ಬಿಎಂಟಿಸಿ ಬಸ್‌ಗೆ ಬಿಯರ್ ಬಾಟಲಿ ಎಸೆದ ಕಿಡಿಗೇಡಿಗಳು, ಯುವತಿಗೆ ಗಾಯ
ಬೆಂಗಳೂರು, ಮೇ 3: ಬಿಎಂಟಿಸಿ ಬಸ್ ಬನ್ನೇರುಘಟ್ಟ ರಸ್ತೆಯಲ್ಲಿ ಚಲಿಸುತ್ತಿರುವಾಗ ಬೈಕಿನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಬಸ್ ಒಳಗೆ ಬಿಯರ್ ಬಾಟಲಿ ಎಸೆದ ಪರಿಣಾಮ, ಯುವತಿ ಗಾಯಗೊಂಡಿರುವ ಘಟನೆ ನಡೆದಿದೆ.
ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರು ಕಿಟಕಿ ಒಳಗೆ ಬಿಯರ್ ಬಾಟಲಿ ಎಸೆದಿದ್ದಾರೆ, ಬಾಟಲಿ ಒಳಗೆ ಬರುತ್ತಿದ್ದಂತೆ ಚೂರು ಚೂರಾಗಿದೆ. ಆ ಚೂರು ಹಿಂದಿನ ಸೀಟಿನಲ್ಲಿ ಕೂಳಿತಿದ್ದ ಯುವತಿ ಮೇಲ್ದುಟಿ, ಕಣ್ಣಿನ ಭಾಗವನ್ನು ಸೀಳಿದೆ.
ತಕ್ಷಣವೇ ಬಸ್ ನಿಲ್ಲಿಸಿ, ಆ ಯುವಕರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಬಸ್‌ನಲ್ಲಿ ನರ್ಸ್ ಒಬ್ಬರು ಇದ್ದ ಕಾರಣ ಯುವತಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ದೊರೆಯಿತು. ಈಗ ಚೇತರಿಸಿಕೊಳ್ಳುತ್ತಿದ್ದಾರೆ.

ಪೊಲೀಸರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ದೂರು ದಾಖಲಿಸಿಕೊಂಡಿದ್ದಾರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಈ ಘಟನೆಯು ವೆಗಾ ಸಿಟಿ ಮಾಲ್‌ನಿಂದ ಗೋಪಾಲನ್ ಇನ್ನೋವೇಷನ್ ಮಾಲ್ ಗೆ ಬರುವ ಜಯದೇವ ಫ್ಲೈಓವರ್ ಮೇಲೆ ನಡೆದಿದೆ.












Click it and Unblock the Notifications