ಬೆಂಗಳೂರು: ಈ ಬಡಾವಣೆಯಲ್ಲಿ ಮನೆ ನಿರ್ಮಿಸುವವರಿಗೆ 'ಬಿಡಿಎ' ದಿಂದ ತಾತ್ಕಾಲಿಕ ವ್ಯವಸ್ಥೆ

ಬೆಂಗಳೂರು, ಡಿಸೆಂಬರ್ 24: ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ಭೂಸ್ವಾಧೀನ ಪ್ರಕ್ರಿಯೆ ನ್ಯಾಯಾಲಯದಲ್ಲಿದೆ. ಮಾಲೀಕರು ದಾವೆ ಹೂಡಿಕೊಂಡಿದ್ದಾರೆ. ಅದು ಬಿಟ್ಟು ಈ ಬಡಾವಣೆಯಲ್ಲಿರುವ ಇತರ ಪ್ರದೇಶಗಳ ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಅಗತ್ಯ ತಾತ್ಕಾಲಿಕ ವ್ಯವಸ್ಥೆ ಮಾಡಲು ಬದ್ಧ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಸದಸ್ಯ ಶಾಂತ ರಾಜಣ್ಣ ತಿಳಿಸಿದ್ದಾರೆ.

ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನದಾರರಿಗೆ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಭೂವ್ಯಾಜ್ಯದಿಂದ ಪ್ರಾಧಿಕಾರಕ್ಕೆ ಲಭ್ಯವಿದ್ದ ಪ್ರದೇಶದಲ್ಲಿ ರಚಿಸಿರುವ ಪ್ರದೇಶವು ಚದುರಿದ ಪ್ರದೇಶವಾಗಿದೆ. ಹೀಗಾಗಿ ಇಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಮಾರ್ಗಗಳಲ್ಲಿ ನಿರಂತರತೆ ಇಲ್ಲದಾಗಿದೆ. ಆದರೆ ಬೇಕಾದ ಹಾಗೂ ಇರುವ ಸೌಲಭ್ಯಗಳ ಮೂಲಕ ನಿರ್ದಿಷ್ಟ ನಿವೇಶನದಾರರಿಗೆ ಮನೆ ನಿರ್ಮಾಣಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದೆಂದು ಅವರ ತಿಳಿಸಿದ್ದಾರೆಂದು ಪ್ರಜಾವಾಣಿ ವರದಿ ಮಾಡಿದೆ.

BDA Ready to Temporarily Provide Infrastructure for Who Gpt Allotted Sites KempegowdaLayout

ಬಡಾವಣೆಯಲ್ಲಿ ಭೂಸ್ವಾಧೀನಕ್ಕೆ ಒಳಪಟ್ಟಿರುವ ಬಹುತೇಕ ಜಮೀನಿನ ಭೂಮಾಲೀಕರು ಕೋರ್ಟ್ ಮೊರೆ ಹೋಗಿದ್ದಾರೆ. ದಾವೆ ಹೂಡಿದ್ದಕ್ಕೆ ಅವರು ಹಲವು ಕಾರಣಗಳನ್ನು ತಿಳಿಸಿದ್ದಾರೆ. ದಾವೆ, ಪ್ರಕರಣಗಳ ಇತ್ಯರ್ಥಕ್ಕಾಗಿ ಬಿಡಿಎ ವಕೀಲರನ್ನು ನೇಮಕ ಮಾಡಿದೆ. ಎಲ್ಲ ಸಮಸ್ಯೆ ನಿವಾರಣೆ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಗತ್ಯ ಸಂಪನ್ಮೂಲ ಬಳಸಿ ಸಹಕಾರ

ಸದ್ಯ ಪ್ರಾಧಿಕಾರದ ವ್ಯಾಪ್ತಿಯ ಈ ಬಡಾವಣೆಯಲ್ಲಿ ಲಭ್ಯವಿದ್ದು, ಅಲ್ಲಿನ ನಿವೇಶನಗಳನ್ನು ನಿರ್ಮಿಸುವವರಿಗೆ ವ್ಯವಸ್ಥೆ ಮಾಡಲಾಗುವುದು. ಇಲ್ಲಿನ ಕೆಲವು ಬ್ಲಾಕ್‌ಗಳಲ್ಲಿ ಒಳಚರಂಡಿ ವ್ಯವಸ್ಥೆಯಡಿ ಬರುವ ಕೊಳಚೆ ನೀರನ್ನು ಈಗಾಗಲೇ ನಿರ್ಮಿಸಲಾದ ಸಂಸ್ಕರಣಾ ಘಟಕಗಳಿಗೆ ಸಂಪರ್ಕಿಸಲು ಕಷ್ಟಸಾಧ್ಯವಾಗಿದೆ. ಆದಾಗಿಯೂ ಲಭ್ಯ ಸಂಪನ್ಮೂಲ ಬಳಸಿ ನಿವೇಶನದಾರರಿಗೆ ಬೇಕಾದ ವ್ಯವಸ್ಥೆ ಮಾಡಲು ಬದ್ಧ ಎಂದು ಅವರು ಪುನರುಚ್ಚರಿಸಿದ್ದಾರೆ.

BDA Ready to Temporarily Provide Infrastructure for Who Gpt Allotted Sites KempegowdaLayout

ಬಡಾವಣೆಯಲ್ಲಿರುವ ಮೂಲಭೂತ ಸಮಸ್ಯೆಗಳ ಪ್ರದೇಶಗಳಲ್ಲಿ ಮನೆ ನಿರ್ಮಾಣ ಕೈಗೊಂಡವರಿಗೆ ಕುಡಿಯಲು ನೀರು ಹಾಗೂ ಒಳಚರಂಡಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ರನ್ನು ಸಂಪರ್ಕಿಸಿ ತಾತ್ಕಾಲಿಕ ವ್ಯವಸ್ಥೆ ಪಡೆಯಬಹುದು ಎಂದು ಹೇಳಿದರು.

ವಿದ್ಯುತ್ ಬೇಕಿದ್ದಲ್ಲ ಸಂಪರ್ಕಕ್ಕೆ ಅವಕಾಶ

ಇನ್ನಿತರ ಮೂಲಸೌಕರ್ಯ ನೋಡುವುದಾದರೆ ಬಡಾವಣೆಯಲ್ಲಿ ವಿದ್ಯುತ್ ಪೂರೈಕೆಗಾಗಿ ಈಗಾಗಲೇ ಭೂಗರ್ಭ ಕೇಬಲ್ ಅಳವಡಿಕೆ ಮಾಡಲಾಗಿದೆ. ಇಲ್ಲಿ ಅಪಾಯಕಾರಿ ವಿದ್ಯುತ್ ವ್ಯವಸ್ಥೆಗೆ/ಮಾರ್ಗಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಇದೆಲ್ಲವನ್ನು ಬೆಸ್ಕಾಂ ನೋಡಿಕೊಳ್ಳಲಿದೆ ಎಂದರು.

ಬಡಾವಣೆಯಲ್ಲಿ ಭೂಗರ್ಭ ಕೇಬಲ್‌ಗಳಿಗೆ ವಿದ್ಯುತ್ ಜಾಲದ ನಿರಂತರತೆ ಸಮಸ್ಯೆಯಿಂದ ಬಡಾವಣೆಯ ಎಲ್ಲ ನಿವೇಶನಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಇಲ್ಲಿ ಸದ್ಯ ಮನೆ ಕಟ್ಟಿಸುವವರಿಗೆ ವಿದ್ಯುತ್ ಬೇಕಿದ್ದಲ್ಲಿ ಪೂರೈಕೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು. ಮಾಲೀಕರು ವಿದ್ಯುತ್ ಸಂಪರ್ಕ ಪಡೆಯಬಹುದು ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+