ಸೋಮವಾರ ಅಂದರೆ ಜನವರಿ 22ರಂದು ಏರ್‌ಬಸ್‌ನ ಪ್ರಯಾಣ ಸೇವೆಗೆ ಸಂಬಂಧಿಸಿದಂತೆ ಬುಕ್ಕಿಂಗ್‌ ಕೂಡ ಆರಂಭ ಆಗಲಿದೆ. ಫ್ರಾನ್ಸ್‌ನ ಏರ್‌ಬಸ್‌ ಕಂಪನಿ ನಿರ್ಮಿಸಿರುವ ಈ ವಿಮಾನವು ಡಿಸೆಂಬರ್‌ 23ರಂದು ನವದೆಹಲಿಯಲ್ಲಿ ಲ್ಯಾಂಡ್‌ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+