ಬಿಡದಿವರೆಗೂ ಮೆಟ್ರೋ ಸಂಪರ್ಕ ಕಲ್ಪಿಸುವಂತೆ ಬಿಡಿಎ ಮನವಿ

ಬೆಂಗಳೂರು, ಜನವರಿ 2 : ಬಿಡದಿ, ಕೆಂಪೇಗೌಡ ಬಡಾವಣೆ ಇರುವ ಪ್ರದೇಶಗಳನ್ನು ಮೂರನೇ ಹಂತದ ಮೆಟ್ರೋ ಯೋಜನೆಯಲ್ಲಿ ಸೇರಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಬಿಡಿಎ ಪ್ರಸ್ತಾವನೆ ಸಲ್ಲಿಸಿದೆ.

ಪ್ರಸ್ತುತ ಆರ್.ವಿ. ಕಾಲೇಜು ವರೆಗೆ 2 ನೇ ಹಂತದ ಮೆಟ್ರೋ ಸಂಪರ್ಕವಿದೆ. ಇದರಿಂದ ವಲಗೇರಹಳ್ಳಿ ಭಾಗದಲ್ಲಿರುವ ಬಿಡಿಎ ಫ್ಲ್ಯಾಟ್ ಪಡೆದವರಿಗೆ ಹೆಚ್ಚು ಅನುಕೂಲವಾಗುತ್ತಿದೆ. ಅಲ್ಲದೆ ಮೆಟ್ರೋ ಸಂಪರ್ಕ ಇರುವ ಪ್ರದೇಶಗಳಲ್ಲಿ ಹೆಚ್ಚು ಬೇಡಿಕೆಯೂ ಇದೆ.

BDA proposes include Bidadi in Phase-3 Metro

ಕಣಿಮಿಣಿಕೆ, ಕೊಮ್ಮಘಟ್ಟದಲ್ಲಿಯೂ ಬಿಡಿಎ ವಿವಿಧ ಮಾದರಿಯ ವಸತಿ ಸಮುಚ್ಛಯಗಳನ್ನು ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸಂಚಾರ ಅನುಕೂಲತೆ ದೃಷ್ಟಿಯಿಂದ ಮೆಟ್ರೋ ಸಂಪರ್ಕ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಿದೆ.

ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆ ಭಾಗದಲ್ಲಿ ಬಿಡಿಎಯ ನಾಡಪ್ರಭು ಕೆಂಪೇಗೌಡ ಬಡಾವಣೆ ಸಿದ್ಧಗೊಳ್ಳುತ್ತಿರುವುದರಿಂದ ಮೂರನೇ ಹಂತದ ಯೋಜನೆಯಲ್ಲಿ ಈ ಭಾಗಗಳನ್ನು ಸಂಪರ್ಕಿಸುವಂತೆ ವಿನ್ಯಾಸ ಮಾಡಬೇಕೆಂದು ಮನವಿ ಮಾಡಿದೆ.

ಹೊಸೂರು ಭಾಗದ ಸರ್ಜಾಪುರ ರಸ್ತೆ ಭಾಗ, ದೊಡ್ಡನೆಕ್ಕುಂದಿ,ಕೋನದಾಸಪುರ ಭಾಗಗಳೂ ವಸತಿ ಪ್ರದೇಶಗಳಾಗಿ ಗುರುತಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಹಂತದ ಯೋಜನೆಗಳಿಗೆ ಈ ಭಾಗಗಳನ್ನು ಸೇರಿಸುವಂತೆ ಬಿಡಿಎ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+