ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರಿ ಮಳೆ ಮುನ್ಸೂಚನೆ ಇದ್ದರೂ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿಲ್ಲ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ಬೆಂಗಳೂರಲ್ಲಿ ಕಳೆದ ಎರಡು ದಿನಗಳಿಂದ ಮಳೆ ಆರಂಭವಾಗಿದೆ, ಸೆಪ್ಟೆಂಬರ್ ಅಂತ್ಯದವರೆಗೂ ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೇವಲ ಮಳೆಯಲ್ಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಮುಂಗಾರು ಆರಂಭಕ್ಕೂ ಮುನ್ನವೇ ಸಾಕಷ್ಟು ಮಳೆಯಾಗಿದ್ದರಿಂದ ನಗರದ ರಸ್ತೆಗಳು ಹಾಳಾಗಿದ್ದವು, ಮನೆಗಳಿಗೆ ನೀರು ನುಗ್ಗಿ ಅನಾಹುತವನ್ನು ಸೃಷ್ಟಿ ಮಾಡಿದ್ದವು, ಮರಗಳು ಧರೆಗುರುಳಿದ್ದವು, ಚರಂಡಿಯಲ್ಲಿ ನೀರು ಹೋಗಲು ಜಾಗ ಸಾಕಾಗದೆ ತುಂಬಿ ರಸ್ತ ತುಂಬೆಲ್ಲಾ ಹರಿದಿತ್ತು, ಆದರೂ ಬಿಬಿಎಂಪಿ ಎಚ್ಚೆತ್ತುಕೊಂಡಿರಲಿಲ್ಲ.

ಭಾನುವಾರದ ಸುತ್ತಾಟಕ್ಕೆ ತಡೆ ಹಾಕಿದ ಬೆಂಗಳೂರು ಮಳೆ ಭಾನುವಾರದ ಸುತ್ತಾಟಕ್ಕೆ ತಡೆ ಹಾಕಿದ ಬೆಂಗಳೂರು ಮಳೆ

ಮಳೆ ಕಡಿಮೆಯಿದ್ದಿದ್ದರಿಂದ ಕಳೆದ ವರ್ಷ ಆದಷ್ಟು ಹಾನಿಯಾಗಿಲ್ಲ, ಆದರೆ ಸೆಪ್ಟೆಂಬರ್ ನಲ್ಲಿ ಮುಂಗಾರು ಚುರುಕುಗೊಳ್ಳವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈಗ ಪ್ರತಿದಿನ ಸಂಜೆ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ಒಂದೊಂದೆ ಸಮಸ್ಯೆಗಳು ಎದುರಾಗುತ್ತಿದೆ.

BBMP yet to get ready to face heavy rain in Bengaluru

ನಿತ್ಯ ಸುರಿಯುತ್ತಿರುವ ಮಳೆಗೆ ರಸ್ತೆಗಳಲ್ಲಿ ಮೂರ್ನಾಲ್ಕು ಅಡಿಗಳವರೆಗೆ ನೀರು ನಿಲ್ಲುವುದು, ಗುಂಡಿಗಳಲ್ಲಿ ನೀರು ಹೊರಗೆ ಬಂದು ಹರಿಯುವುದೂ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ.

ಬೆಂಗಳೂರಿಗೆ ಮತ್ತೆ ಮರಳಿದ ಮಳೆರಾಯ, ಮೂರು ದಿನ ಮಳೆಯೋ ಮಳೆ ಬೆಂಗಳೂರಿಗೆ ಮತ್ತೆ ಮರಳಿದ ಮಳೆರಾಯ, ಮೂರು ದಿನ ಮಳೆಯೋ ಮಳೆ

ಮಳೆ ಹೆಚ್ಚಾಗುತ್ತಿರುವ ಸಾಧ್ಯತೆ ಇರುವುದರಿಂದ ಸುರಕ್ಷತಾ ಕಾಮಗಾರಿಗಳು ನಡೆಯದಿದ್ದರೆ ಅನಾಹುತಗಳು ಸಂಭವಿಸಬಹುದು.

English summary
Thunderstorms and heavy rain is back in Bengaluru, potholes in roads and falling old trees have hitting traffic as BBMP yet to get prepared for the situation to face.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X