• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಳಗಾಳ ಬಿಡಿಎ ಫ್ಲ್ಯಾಟ್ ದರ ಅಕ್ಟೋಬರ್‌ನಿಂದ 2 ಲಕ್ಷ ತುಟ್ಟಿ

|

ಬೆಂಗಳೂರು, ಸೆ.28: ಬಿಡಿಎ ಮಾಳಗಾಳದಲ್ಲಿ ನಿರ್ಮಿಸಿರುವ ಫ್ಲ್ಯಾಟ್ ದರ ಅಕ್ಟೋಬರ್ ಮೊದಲ ವಾರದಿಂದ 2 ಲಕ್ಷ ಹೆಚ್ಚಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ ಅಂತ್ಯದವರೆಗೆ ಮಾತ್ರ ಅದೇ ದರ ಮುಂದುವರೆಯಲಿದೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಎರಡು ವರ್ಷಗಳ ಹಿಂದೆ 2 ಬಿಎಚ್ ಕೆ ಫ್ಲ್ಯಾಟ್ ಗೆ 40 ಲಕ್ಷ ನಿಗದಿಪಿಡಸಲಾಗಿತ್ತು, ಆ ವೇಳೆ ಎಲ್ಲಾ ಹಣವನ್ಉ ಕಟ್ಟಿ ಫ್ಲ್ಯಾಟ್ ಖರೀದಿಸಿದವರು ಹಲವಾರು ಮಂದಿ ಇದ್ದಾರೆ, ಇದೀಗ ಅದೇ ದರದಲ್ಲಿ ಹೊಸ ಗ್ರಾಹಕರಿಗೆ ಫ್ಲ್ಯಾಟ್ ಮಾರಾಟ ಮಾಡಿದರೆ ಅನ್ಯಾಯ ಮಾಡಿದಂತಾಗುತ್ತದೆ ಎನ್ನುವ ಉದ್ದೇಶದಿಂದ ಒಂದರಿಂದ ಎರಡು ಲಕ್ಷ ರೂ ಹಣವನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ.

ಸೈಟ್ ಸಿಗದಿದ್ದರೂ ಠೇವಣಿ ವಾಪಸ್ ಖಾತ್ರಿ ಕೊಟ್ಟ ಬಿಡಿಎ

ಬಿಡಿಎ ನಾಗರಭಾವಿ ಭಾಗದ ಮಾಳಗಾಲದಲ್ಲಿ 2015ರಲ್ಲಿ 360 ಫ್ಲ್ಯಾಟ್ ಗಳನ್ನು ನಿರ್ಮಾಣ ಮಾಡಿತ್ತು. 2 ಬಿಎಚ್‌ಕೆ ಕಟ್ಟಡ ವಿಸ್ತೀರ್ಣ 1150 ಚದರ ಅಡಿ ಅಡಿಗಳಿದ್ದು, ಅಂದು ಪ್ರತಿ ಫ್ಲ್ಯಾಟ್ ಗೆ 40 ಲಕ್ಷ ನಿಗದಿಪಡಿಸಲಾಗಿತ್ತು.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಎರಡು ವರ್ಷಗಳ ಹಿಂದೆ ಸಂಪೂರ್ಣವಾಗಿ ಹಣ ಕಟ್ಟಿರುವವರಿಗೂ ಈಗ ಕಟ್ಟುವವರಿಗೂ ಒಂದೇ ದರ ಕೊಟ್ಟಂತೆ ಆಗುತ್ತದೆ ಎನ್ನುವುದು ಬಿಡಿಎ ಅಧಿಕಾರಿಗಳ ಮಾತಾಗಿದೆ.

ಬಿಡಿಎ ಮನೆ ಖರೀದಿಸುವವರಿಗೆ ಬಂಪರ್ ಆಫರ್ ಘೋಷಿಸಿದ ಡಿಸಿಎಂ

ಮಾಳಗಾಲದ ಫ್ಲ್ಯಾಟ್ ಖರೀದಿಗೆ ಅರ್ಜಿ ಸಲ್ಲಿಸುವವರು ಆರಂಭಿಕ ಠೆವಣಿಯಾಗಿ ಹಿಂದುಳಿದ 2ಎ, 2 ಬಿ ಹಾಗೂ ಸಾಮಾನ್ಯ ವರ್ಗದವರು 5 ಲಕ್ಷ ಹಾಗೂ ಎಸ್ಸಿ, ಎಸ್ಟಿ ಪ್ರವರ್ಗ 1 ಅರ್ಜಿ ದಾರರು 2 ಲಕ್ಷ ಪಾವತಿಸಬೇಕಾಗಿತ್ತು.

English summary
Bangalore development authority has decided to increase Rs2 lakhs for flat at Malagala from October 1. After this each flat cost will be increased from Rs 40 lakhs to Rs42 lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X