ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಲಸ ಕಾಯಂಗೆ ಆಗ್ರಹಿಸಿ ಬಿಬಿಎಂಪಿ ನೌಕರರಿಂದ ಮುಷ್ಕರ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 07: ಕೆಲಸ ಕಾಯಂಗೆ ಆಗ್ರಹಿಸಿ ಬಿಬಿಎಂಪಿ ನೌಕರರು ಹಾಗೂ ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿರುವ ಕಾರಣ ಪಾಲಿಕೆ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಏಕಾಏಕಿ 15 ಸಾವಿರ ಪೌರಕಾರ್ಮಿಕರು, 10 ಸಾವಿರ ಕಸ ವಿಲೇವಾರಿ ಕಾರ್ಮಿಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಕಾರ್ಮಿಕರಿಗೆ ನೇರವಾಗಿ ವೇತನ ನೀಡುವಂತೆ ಒತ್ತಾಯಿಸಲಾಗಿದೆ. ಅದರಲ್ಲಿ ಪೌರಕಾರ್ಮಿಕರು, ಸೂಪರ್‌ವೈಸರ್, ಆಟೋ-ಟಿಪ್ಪರ್, ಕಾಂಪ್ಯಾಕ್ಟರ್ ಕೂಡ ಸೇರಿದೆ.

ಈ ಕುರಿತು ಆಯುಕ್ತ ಗೌರವ್ ಗುಪ್ತ ಮಾತನಾಡಿದ್ದು, ಈಗಾಗಲೇ ಹಲವು ಬೇಡಿಕೆಗಳನ್ನು ಈಡೇರಿಸಲಾಗಿದೆ. ಇದರಲ್ಲಿ ಕೆಲವು ಹೊಸ ಬೇಡಿಕೆಗಳಿವೆ, ನಿತ್ಯದ ಕೆಲಸಗಳಿಗೆ ತೊಂದರೆ ಮಾಡದೆ ನಮ್ಮ ಬಳಿ ಬಂದು ಚರ್ಚಿಸಿ ಎಂದು ಅವರ ಬಳಿ ಕೇಳಿದ್ದೇವೆ ಎಂದರು.

 BBMP Workers Strike Service Hit As Staff Strike Work

ರಾಜ್ಯದಲ್ಲಿರುವ ಎಲ್ಲಾ ಪೌರಕಾರ್ಮಿಕರನ್ನು ಕಾಯಂ ಮಾಡುವಂತೆ ಒತ್ತಾಯಿಸಿ ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಕಾಯಂ ಮಾಡದಿದ್ದರೆ ಮುಂದಿನ ತಿಂಗಳು ಅನಿರ್ದಿಷ್ಟಾವಧಿ ಧರಣಿ ಮಾಡುತ್ತೇವೆ ಎಂದು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಹೇಳಿಕೆ ನೀಡಿದ್ದಾರೆ.

ಸುಮಾರು 16 ಸಾವಿರ ಪೌರಕಾರ್ಮಿಕರನ್ನು ಕಾಯಂ ನೇಮಕಾತಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಪೌರಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿದ ಪೌರಕಾರ್ಮಿಕರು, ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ವೃಂದ ಮತ್ತು ನೇಮಕಾತಿ ನಿಯಾಮಾಳಿಗಳನ್ವಯ 5219 ಹುದ್ದೆಗಳಿಗೆ ಮಂಜೂರು ವಿಚಾರವಾಗಿ ಕರ್ತವ್ಯ ಬಹಿಷ್ಕರಿಸಿ ಮುಷ್ಕರ ಮಾಡಲು ಪಾಲಿಕೆ ನೌಕರರು ನಿರ್ಧಾರ ಮಾಡಿದ್ದಾರೆ. ಕೇಂದ್ರ ಕಚೇರಿ ಸೇರಿ 198 ವಾರ್ಡ್ ನೌಕರರು ಮುಷ್ಕರಕ್ಕೆ ಬೆಂಬಲ ನೀಡಿದ್ದು, ಮೂವರ ಕೆಲಸ ಒಬ್ಬ ನೌಕರನ‌ ಮೇಲೆ ಬಿದ್ದಿದೆ.

ಮಾರ್ಚ್​ನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಕಳೆದ 6 ತಿಂಗಳಿಂದ ಬಿಬಿಎಂಪಿ ಪೌರಕಾರ್ಮಿಕರಿಗೆ ವೇತನ ನೀಡದೆ ತಾತ್ಸಾರ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಕಾರ್ಮಿಕರು ಬೆಂಗಳೂರಿನ ಗುತ್ತಿಗೆದಾರರ ಮನೆ ಮುಂದೆ ಧರಣಿ ನಡೆಸಿದ್ದರು. ಗುತ್ತಿಗೆದಾರರಾದ ಹರ್ಷವರ್ಧನ್ ರೆಡ್ಡಿ ಮನೆ ಮುಂದೆ ಕಾರ್ಮಿಕರು ಧರಣಿ ನಡೆಸಿದ್ದರು. ​ಸಂಬಳ ಕೊಡಿ, ಮನೆಯಿಂದ ಹೊರಗೆ ಹೋಗಿ ಎಂದು ಹರ್ಷವರ್ಧನ್​ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು.

ಇಂದು ಪೌರಕಾರ್ಮಿಕರ ಪ್ರತಿಭಟನೆ ಹಿನ್ನಲೆ ಬೆಂಗಳೂರಿನ ಮನೆ ಮನೆಯಿಂದ ಕಸ ಸಂಗ್ರಹಣೆ, ಕಸ ಗುಡಿಸುವ ಕೆಲಸ ಬಂದ್ ಆಗಿದೆ. ಅಲ್ಲದೆ ಪೌರಕಾರ್ಮಿಕರು ಬಿಬಿಎಂಪಿ ಆವರಣವನ್ನು ಸ್ವಚ್ಛಗೊಳಿಸದೆ ಧರಣಿ ನಡೆಸಿದ್ದಾರೆ. ಇತ್ತ ಶಾಸಕರು, ಸಚಿವರ ಮನೆಯಿಂದ ಕೂಡ ಕಸ ಸಂಗ್ರಹ ಮಾಡದೆ, 16 ಸಾವಿರ ಜನ ಪೌರಕಾರ್ಮಿಕರು, 10 ಸಾವಿರ ಕಸದ ಆಟೋ-ಟಿಪ್ಪರ್ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.

Recommended Video

ಮೋದಿ ಫೋಟೋ ಶೇರ್ ಮಾಡಿ ಇಂಗ್ಲೆಂಡ್ ಕಾಲೆಳೆದ ವೀರೇಂದ್ರ ಸೆಹ್ವಾಗ್ | Oneindia Kannada

170 ಜನ ಗುತ್ತಿಗೆ ಆಧಾರದ ಪೌರಕಾರ್ಮಿಕರಿಗೆ ವೇತನ ನೀಡದೆ ಸತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಸ್​ಆರ್​ಪಿ ಕಂಪನಿ ಗುತ್ತಿಗೆದಾರ ಹರ್ಷವರ್ಧನ್ ವಿರುದ್ಧ ಧರಣಿ ನಡೆಸಲಾಗಿದೆ. 6 ತಿಂಗಳ ಸಂಬಳ ನೀಡದೇ ಅಲೆಸುತ್ತಿರುವ ಪಾಲಿಕೆ ಹಾಗೂ ಗುತ್ತಿಗೆದಾರರ ಮೇಲೆ ಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ.

English summary
As it prepares for the festive weekend, the BBMP was shaken by the sudden protest by thousands of civic workers and garbage vehicles pressing on with their demands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X