• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಂಗಶಂಕರದಲ್ಲಿ ಮತ್ತೊಮ್ಮೆ ಬೀದಿಯೊಳಗೊಂದು ಮನೆಯ ಮಾಡಿ

|

ಬೆಂಗಳೂರು, ಮೇ 16: ಮರಾಠಿ ನಾಟಕ "ಉಣೇ ಪುರೇ ಶಹರ್ ಏಕ್ " ನಾಟಕ ಖ್ಯಾತಿಯ ಮೋಹಿತ್ ಟಾಕಲ್ಕರ್ ನಿರ್ದೇಶನದ ಕನ್ನಡ ನಾಟಕ ಬೀದಿಯೊಳಗೊಂದು ಮನೆಯ ಮಾಡಿ ರಂಗಶಂಕರದಲ್ಲಿ ಮತ್ತೊಮ್ಮೆ ಪ್ರದರ್ಶನಗೊಳ್ಳಲಿದೆ.

ವಿಕೃತಗೊಳ್ಳುತ್ತಿರುವ, ಭಕ್ತಿಯನ್ನು ಕಳಚಿ ಢಾಂಬಿಕತೆಯ ಮೆರುಗು ಪಡೆಯುತ್ತಿರುವ ಧಾರ್ಮಿಕ ಉತ್ಸವಗಳನ್ನು ವ್ಯಂಗ್ಯ ಮತ್ತು ತಮಾಷೆಯಿಂದ ನೋಡುತ್ತಾ, ಜೊತೆಯಲ್ಲೇ ಸಾಂಪ್ರಾದಾಯಿಕ ಆಚರಣೆಗಳನ್ನು ವಿಡಂಬಿಸುವ ನಾಟಕ 'ಬೀದಿಯೊಳಗೊಂದು ಮನೆಯ ಮಾಡಿ...'

ಗಣೇಶ ವಿಸರ್ಜನೆಯ ದಿನ ಪುಣೆಯ ನಟ್ಟನಡುವಿನ ಬೀದಿಯೊಂದರಲ್ಲಿ ಮಧ್ಯಮವರ್ಗದ ಮಹಾರಾಷ್ಟ್ರದ ಬ್ರಾಹ್ಮಣ ಸಂಸಾರಗಳ ನಡುವೆ ಮನೆ ಮಾಡಿರುವ ಒಂದು ಪುಟ್ಟ ಸಂಸಾರದ ಕತೆಯಿದು.

ಮನೆಯೊಡೆಯ ಶ್ರೀಪಾದ ಮತ್ತು ಅವನ ಹೆಂಡತಿ ಸುಕನ್ಯ ಒಂದು ಒಪ್ಪಂದಕ್ಕೆ ಬಂದಿದ್ದಾರೆ - ಎರಡು ವರ್ಷಕ್ಕೊಂದು ಸಲವಾದರೂ ತಮ್ಮ ಮನೆಯ ಸ್ವಾಸ್ಥ್ಯ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು, ಕೆಳಗಿನ ಬೀದಿಯ ಮೆರವಣಿಗೆಯ ಬೆಳಕಿರಲಿ, ಒಂದಿನಿತು ಸದ್ದೂ ಮನೆ ಹೊಕ್ಕದಂತೆ ಕಿಟಿಕಿ-ಬಾಗಿಲು ಹಾಕಿ ರಾತ್ರಿಯನ್ನು ಕಳೆಯಲು, ಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದಾರೆ.

ದಾವಣಗೆರೆಯಿಂದ ಶ್ರೀಪಾದನ ದೊಡ್ಡಮ್ಮ ಬರುವವರೆಗೂ, ಸುಕನ್ಯಳ ಸಣ್ಣಪುಟ್ಟ ತಗಾದೆಗಳ ನಡುವೆಯೂ ಒಂದಷ್ಟು ಹೊತ್ತು ಎಲಾ ಅಂದುಕೊಂಡಂತೇ ನಡೆಯುತ್ತದೆ. ಇದ್ದಕ್ಕಿದ್ದಂತೇ ಬಂದಿಳಿಯುವ ದೊಡ್ಡಮ್ಮನ ಒಂದೇ ಆಸೆ, ಈ ಮನೆಯ ಬಾಲ್ಕನಿಯಿಂದ ಗಣಪತಿ ವಿಸರ್ಜನೆಯ ಮೆರವಣಿಗೆಯನ್ನು ನೋಡುವುದು.

ದೊಡ್ಡಮ್ಮನ ಆಸೆ ಮತ್ತು ಶ್ರೀಪಾದನ ಹಟ ನಾಟಕದ ಅನೇಕ ಹಾಸ್ಯ ಘಟನೆಗಳಿಗೆ, ಗಂಭೀರ ಚರ್ಚೆಗಳಿಗೆ ಕಾರಣವಾಗುತ್ತದೆ. ದೊಡ್ಡಮ್ಮನ ಎಲ್ಲಾ ಸಂಚುಗಳು ವಿಫಲವಾಗುತ್ತಾ ಹೋದಂತೆ ನಾಟಕ ಗಾಢವಾಗುತ್ತಾ ಹೋಗುತ್ತದೆ. ಧರ್ಮ, ವಿಚಾರಗಳ ಸಂಘರ್ಷ ಹೆಚ್ಚುತ್ತಾ ಹೋದಂತೆ, ಮಧ್ಯಮವರ್ಗದ ಸಾಂಸಾರಿಕ

ರಾಜಕೀಯವನ್ನೂ ನಾಟಕ ಬಿಡಿಸುತ್ತಾ ಹೋಗುತ್ತದೆ.

ಮರಾಠಿ ಮೂಲ ಢೋಲ್ ತಾಷೆ : ರಚನೆ : ಚಂ ಪ್ರ ದೇಶಪಾಂಡೆ

ಕನ್ನಡಕ್ಕೆ : ಶ್ರೀಪತಿ ಮಂಜನಬೈಲ್, ಸುರೇಂದ್ರನಾಥ್

ನಿರ್ದೇಶನ : ಮೋಹಿತ್ ಟಾಕಲ್ಕರ್

ಕನ್ನಡ | 90 ನಿಮಿಷ,

ದಿನಾಂಕ, ಸಮಯ: ಮೇ 19, ಮಧ್ಯಾಹ್ನ 3:30 ಮತ್ತು ಸಂಜೆ 7:30

ರಂಗ ಶಂಕರ, ಜೆಪಿ ನಗರ, ಬೆಂಗಳೂರು | ಟಿಕೆಟ್ ದರ 150/- ,

ಟಿಕೆಟ್‍ಗಳು ರಂಗ ಶಂಕರದಲ್ಲಿ ದೊರೆಯುತ್ತವೆ.

English summary
'Beediyolagondu Maneya Maadi’ in a satirical and a humorous vein comments on the degenerating nature of religious festivals and disproves traditional dogma in a realistic setting. Play will be staged at Ranga Shankara, Bengaluru on May 19, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X