ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಸ್ಕ್ ಧರಿಸಿಲ್ಲ ಅಂದ್ರೆ ದಂಡ: ಬಿಬಿಎಂಪಿ ಸಂಗ್ರಹಿಸಿದ ಒಟ್ಟು ಹಣ ಎಷ್ಟು?

|
Google Oneindia Kannada News

ಬೆಂಗಳೂರು, ಮೇ 22: ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಪ್ರಮುಖ. ಬೆಂಗಳೂರಿನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿತ್ತು. ಒಂದು ವೇಳೆ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ ಅಂತವರಿಗೆ ದಂಡ ಹಾಕಲಾಗುತ್ತಿದೆ.

Recommended Video

BMTC ಯಲ್ಲಿ ಓಡಾಡೋಕೆ ಈ ನಿಯಮ ಅನುಸರಿಸಲೇ ಬೇಕು..? | Rules & Regulation

ಮೇ 2ರಿಂದ ಬಿಬಿಎಂಪಿ ದಂಡ ಹಾಕುತ್ತಿದ್ದು, ಮೊದಲ ಮೂರು ದಿನ ಒಂದು ಸಾವಿರ ರೂಪಾಯಿ ದಂಡ ಸಂಗ್ರಹಿಸಲಾಯಿತು. ಬಳಿಕ, ದಂಡದ ಬೆಲೆಯಲ್ಲಿ ಇಳಿಕೆ ಮಾಡಿಕೊಂಡಿತ್ತು. 1000 ರೂಪಾಯಿಯಿಂದ 200 ರೂಪಾಯಿ ನಿಗದಿ ಮಾಡಿತ್ತು.

ಮಾಸ್ಕ್ ಧರಿಸುವುದು ಕಡ್ಡಾಯ; ದಂಡದ ಮೊತ್ತ ಇಳಿಸಿದ ಬಿಬಿಎಂಪಿಮಾಸ್ಕ್ ಧರಿಸುವುದು ಕಡ್ಡಾಯ; ದಂಡದ ಮೊತ್ತ ಇಳಿಸಿದ ಬಿಬಿಎಂಪಿ

ಇದೀಗ, ಮಾಸ್ಕ್ ಹಾಕದ ನಾಗರಿಕರಿಂದ ಬಿಬಿಎಂಪಿ ಒಟ್ಟು ಎಷ್ಟು ದಂಡ ಸಂಗ್ರಹಿಸಿದೆ ಎಂಬ ವಿಷಯವನ್ನು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಬಹಿರಂಗಪಡಿಸಿದ್ದಾರೆ. ಬೆಂಗಳೂರಿನಲ್ಲಿ ಯಾವ ವಲಯದಲ್ಲಿ ಹೆಚ್ಚು ದಂಡ ಹಾಕಲಾಗಿದೆ ಎಂದು ಕೂಡ ಮಾಹಿತಿ ಬಿಟ್ಟುಕೊಟ್ಟಿದ್ದಾರೆ.

ಒಟ್ಟು ಸಂಗ್ರಹಿಸಿದ ದಂಡ ಎಷ್ಟು?

ಒಟ್ಟು ಸಂಗ್ರಹಿಸಿದ ದಂಡ ಎಷ್ಟು?

ಬೆಂಗಳೂರಿನ ಒಟ್ಟು ಏಂಟು ವಲಯಗಳಿಂದ ಮಾಸ್ಕ್ ಧರಿಸದ ಕಾರಣಕ್ಕಾಗಿ 1715 ಜನರಿಗೆ ದಂಡ ಹಾಕಲಾಗಿದೆ. ಮೇ 5ನೇ ತಾರೀಕಿನಿಂದ ಮೇ 21ನೇ ತಾರೀಕಿನವರೆಗು ಮಾಸ್ಕ್ ಹಾಕದ ವ್ಯಕ್ತಿಗಳಿಂದ ಒಟ್ಟು 3,43,000 ಹಣವನ್ನು ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಪೂರ್ವ ವಲಯದಲ್ಲಿ ಹೆಚ್ಚು

ಬೆಂಗಳೂರು ಪೂರ್ವ ವಲಯದಲ್ಲಿ ಹೆಚ್ಚು

ಬೆಂಗಳೂರಿನ ಏಂಟು ವಲಯಗಳ ಪೈಕಿ ಪೂರ್ವ ವಲಯದಲ್ಲಿ ಹೆಚ್ಚು ದಂಡ ಸಂಗ್ರಹಣೆ ಆಗಿದೆ. 1,16,800 ರೂಪಾಯಿ ಪೂರ್ವ ವಲಯದಲ್ಲಿ ವಸೂಲಿ ಮಾಡಲಾಗಿದೆ. ಪಶ್ಚಿಮ ವಲಯದಲ್ಲಿ 46,200, ದಕ್ಷಿಣ ವಲಯದಲ್ಲಿ 36,400, ಮಹಾದೇವಪುರ ವ್ಯಾಪ್ತಿ 55,400, ಆರ್ ಆರ್ ನಗರ ವ್ಯಾಪ್ತಿ 39,200, ಯಲಹಂಕ ವ್ಯಾಪ್ತಿ 8,400, ದಾಸರಹಳ್ಳಿ ವ್ಯಾಪ್ತಿ 19,400 ಹಾಗೂ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 21,200 ರೂಪಾಯಿ ಸಂಗ್ರಹ ಮಾಡಲಾಗಿದೆ.

ಮಾಸ್ಕ್ ಧರಿಸದ ವ್ಯಕ್ತಿಗಳಿಂದ ಬಿಬಿಎಂಪಿ ಸಂಗ್ರಹಿಸಿದ ದಂಡ ಎಷ್ಟು?ಮಾಸ್ಕ್ ಧರಿಸದ ವ್ಯಕ್ತಿಗಳಿಂದ ಬಿಬಿಎಂಪಿ ಸಂಗ್ರಹಿಸಿದ ದಂಡ ಎಷ್ಟು?

1000 ದಂಡ ಇದ್ದಾಗ ಎಷ್ಟು ಸಂಗ್ರಹ ಆಗಿತ್ತು?

1000 ದಂಡ ಇದ್ದಾಗ ಎಷ್ಟು ಸಂಗ್ರಹ ಆಗಿತ್ತು?

ಮೇ 2 ರಿಂದ ಮೇ 4ರವರೆಗೂ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಮಾಸ್ಕ್ ಧರಿಸದೆ ಇದ್ದರೆ 1000 ರೂಪಾಯಿ ದಂಡ ಸಂಗ್ರಹಿಸಲಾಯಿತು. ಮೊದಲ ದಿನ 51,700 ರೂಪಾಯಿ, ಎರಡನೇ ದಿನ 98,350 ರೂಪಾಯಿ ಹಾಗೂ ಮೂರನೇ ದಿನ 89,455 ಸಾವಿರ ದಂಡ ಸಂಗ್ರಹಿಸಲಾಗಿತ್ತು. ಮೂರು ದಿನಗಳಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಂದ ಒಟ್ಟು 2,39,505 ರೂಪಾಯಿ ದಂಡವನ್ನು ಬಿಬಿಎಂಪಿ ಸಂಗ್ರಹಿಸಿದೆ.

ಬೆಂಗಳೂರಿನಲ್ಲಿ ಒಟ್ಟು ಕೊರೊನಾ ವೈರಸ್ ಕೇಸ್ ಎಷ್ಟು?

ಬೆಂಗಳೂರಿನಲ್ಲಿ ಒಟ್ಟು ಕೊರೊನಾ ವೈರಸ್ ಕೇಸ್ ಎಷ್ಟು?

ಬೆಂಗಳೂರಿನಲ್ಲಿ ಇದುವರೆಗೂ 256 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. 124 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 124 ಜನರು ಕ್ವಾರಂಟೈನ್ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಿಲಿಕಾನ್‌ ಸಿಟಿಯಲ್ಲಿ ಒಟ್ಟು 9 ಜನರು ಸಾವನ್ನಪ್ಪಿದ್ದಾರೆ.

English summary
The Govt of Karnataka has fixed Rs 200 as fine for not wearing masks/face coverings in public places. till today bbmp has collect 3.4 lakh fine from citizens of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X