ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸಿಡ್ ದಾಳಿ ಪ್ರಕರಣ: ಆರೋಪಿ ನಾಗೇಶ್ ಕಾಲಿಗೆ ಗುಂಡೇಟು

|
Google Oneindia Kannada News

ಬೆಂಗಳೂರು,ಮೇ 14: ಬೆಂಗಳೂರಿನಲ್ಲಿ ಯುವತಿ ಮೇಲೆ ಆಸಿಡ್ ದಾಳಿ ಮಾಡಿದ್ದ ಆರೋಪಿ ನಾಗೇಶ್ ಬಾಬು ಅಲಿಯಾಸ್ ನಾಗೇಶ್ ಬಲಗಾಲಿಗೆ ಕಾಮಾಕ್ಷಿ ಪಾಳ್ಯ ಪೊಲೀಸರು ಗುಂಡು ಹೊಡೆದಿದ್ದಾರೆ.

ತಮಿಳುನಾಡಿನ ತಿರುಣ್ಣಾಮಲೈನಿಂದ ಕರೆದುಕೊಂಡು ಬರುವ ವೇಳೆ ಕೆಂಗೇರಿ ಬಳಿಯ ತೂಗು ಸೇತುವೆ ಬಳಿ ಆರೋಪಿ ಕಾಲಿಗೆ ಗುಂಡು ನುಗ್ಗಿಸಿ ಬಂಧಿಸಲಾಗಿದೆ.
ನಾಗೇಶ್ ಬಾಬು ಅಲಿಯಾಸ್ ನಾಗೇಶ್ ನನ್ನು ತಿರುವಣ್ಣಾಮಲೈನಲ್ಲಿ ಬಂಧಿಸಿ ಕರೆತರಲಾಗುತ್ತಿತ್ತು. ತಮಿಳುನಾಡಿನ ತಿರುವಣ್ಣಾಮಲೈಗೆ ಬರಲು ಸಾಕಷ್ಟು ಸಮಯ ಹಿಡಿದಿತ್ತು. ಈ ವೇಳೆ ಮೂತ್ರ ವಿಸರ್ಜನೆಗೆ ನಿಲ್ಲಿಸುವಂತೆ ಪೊಲೀಸರ ಬಳಿ ನಾಗೇಶ್ ಕೇಳಿಕೊಂಡಿದ್ದ. ಆತನ ಬೇಡಿಕೆಗೆ ಸೊಪ್ಪು ಹಾಕದೇ ಸಾಕಷ್ಟು ದೂರು ಪೊಲೀಸರು ಪ್ರಯಾಣಿಸಿದ್ದರು.

Bengaluru acid attack accused gets shot on leg during attempt to escape

ಕೊನೆಗೆ ಕೆಂಗೇರಿ ಬಳಿಯ ತೂಗು ಸೇತುವೆ ಸಮೀಪದಲ್ಲಿ ಆರೋಪಿಯನ್ನು ಮೂತ್ರವಿಸರ್ಜನೆಗೆ ನಿಲ್ಲಿಸಲಾಯ್ತು.

ಕಾನ್ಸ್ ಟೇಬಲ್ ಮಹದೇವಯ್ಯ ಗೆ ಕಲ್ಲೇಟು..!

ಕಾನ್ಸ್ ಟೇಬಲ್ ಮಹದೇವಯ್ಯ ಗೆ ಕಲ್ಲೇಟು..!

ನಾಗೇಶ್ ಬಾಬು ಅಲಿಯಾಸ್ ನಾಗೇಶ್ ನನ್ನು ತಿರುವಣ್ಣಾಮಲೈನಲ್ಲಿ ಬಂಧಿಸಿ ಕರೆತರಲಾಗುತ್ತಿತ್ತು. ತಮಿಳುನಾಡಿನ ತಿರುವಣ್ಣಾಮಲೈಗೆ ಬರಲು ಸಾಕಷ್ಟು ಸಮಯ ಹಿಡಿದಿತ್ತು. ಈ ವೇಳೆ ಮೂತ್ರವಿಸರ್ಜನೆಗೆ ನಿಲ್ಲಿಸುವಂತೆ ಪೊಲೀಸರ ಬಳಿ ನಾಗೇಶ್ ಕೇಳಿಕೊಂಡಿದ್ದ. ಆತನ ಬೇಡಿಕೆಗೆ ಸೊಪ್ಪು ಹಾಕದೇ ಸಾಕಷ್ಟು ದೂರು ಪೊಲೀಸರು ಪ್ರಯಾಣಿಸಿದ್ದರು. ಕೊನೆಗೆ ಕೆಂಗೇರಿ ಬಳಿಯ ತೂಗು ಸೇತುವೆ ಸಮೀಪದಲ್ಲಿ ಆರೋಪಿಯನ್ನು ಮೂತ್ರವಿಸರ್ಜನೆಗೆ ನಿಲ್ಲಿಸಲಾಯ್ತು. ನಾಗೇಶ್ ಮೂತ್ರ ವಿಸರ್ಜನೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ನಾಗೇಶ್ ತಪ್ಪಿಸಿಕೊಳ್ಳುವ ಸಲುವಾಗಿ ಕಾನ್ಸ್ ಟೇಬಲ್ ಮಹದೇವಯ್ಯ ಮೇಲೆ ಕಲ್ಲು ತೂರಿದ್ದಾನೆ. ಮಹದೇವಯ್ಯ ಕೈಗೆ ಗಾಯವಾಗುತ್ತಿದ್ದಂತೆ ಎಚ್ಚೆತ್ತ ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್ ಪ್ರಶಾಂತ್ ಶರಣಾಗುವಂತೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ನಾಗೇಶ್ ಆಟೋಟೋಪ ಮುಂದುವರೆದ ಹಿನ್ನೆಲೆ ನಾಗೇಶ್ ನ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಗಾಯಾಳು ಆರೋಪಿ ನಾಗೇಶ್ ಮತ್ತು‌ ಕಾನ್ಸ್ ಟೇಬಲ್ ಮಹದೇಯ್ಯನವರನ್ನು ಆರ್ ಆರ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

ರಮಣಾಶ್ರಮದಲ್ಲಿ ಸ್ವಾಮೀಜಿ ವೇಷ ಧರಿಸಿದ್ದ ನಾಗೇಶ್

ರಮಣಾಶ್ರಮದಲ್ಲಿ ಸ್ವಾಮೀಜಿ ವೇಷ ಧರಿಸಿದ್ದ ನಾಗೇಶ್

ಬೆಂಗಳೂರಿನ ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಟ್ ಬಳಿಯಲ್ಲಿ ಏಪ್ರಿಲ್ 28 ರಂದು ನಾಗೇಶ್ ಯುವತಿಯ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದ. ಕಾಮಾಕ್ಷಿ ಪಾಳ್ಯ ಪೊಲೀಸ್ರು ವಿವಿಧ ತಂಡಗಳನ್ನು ರಚಿಸಿ ದೇವಸ್ಥಾನ , ಲಾಡ್ಜ್ ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ಹುಡುಕಾಟ ನಡೆಸಿದ್ದರು. ನಾಗೇಶ್ ನನ್ನು ಎಷ್ಟೇ ಹುಡುಕಿದರು ಸಿಗದ ಹಿನ್ನೆಲೆ ಆತನ ಭಾವಚಿತ್ರ, ಬಿತ್ತಿ ಚಿತ್ರ ಮುದ್ರಿಸಿ ಹಂಚಲಾಗಿತ್ತು. ನಾಗೇಶ್ ಬಂಧನಕ್ಕಾಗಿ ಲುಕ್ ಔಟ್ ನೋಟೀಸ್ ಸಹ ಕಾಮಾಕ್ಷಿ ಪಾಳ್ಯ ಪೊಲೀಸರು ಬಿಡುಗಡೆ ಮಾಡಿದ್ದರು. ಪೊಲೀಸರಿಗೆ ನಿನ್ನೆ ಆರೋಪಿ ನಾಗೇಶ್ ಖಾವಿ ತೊಟ್ಟು ಸ್ವಾಮೀಜಿ ವೇಷದಲ್ಲಿದ್ದಾನೆ ಅನ್ನೋ ಮಾಹಿತಿ ಸಿಕ್ಕಿತ್ತು. ಸ್ವಾಮೀಜಿಯ ಮಾಹಿತಿ ಸಿಕ್ಕ ಕೂಡಲೇ ಅಲರ್ಟ್ ಆಗಿದ್ದ ಪೊಲೀಸರು ತಿರುವಣ್ಣಾಮೈಲೈನ ರಮಣಾಶ್ರಮಕ್ಕೆ ತೆರಳಿದ್ದರು ಧ್ಯಾನಸ್ಥ ಭಂಗಿಯಲ್ಲಿದ್ದ ನಾಗೇಶ್ ನ ಫೋಟೋ ಕ್ಲಿಕ್ಕಿಸಿ ಆತನೇ ಆರೋಪಿ ಎಂಬುದನ್ನು ಖಚಿತ ಪಡಿಸಿಕೊಂಡರು ಆ ಬಳಿಕ ನಾಗೇಶ್ ಬಂಧನಕ್ಕೆ ಮುಂದಾದ ಪೊಲೀಸರು. ನಾಗೇಶ್ ಗೆ ಬಂದಿರೋದು ಕರ್ನಾಟಕ ಪೊಲೀಸ್ ಅನ್ನೋದು ತಿಳಿಯುತ್ತಿದ್ದಂತೆ ಎಸ್ಕೆಪ್ ಆಗಲು ಯತ್ನಿಸಿದ್ದ ಈ ವೇಳೆ ಪೊಲೀಸರು ಸುತ್ತುವರೆದು ನಾಗೇಶ್ ನನ್ನು ಬಂಧಿಸಿದ್ದರು.

ತಮಿಳು ಬಲ್ಲವನಾಗಿದ್ರಿಂದ ಆಶ್ರಮದ ಭಕ್ತನಂತೆ ನಟನೆ

ತಮಿಳು ಬಲ್ಲವನಾಗಿದ್ರಿಂದ ಆಶ್ರಮದ ಭಕ್ತನಂತೆ ನಟನೆ

ಯುವತಿ ಮೇಲೆ ಆಸಿಡ್ ದಾಳಿ ಮಾಡಿದ ನಾಗೇಶ್ ಮೂಲತಃ ತಮಿಳುನಾಡಿನವನು. ತಮಿಳುನಾಡಿನ ಗಡಿಭಾಗಕ್ಕೆ ಹೊಂದಿಕೊಂಡಿದ್ದ ಕೊಡಂಪಟ್ಟಿ ಎಂಬ ಗ್ರಾಮದವನಾಗಿದ್ದರಿಂದ ತಮಿಳು ಸುಲಲಿತವಾಗಿ ಮಾತನಾಡುತ್ತಿದ್ದ. ರಮಣಾಶ್ರಮಕ್ಕೆ ಹೋಗಿ ತಾನು ಆಶ್ರನದ ಪರಮಭಕ್ತ ಎಂದು ತನ್ನನ್ನು ತಾನು ಬಿಂಬಿಸಿಕೊಂಡಿದ್ದ. ಸ್ವಾಮೀಜಿ ವೇಷ ತೊಟ್ಟು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ನಟಿಸಿದ್ದ ನಾಗೇಶ್

Recommended Video

Virat Kohli ಪಂದ್ಯ ಮುಗಿದಾಗ ಕಂಡುಬಂದಿದ್ದು ಹೀಗೆ | Oneindia Kannada
ಕರ್ನಾಟಕ ಬಾರ್ಡರ್ ದಾಟುತ್ತಿದ್ದಂತೆ ಕ್ಲಿನಿಕ್ ನಲ್ಲಿ ಚಿಕಿತ್ಸೆ

ಕರ್ನಾಟಕ ಬಾರ್ಡರ್ ದಾಟುತ್ತಿದ್ದಂತೆ ಕ್ಲಿನಿಕ್ ನಲ್ಲಿ ಚಿಕಿತ್ಸೆ

ಆಸಿಡ್ ನಾಗನ ಪತ್ತೆಗೆ ಕಾಮಾಕ್ಷಿಪಾಳ್ಯ ಪೊಲೀಸರು ತೀವ್ರ ಶೋಧವನ್ನು ನಡೆಸುತ್ತಿದ್ದರು. ಆಸಿಡ್ವದಾಳಿಯನ್ನು ಮಾಡಿದ್ದ ನಾಗೇಶ್ ಕೈಗೆ ಕೂಡ ಗಾಯವಾಗಿತ್ತು. ಹೊಸಕೋಟೆ ಟೋಲ್ ಬಳಿ ತನ್ನ ಮೊಬೈಲ್ ಎಸೆದು ಹೋಗಿದ್ದ. ಕರ್ನಾಟಕ ಬಾರ್ಡರ್ ದಾಟುತ್ತಿದ್ದಂತೆ ಕ್ಲಿನಿಕ್ ಗೆ ಭೇಟಿಕೊಟ್ಟು ಗಾಯಕ್ಕೆ ಇಂಜೆಕ್ಷನ್ ಮತ್ತು ಔಷಧವನ್ನು ಪಡೆದಿದ್ದ. ಮೊಬೈಲ್ ಬಳಸುತ್ತಿರಲಿಲ್ಲ, ಎಟಿಎಂ ಬಳಕೆ ಮಾಡಿರಲಿಲ್ಲ, ಯಾವುದೇ ಬಂಧುಮಿತ್ರರನ್ನು ಸಹ ಭೇಟಿಯಾಗಿರಲಿಲ್ಲ. ಇದರಿಂದ ಪೊಲೀಸರಿಗೆ ನಾಗೇಶ್ ಹುಡುಕಾಟ ಕಷ್ಟವಾಗಿತ್ತು. ನಾಗೇಶ್ ಬಗ್ಗೆ ಎಲ್ಲಾ ರಾಜ್ಯದ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಾಗೇಶ್ ನ ಕೈಗೆ ಆಗಿದ್ದ ಗಾಯ ಪೊಲೀಸರಿಗೆ ಆತನ ಬಂಧನಕ್ಕೆ ಸುಳಿವು ನೀಡುತ್ತು. ಇನ್ನು ನಾಗೇಶ್ ತಲೆಮರೆಸಿಕೊಂಡು 16 ದಿನಗಳ ಬಳಿಕ‌ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

English summary
Bengaluru acid attack accused Nagesh gets shot on leg during attempt to escape while bringing him to Bengaluru from Tiruvannamalai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X