ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎ ಆನ್‌ಲೈನ್‌ ಆಸ್ತಿ ತೆರಿಗೆ ಸೇವೆಗೆ ಉತ್ತಮ ಸ್ಪಂದನೆ

By Nayana
|
Google Oneindia Kannada News

ಬೆಂಗಳೂರು, ಜೂನ್ 15: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿಸಲು ಅವಕಾಶ ಕಲ್ಪಿಸಿತ್ತು. ಅದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಮೇ ಮೊದಲ ವಾರದಲ್ಲಿ ಆನ್‌ಲೈನ್ ಸೇವೆ ಸೌಲಭ್ಯಕ್ಕೆ ಚಾಲನೆ ನೀಡಲಾಗಿತ್ತು. ಈವರೆಗೆ 5,835 ಮಂದಿ ತಮ್ಮ ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿಸಿದ್ದಾರೆ. ಇದರಿಂದ ಈವರೆಗೆ 2.20 ಕೋಟಿ ರೂ. ಆದಾಯ ಸಂದಾಯವಾಗಿದೆ. ಈವರೆಗೆ ಇವರೆಲ್ಲರೂ ಪ್ರಾಧಿಕಾರದ ಕಚೇರಿಗೆ ಆಗಮಿಸಿ ಹಣ ಜಮೆ ಮಾಡುತ್ತಿದ್ದರು.

ತೆರಿಗೆ ಪಾವತಿಗೆ ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದ ಬಿಡಿಎತೆರಿಗೆ ಪಾವತಿಗೆ ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದ ಬಿಡಿಎ

ಬಿಡಿಎ ಸೈಟ್, ಫ್ಲ್ಯಾಟ್ ಗಳನ್ನು ಪಡೆದವರು ಸಾವಿರಾರು ಮಂದಿ ಇದ್ದರೂ, ಅಷ್ಟೂ ಮಂದಿ ಪ್ರತಿ ವರ್ಷವೂ ಆಸ್ತಿ ತೆರಿಗೆಯನ್ನು ನಿಯಮಿತವಾಗಿ ಪಾವತಿಸುತ್ತಿಲ್ಲ. ಪ್ರಾಧಿಕಾರ ಕೂಡ ಆಯಾ ಸ್ವತ್ತುದಾರರಿಗೆ ತೆರಿಗೆ ಪಾವತಿಯ ನೆನಪೋಲೆ ಕಳುಹಿಸಲು ವ್ಯವಸ್ಥೆ ಹೊಂದಿಲ್ಲ. ಇದರಿಂದ ಬಿಡಿಎ ನಷ್ಟ ಅನುಭವಿಸುತ್ತಿದ್ದರೆಮ, ಸ್ವತ್ತುದಾರ ಕೂಡ ಆಸ್ತಿ ಸಂಬಂಧಿತ ದಾಖಲಾತಿ ಹೊಂದಲು ಸಮಸ್ಯೆ ಎದುರಿಸುವಂತಾಗಿದೆ.

BDA recieves good response for online tax

ಆಸ್ತಿ ತೆರಿಗೆ ಪಾವತಿಸಲು ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗಿತ್ತು. ಶುಲ್ಕ ಸಂದಾಯಕ್ಕೆ ಕ್ಯೂ ನಿಂತರೂ ಚಲನ್ ನೀಡದೆ ಸಯಾತಿಸಲಾಗುತ್ತದೆ. ಉದ್ಯೋಗಸ್ಥರು ಮಧ್ಯಾಹ್ನದ ಬಳಿಕ ಚಲನ್ ಪಡೆದುಕೊಂಡರೂ, ಶುಲ್ಕವನ್ನು ಬ್ಯಾಂಕ್ ಗೆ ಜಮೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಕೇಂದ್ರ ಕಚೇರಿ ಹಾಗೂ ನಾಲ್ಕು ವಲಯ ಕಚೇರಿಯಲ್ಲಿ ಮಾತ್ರ ತೆರಿಗೆ ಪಾವತಿಗೆ ಅವಕಾಶವಿರುವ ಕಾರಣ ಜನ ಪ್ರಯಾಣದ ಹಣ ಹಾಗೂ ಸಮಯ ವ್ಯವಾಗುತ್ತಿತ್ತು. ಆದರೆ ಆನ್‌ಲೈನ್‌ ವ್ಯವಸ್ಥೆಯಿಂದಾಗಿ ಕಷ್ಟಗಳು ದೂರವಾಗಿದೆ.

ಬಿಡಿಎ ವೆಬ್‌ಸೈಟ್ www.bdabangalore.org ಅಥವಾ https://propertytax.bdabangalore.org ನಲ್ಲಿ ಸ್ವತ್ತುದಾರರು ತಮ್ಮ ಆಸ್ತಿಗೆ ಸಂಬಂಧಿಸಿದ ತೆರಿಗೆ ಪಾವತಿಸಲು ಆನ್‌ಲೈನ್‌ನಲ್ಲಿ ತಮ್ಮ ಖಾತೆ ನೋಂದಾಯಿಸಿಕೊಳ್ಳಬೇಕು.

English summary
Bengaluru development authority has recieved good response from general public for online tax filling scheme which was introduced in the month of May. In a month more than five thousand persons have paid Rs.2.20 crores as tax through online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X