• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

10ಲೇನ್ ರಸ್ತೆ ನಿರ್ಮಾಣಕ್ಕೆ 29 ಆಸ್ತಿ ಭೂಸ್ವಾಧೀನ: ಬಿಡಿಎ ಅಧಿಸೂಚನೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 05: ನಾಡಪ್ರಭು ಕೆಂಪೇಗೌಡ ಬಡಾವಣೆ ಮಾರ್ಗವಾಗಿ ಸಾಗುವ 10 ಲೇನ್ (ಆರ್ಟಿಯಲ್) ರಸ್ತೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಭೂಸ್ವಾಧೀನಕ್ಕೆ ಮುಂದಾಗಿದೆ. ಶನಿವಾರ 29ಆಸ್ತಿಗಳ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದೆ.

ನಾಡಪ್ರಭು ಕೆಂಪೇಗೌಡರ ವಿಚಾರಧಾರೆಗಳ ಹಾದಿಯಲ್ಲಿ ನಡೆಯುವ ಸಂಕಲ್ಪ: ಸಿಎಂ ಬೊಮ್ಮಾಯಿನಾಡಪ್ರಭು ಕೆಂಪೇಗೌಡರ ವಿಚಾರಧಾರೆಗಳ ಹಾದಿಯಲ್ಲಿ ನಡೆಯುವ ಸಂಕಲ್ಪ: ಸಿಎಂ ಬೊಮ್ಮಾಯಿ

ಸುಮಾರು ಎರಡು ವರ್ಷ ರಸ್ತೆ ಅಭಿವೃದ್ಧಿ ಗೊಂದಲಕ್ಕೆ ಸದ್ಯ ತೆರೆ ಬಿದ್ದಿದೆ. ಒಟ್ಟು 10.77 ಕಿಮೀ ರಸ್ತೆ ಪೂರ್ಣಗೊಳಿಸಲು ಅಗತ್ಯವಿರುವ 321 ಎಕರೆಗಳಲ್ಲಿ 69 ಅನ್ನು ಭೂಸ್ವಾಧೀನ ಇಲಾಖೆ ಸ್ವಾಧೀನಪಡಿಸಿಕೊಳ್ಳುವಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಎಂಜಿನಿಯರಿಂಗ್ ವಿಭಾಗವು 465 ಕೋಟಿ ರೂ.ಗಳ ಯೋಜನೆಯನ್ನು ಅರ್ಧಕ್ಕೆ ಬಿಟ್ಟಿತ್ತು.

ಈ ರಸ್ತೆ ಕಾರಿಡಾರ್ ಮೈಸೂರು ರಸ್ತೆ (ಆರ್‌ಆರ್ ವೈದ್ಯಕೀಯ ಕಾಲೇಜು) ಮತ್ತು ಮಾಗಡಿ ರಸ್ತೆ (ಕಡಬಗೆರೆ ವೃತ್ತ) ಸಂಪರ್ಕಿಸುತ್ತದೆ.

ಬೆಂಗಳೂರು ಅಭವಿದ್ಧ ಪ್ರಾಧಿಕಾರ (ಬಿಡಿಎ) ಭೂಸ್ವಾಧೀನಮಕ್ಕೆ ಮುಂದಾಗಿರುವ ಉದ್ದೇಶಿತ 29 ಆಸ್ತಿಗಳಲ್ಲಿ ವಿಐಪಿ ಟ್ರಸ್ಟ್‌ಗೆ ಸೇರಿದ ಸುಮಾರು ಎರಡು ಎಕರೆ ಜಮೀನು ಸಹ ಇದೆ. ಈ ಕಾರಣಕ್ಕೆ ರಸ್ತೆ ಕೆಲಸ ನಿಧಾನವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಹಿಂದೆ ನಡೆದ ರಾಜಾಜಿನಗರ ಶಾಸಕ ಎಸ್.ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆಯಲ್ಲಿ ಇದೇ ವಿಚಾರವಾಗಿ ಚರ್ಚೆಯು ಆಗಿದೆ.

ಸದ್ಯಕ್ಕೆ ಕೆಂಗೇರಿ ಮತ್ತು ಯಶವಂತಪುರ ಹೋಬಳಿಗಳಲ್ಲಿ (ಕಂಬಿಪುರ, ಚಲ್ಲಘಟ್ಟ, ಕೆ ಕೃಷ್ಣ ಸಾಗರ, ಭೀಮನಕುಪ್ಪೆ, ಕೊಮ್ಮಘಟ್ಟ, ಸೂಳಿಕೆರೆ ಮತ್ತು ಕೆಂಚನಾಪುರ) 26 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರ ಕುಟುಂಬಕ್ಕೆ ಸೇರಿದ ಪದ್ಮಶ್ರೀ ಚಾರಿಟಬಲ್ ಟ್ರಸ್ಟ್‌ನ ಎರಡು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಒಳಗೊಂಡಿದೆ. ಆಸ್ತಿಗಳ ವಿನಿಮಯದಲ್ಲಿ ಬಿಡಿಎ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡುವುದಾಗಿ ಭರವಸೆ ನೀಡಿದೆ.

BDA Issues Final Notification For Land Acquisition For 10 Line Road Construction

ಮೈಸೂರು ರಸ್ತೆಯಿಂದ ಸುಮಾರು 5 ಕಿಲೋ ಮೀಟರ್ ಕಾಮಗಾರಿ ಪೂರ್ಣಗೊಳಿಸಿರುವ ಬಿಡಿಎ ಮಾಗಡಿ ರಸ್ತೆಯತ್ತ ರಸ್ತೆ ಅಭಿವೃದ್ಧಿ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಂದಿನ 2023ರ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2018ರಲ್ಲೇ ಆರಂಭಗೊಂಡಿದ್ದ ಯೋಜನೆ

ನಾಲ್ಕು ವರ್ಷಗಳ ಹಿಂದೆ ಅಂದರೆ 2018ರ ಮಾರ್ಚ್‌ನಲ್ಲಿ ಯೋಜನೆ ಆರಂಭಕ್ಕೆ ಆದೇಶ ಮಾಡಲಾಯಿತು. ಆಗಸ್ಟ್ 2019 ರೊಳಗೆ ಯೋಜನೆ ಪೂರ್ಣಗೊಳಿಸುವ ಗುಡುವು ವಿಧಿಸಲಾಗಿತ್ತು. ಗುತ್ತಿಗೆ ಪಡೆದಿದ್ದ ನಿರ್ಮಾಣ ಸಂಸ್ಥೆ ಸ್ಟಾರ್ ಬಿಲ್ಡರ್ಸ್, ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ನಡೆದ ವಿಳಂಬ ಧೋರಣೆಯಿಂದ ಕಾಮಗಾರಿ ವೇಗ ಪಡೆಯಲಿಲ್ಲ ಎಂದು ಇತ್ತೀಚೆಗೆ ನಡೆದ ಸಭೆಯಲ್ಲಿ ಸಂಸ್ಥೆ ಆರೋಪಿಸಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆ ಸಮೀಪವೇ ಹಾದು ಹೋಗುವ ಈ ಉದ್ದೇಶಿತ 10ಲೇನ್ದ ರಸ್ತೆಯಲ್ಲಿ ಕಾವೇರಿ ನೀರು ಸರಬರಾಜು ಮಾರ್ಗವೂ ಹಾದು ಹೋಗಲಿದೆ. ಕಳೆದ 15 ದಿನಗಳಿಂದ ಬಡಾವಣೆಯ ವಿವಿಧ ಬಾಕಿ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸುತ್ತಿರುವ ಬಿಡಿಎ ಆಯುಕ್ತ ಜಿ.ಕುಮಾರ್ ನಾಯ್ಕ್ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

English summary
Bengaluru Development Authority (BDA) issued Final notification for Land Acquisition For 10 line road construction near Kempegowda layout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X