ಬೆಂಗಳೂರು ರಸ್ತೆಗಳು ಬಾಯಿ ತೆರೆದಿವೆ: ಸಾವಿರಾರು ರಸ್ತೆಗುಂಡಿ ಬಾಕಿ ಇವೆ

Recommended Video

      ಬೆಂಗಳೂರಿನ ರಸ್ತೆಗಳಲ್ಲಿ ಬಾಯಿ ತೆರೆದು ಕೂತಿವೆ ಗುಂಡಿಗಳು | ಇನ್ನು ಸಾವಿರ ಗುಂಡಿಗಳು ಮುಚ್ಚಲು ಬಾಕಿ

      ಬೆಂಗಳೂರು, ಆಗಸ್ಟ್ 23: ಬೆಂಗಳೂರಲ್ಲಿ ಇನ್ನೂ ಸಾವಿರ ಗುಂಡಿಗಳನ್ನು ಮುಚ್ಚುವ ಕಾರ್ಯ ಬಾಕಿ ಇದೆ. ಮಳೆಗಾಲದ ಆರಂಭದಲ್ಲಿ ಕಳೆದ ಎರಡು ತಿಂಗಳ ಹಿಂದೆಯೇ ಬಿಬಿಎಂಪಿ ಗುಂಡಿ ಮುಚ್ಚುವ ಕಾರ್ಯವನ್ನು ಆರಂಭಿಸಿತ್ತು. ಇದೀಗ ಮಳೆಯೂ ಕಡಿಮೆ ಇದೆ, ಗುಂಡಿ ಮುಚ್ಚುವ ಕಾರ್ಯವೂ ಅರ್ಧಕ್ಕೇ ನಿಂತಿದೆ.

      ಬಿಬಿಎಂಪಿಯ ಈ ನಿರ್ಲಕ್ಷ್ಯದಿಂದ ನಗರದಲ್ಲಿ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚುತ್ತಿದೆ. ಒಂದು ಕಡೆಯಿಂದ ಗುಂಡಿಗಳನ್ನು ಮುಚ್ಚುತ್ತಾ ಬಂದರೆ, ಇನ್ನೊಂದು ಕಡೆಯಿಂದ ಒಂದು ಮಳೆ ಬಂದರೆ ಸಾಕು ರಸ್ತೆಯಲ್ಲಿ ಗುಂಡಿ ಉದ್ಭವವಾಗುತ್ತದೆ ಇದರಿಂದಲೇ ಆ ಕಾಮಗಾರಿಯ ಗುಣಮಟ್ಟ ಅರ್ಥವಾಗುತ್ತದೆ.

      ಬಿಬಿಎಂಪಿ ಮಾತ್ರ ಈವರೆಗೆ 20 ಸಾವಿರ ಗುಂಡಿ ಮುಚ್ಚಿದ್ದೇವೆ ಇನ್ನು ಸಾವಿರ ಗುಂಡಿಗಳು ಬಾಕಿ ಇದೆ ಎಂದು ಹೇಳುತ್ತಿವೆ. ಆದರೆ ರಸ್ತೆ ಗುಂಡಿಗಳು ಮಾತ್ರ ಕಡಿಮೆಯಾಗುತ್ತಿಲ್ಲ, ಮೈಸೂರು ರಸ್ತೆ, ನಾಯಂಡಹಳ್ಳಿ, ನಾಗರಭಾವಿ, ಉತ್ತರಹಳ್ಳಿ ಕೆಂಗೇರಿ ಮುಖ್ಯರಸ್ತೆ, ಕೆಆರ್ ಪುರದಲ್ಲಿ ಸಾಕಷ್ಟು ಗುಂಡಿಗಳು ಹಾಗೆ ಉಳಿದಿವೆ.

      BBMP yet to fill more than thousand potholes in Bengaluru

      ಬಿಬಿಎಂಪಿ ಹೇಳುವ ಪ್ರಕಾರ ಈವರೆಗೆ ಈವರೆಗೆ 21,321 ಗುಂಡಿಗಳು ಕಾಣಿಸಿಕೊಂಡಿದ್ದು, 20,181 ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನು 1,140ಗುಂಡಿಗಳನ್ನು ಮುಚ್ಚುವುದು ಮಾತ್ರ ಬಾಕಿ ಉಳಿದಿದೆ. ನಗರದ ರಸ್ತೆಗಳಲ್ಲಿ 19ಸಾವಿರ ಗುಂಡಿಗಳು ಕಾಣಿಸಿಕೊಂಡಿದೆ.

      ಅವುಗಳನ್ನ ಇನ್ನೊಂದು ತಿಂಗಳಲ್ಲಿ ಮುಚ್ಚಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಹೇಳಿದಂತೆ ಒಂದೇ ತಿಂಗಳಲ್ಲಿ ಬರೋಬ್ಬರಿ ಎರಡು ಸಾವಿರ ಗುಂಡಿಗಳು ಹೆಚ್ಚಾಗಿವೆ.

      ಒಂದು ಮಳೆ ಬಂದರೆ ಅಥವಾ ಭಾರಿ ವಾಹನಗಳು ಓಡಾಡಿದಾಕ್ಷಣ ರಸ್ತೆ ಗುಂಡಿಗಳು ಸೃಷ್ಟಿಯಾಗುತ್ತವೆ ಎಂದರೆ ರಸ್ತೆಯ ಕಾಮಗಾರಿ ಎಷ್ಟು ಕಳಪೆಯದ್ದಾಗಿದೆ ಎಂಬುದ ಕುರಿತು ಆಲೋಚಿಸಬೇಕಿದೆ.

      ಇನ್ನು ಒಂದು ತಿಂಗಳಲ್ಲಿ ಒಂದು ಸಾವಿರ ರಸ್ತೆಗುಂಡಿಗಳನ್ನು ಮುಚ್ಚುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅಷ್ಟರೊಳಗೆ ಇನ್ನೆಷ್ಟು ಗುಂಡಿಗಳು ಸೃಷ್ಟಿಯಾಗಬಹುದು ಎನ್ನುವುದು ಆಲೋಚಿಸುವ ವಿಚಾರವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+