BDA Flat Mela 2024: ಬೆಂಗಳೂರಿನಲ್ಲಿ ಫ್ಲ್ಯಾಟ್ ಕೊಳ್ಳುವವರಿಗೆ ಸುವರ್ಣಾವಕಾಶ, ಬಿಡಿಎಯಿಂದ ಭರ್ಜರಿ ಆಫರ್
ಬೆಂಗಳೂರು, ಜೂನ್. 14: ಸಿಲಿಕಾನ್ ಸಿಟಿಯಲ್ಲಿ ಸ್ವಂತಕ್ಕೆ ಮನೆ ಕೊಳ್ಳುವುದು ಅದೆಷ್ಟೋ ಜನರ ಕನಸು. ಅಂತಹವರಿಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಫ್ಲ್ಯಾಟ್ ಮೇಳ ಆಯೋಜಿಸಿದೆ. ಜೂನ್ 15ರಂದು ಈ ಫ್ಲ್ಯಾಟ್ ಮೇಳದಲ್ಲಿ ಭಾಗವಹಿಸಿ ತಮ್ಮ ಕನಸಿನ ಮನೆಯನ್ನು ಖರೀದಿ ಮಾಡಬಹುದು.
ಚಂದ್ರಾ ಬಡಾವಣೆ (3 ಬಿ.ಹೆಚ್.ಕೆ) ಕಣಿಮಿಣಿಕೆ (2 ಬಿ.ಹೆಚ್.ಕೆ) ಮತ್ತು ಕೋನದಾಸಪುರ ಹಂತ-2 (2 ಬಿ.ಹೆಚ್.ಕೆ) ರಲ್ಲಿ ವಸತಿ ಸಮುಚ್ಛಯವನ್ನು ನಿರ್ಮಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಧಿಕಾರವು ಫ್ಲಾಟ್ ಮೇಳ ವನ್ನು ದಿನಾಂಕ 15.06.2024ರ ಬೆಳಗ್ಗೆ 9.00 ರಿಂದ ಸಂಜೆ 5:00 ರವರೆಗೆ ಕೋನದಾಸಪುರದ ವಸತಿ ಸಮುಚ್ಚಯದಲ್ಲಿ ಆಯೋಜಿಸಲಾಗಿದೆ ಎಂದು ಬಿಡಿಎ ಪ್ರಕಟಣೆ ಹೊರಡಿಸಿದೆ.

"ಈ ಮೇಳದಲ್ಲಿ ಭಾಗವಹಿಸಿ ಫ್ಲಾಟ್ ಗಳನ್ನು ಖರೀದಿಸಿ. ಸ್ಥಳದಲ್ಲಿಯೇ ಪ್ರಾರಂಭಿಕ ಠೇವಣಿಯನ್ನು ಪಾವತಿಸಿ, ಹಂಚಿಕೆ ಪತ್ರವನ್ನು ಸ್ವೀಕರಿಸಿ. ಹಂಚಿಕೆ ಪತ್ರವನ್ನು ಸ್ವೀಕರಿಸಿದ 10 ದಿನದೊಳಗೆ ಫ್ಲಾಟ್ ನ ಪೂರ್ಣ ಮೊತ್ತವನ್ನು ಪಾವತಿಸಿದ್ದಲ್ಲಿ ನಂತರದ 10 ದಿನಗಳೊಳಗಾಗಿ (10 Working Days) ಫ್ಲಾಟ್ ಅನ್ನು ನೋಂದಣಿ ಮಾಡಿಕೊಡಲಾಗುವುದು. ಕೋನದಾಸಪುರ ಹಂತ-2 ರ 'ಎಫ್' ಬ್ಲಾಕ್ ಹಂಚಿಕೆಗೆ ಲಭ್ಯವಿದ್ದು, ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗುವುದು" ಎಂದು ಮಾಹಿತಿ ನೀಡಿದೆ.
ನಾಗರಭಾವಿ ಚಂದ್ರಾಬಡಾವಣೆ (3BHK ಫ್ಲಾಟ್ ಗಳು ಲಭ್ಯ)
3 ಬಿಚ್‌ಕೆ ಮನೆಗಳನ್ನು ನಿರ್ಮಿಸಿದ್ದು, ಬೆಂಗಳೂರು ಹೊರವರ್ತುಲ ರಸ್ತೆಯ ಪಕ್ಕದಲ್ಲಿರುತ್ತದೆ. ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಸಮೀಪದಲ್ಲಿರುತ್ತದೆ. ಬಿಡಿಎ ಪ್ರತಿಷ್ಠಿತ ಬಡಾವಣೆ ಚಂದ್ರಾ ಬಡಾವಣೆಯಲ್ಲಿರುತ್ತದೆ. ಈ ವಸತಿ ಯೋಜನೆಯಲ್ಲಿ ಕೆಲವೇ ಫ್ಲಾಟ್‌ಗಳು ಮಾತ್ರ ಹಂಚಿಕೆಗೆ ಲಭ್ಯವಿರುತ್ತದೆ ಈ ಫ್ಲಾಟ್ಗಳು ವಾಸಯೋಗ್ಯವಾಗಿದೆ.
ಕಣಿಮಿಣಿಕೆ (2BHK ಫ್ಲಾಟ್ ಗಳು ಲಭ್ಯ)
ಹಂತ-2 ಮತ್ತು ಹಂತ-3 ಯೋಜನೆಯು 2 ಬಿಎಚ್‌ಕೆ ಫ್ಲಾಟ್‌ಗಳಾಗಿದ್ದು, ಹಂತ-4ರಲ್ಲಿ 3 ಬಿಎಚ್‌ಕೆ ಮನೆಗಳನ್ನು ನಿರ್ಮಿಸಲಾಗಿರುತ್ತದೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿದ್ದು, ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆಯ ಟೋಲ್ ಸಮೀಪವಿರುತ್ತದೆ. ಸಂಚಾರ ದಟ್ಟಣೆಯಿಂದ ಹೊರಗಿದ್ದು, ಸುತ್ತಮುತ್ತಲಿನ ಹಸಿರು ಪರಿಸರದಲ್ಲಿರುತ್ತದೆ. ಬೆಂಗಳೂರು ನ್ಯಾಯಾಂಗ ಬಡಾವಣೆಯ ಸಮೀಪದಲ್ಲಿರುತ್ತದೆ.

ಕೋನದಾಸಪುರ ಹಂತ-2 (2 BHK ಫ್ಲಾಟ್ ಗಳು ಲಭ್ಯ)
ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ 'F' Block ಹಂಚಿಕೆಗೆ ಲಭ್ಯತೆ. ಹಂತರ ಎರಡರಲ್ಲಿ 2 BHK ಯೋಜನೆಯು ಬೆಂಗಳೂರು ಭಾಗದಲ್ಲಿದ್ದು, ಬೆಂಗಳೂರು ಹಳೇ ಮದ್ರಾಸ್ ರಸ್ತೆಯ ಸಮೀಪದಲ್ಲಿರುತ್ತದೆ. ಈಗಾಗಲೇ ಕಾಮಗಾರಿಯು ಪೂರ್ಣಗೊಂಡು ಹಂಚಿಕೆಗೆ ಲಭ್ಯವಿರುತ್ತದೆ. ಈ ಫ್ಲಾಟ್ಗಳು ವಾಸಿಸಲು ಸಿದ್ಧವಾಗಿದೆ.
1 BHK ಫ್ಲಾಟ್‌ಗಳು ರೂ. 11.20 ಲಕ್ಷ ರಿಂದ 13.20 ಲಕ್ಷ ದರದಲ್ಲಿ ಆಲೂರು, ಗುಂಜೂರು ಮತ್ತು ಇತರೆ ಬಡಾವಣೆಗಳಲ್ಲಿ ಲಭ್ಯವಿರುತ್ತದೆ. ಫ್ಲ್ಯಾಟ್‌ಗಳನ್ನು ಕೊಳ್ಳಲು ಸಾಲ ಸೌಲಭ್ಯಕ್ಕಾಗಿ ಬ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿಬೇಕಾದ ಸಂಖ್ಯೆಗಳು
ಸಹಾಯಕ ಕಾರ್ಯಪಾಲಕ ಅಭಿಯಂತರರು (ಕೋನದಾಸಪುರ) 9900055612, ಸಹಾಯಕ ಕಾರ್ಯಪಾಲಕ ಅಭಿಯಂತರರು (ಕಣಿಮಿಣಿಕೆ ) 9900055612, ಸಹಾಯಕ ಕಾರ್ಯಪಾಲಕ ಅಭಿಯಂತರರು (ನಾಗರಬಾವಿ, ಚಂದ್ರಾ ಲೇಔಟ್) 9448833216, ಆನ್‌ಲೈನ್ ಸಹಾಯಕ್ಕಾಗಿ 9353323821, ಹಂಚಿಕೆಯ ಮಾಹಿತಿಗಾಗಿ 8747877469 ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ www.housing.bdabangalore.org ಮತ್ತು www.bda.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.












Click it and Unblock the Notifications