ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ!

|
Google Oneindia Kannada News

ಬೆಂಗಳೂರು, ಜನವರಿ 16: ಸದಾ ವಾಹನಗಳಿಂದ ತುಂಬಿರುವ ಹೆಬ್ಬಾಳದ ರಿಂಗ್ ರಸ್ತೆ ಜಂಕ್ಷನ್ ಗೆ ಹೊಸ ಮೆರುಗು ನೀಡಲು ಬಿಡಿಎ ಹೊಸ ಯೋಜನೆಯೊಂದನ್ನು ರೂಪಿಸುತ್ತಿದೆ.

ಏರ್ ಪೋರ್ಟ್ ರಸ್ತೆ ಸಾಗುವ ಹಾದಿಯಲ್ಲೇ ಇರುವ ಹೆಬ್ಬಾಳ ಜಂಕ್ಷನ್ ವಾಹನ ದಟ್ಟಣೆಯ ಕುಖ್ಯಾತಿಗೆ ಒಳಗಾಗಿದೆ. ಇಲ್ಲಿನ ಮೂರು ಕಡೆ ವ್ಯಾಪಿಸಿರುವ ಖಾಲಿ ಜಾಗದಲ್ಲಿ ಕಿರು ಉದ್ಯಾನ ನಿರ್ಮಿಸಲಾಗುತ್ತಿದೆ. ನಾನಾ ಬಗೆಯ ಸಸ್ಯಗಳನ್ನು ನೆಡುವ ಜತೆಗೆ ಪಾದಚಾರಿಗಳಿಗೆ ಪ್ರತ್ಯೇಕ ನಡಿಗೆ ಪಥ ನಿರ್ಮಿಸುವ ಪ್ರಸ್ತಾಪವಿದೆ.

ಹೆಬ್ಬಾಳ ಫ್ಲೈ ಓವರ್ ವಿಸ್ತರಣೆ ಕಾರ್ಯ ಆರಂಭಿಸಿದ ಬಿಡಿಎಹೆಬ್ಬಾಳ ಫ್ಲೈ ಓವರ್ ವಿಸ್ತರಣೆ ಕಾರ್ಯ ಆರಂಭಿಸಿದ ಬಿಡಿಎ

ಸದ್ಯ ಜಂಕ್ಷನ್ ನ ನಾಲ್ಕೂ ಕಡೆ ವಾಹನಗಳ ಭರಾಟಡೆ ಹೆಚ್ಚಿದೆ. ಬಸ್ ನಿಲ್ದಾಣದಿಂದ ವಾಹನ ಸಂಚಾರ ಮತ್ತಷ್ಟು ಬಿಗಡಾಯಿಸಿದೆ. ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸುವುದರ ಜತೆಗೆ ಖಾಲಿ ಜಾಗದಲ್ಲೂ ಅನಧಿಕೃತ ನಿಲುಗಡೆ ಮಾಡಲಾಗುತ್ತಿದೆ. ಮೇಲು ರಸ್ತೆಯ ಕೆಳಗಿರುವ ಜಾಗದಲ್ಲೂ ದಿನವಿಡೀ ನಿಲುಗಡೆ ಮಾಡಲಾಗುತ್ತಿದೆ.

BDA planning mini park at Hebbal Fly over

ಸಂಜೆ ನಂತರ ಜನ ಸಂಚಾರ ಕಡಿಮೆಯಾಗುತ್ತಿದ್ದಂತೆ ನಿರ್ಜನ ಸ್ಥಳವಾಗಿ ಮಾರ್ಪಡುವ ಕಾರಣ ಅನೈತಿಕ ಚಟುವಟಿಕೆಗಗೆ ಅವಕಾಶವಾಗಿದೆ. ರಾತ್ರಿ 10 ನಂತರ ಕಳ್ಳರ ಕಾಟದಿಂದಾಗಿ ಜನರು ಜನರು ಸಂಕಷ್ಟಕ್ಕೆ ಒಳಗಾಗಿರುವುದರಿಂದ ಸೌಂದರ್ಯೀಕರಣ ಯೋಜನೆ ಅನಿವಾರ್ಯವಾಗಿದೆ.

ಸಮಸ್ಯೆಗೆ ಮುಕ್ತಿ? ಜಂಕ್ಷನ್ ಬಳಿ ಇರುವ ರೈಲು ಹಳಿಗೆ ಹೊಂದಿಕೊಂಡಿರುವ ಸುಮಾರು 10ಗುಂಟೆ ಜಾಗದಲ್ಲಿ ಕಿರು ಉದ್ಯಾನ ನಿರ್ಮಿಸಲಾಗುತ್ತಿದೆ. ಈ ಜಾಗಕ್ಕೆ ಅಭಿಮುಖವಾಗಿ ಪರಿವರ್ತಿಸಲಾಗುತ್ತಿದೆ. ಮತ್ತೊಂದು ಬದಿಯಿರುವ ಬಿಡಿಎ ಪಾರ್ಕ್ ಅನ್ನು ಪುನರ್ ನಿರ್ಮಿಸುವ ಪ್ರಸ್ತಾಪವಿದೆ. ಉದ್ಯಾನವಲ್ಲದೆ ಪಾದಚಾರಿಗಳು ನಿರಾತಂಕವಾಗಿ ಸಾಗಲು ಫೂಟ್ ಪಾತ್ ನಿರ್ಮಿಸಲಾಗುತ್ತದೆ.

ಸಿಸಿಟಿವಿ ಅಳವಡಿಕೆ: ಜನರ ಸುರಕ್ಷತೆಗೆ ಮತ್ತಷ್ಟು ಸಿಸಿಟಿವಿ ಅಳವಡಿಸಲು ಪೊಲೀಸರ ಮೊರೆ ಹೋಗಲಾಗುತ್ತಿದೆ. ರಾತ್ರಿ ವೇಳೆ ಏರ್ ಪೋರ್ಟ್ ಗೆ ಬಂದು ಹೋಗುವವರು ಈ ಸ್ಥಳದಲ್ಲಿ ಮಧ್ಯರಾತ್ರಿ ಸಂಚರಿಸುವುದರಿಂದ ಪೊಲೀಸ್ ಗಸ್ತು ಹಾಕಲು ಸೂಚಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

English summary
BDA is planning for construction of three mini parks at ringroad in Hebbal and around Hebbal Flyover which is notorious for traffic jam. The authority is identified open places for plantation through Airport road adjucent to Hebbal junction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X